ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನಲ್ಲಿ ಯಲ್ಲಾಪುರ (Yallapur) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ವಿ.ಎಸ್ ಪಾಟೀಲ್ ಅವರ ಪುತ್ರನನ್ನು (son) ಮುಂಡಗೋಡ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿ ಬಾಪುಗೌಡ ಪಾಟೀಲ್ ಎಂದು ತಿಳಿದು ಬಂದಿದೆ.
ಮುಂಡಗೋಡ ಅರಣ್ಯ ಇಲಾಖೆಯ (Forest department) ಐಬಿಯಲ್ಲಿ 2011ರಲ್ಲಿ ಕುಡಿದ ಮತ್ತಿನಲ್ಲಿ 15 ಜನರ ಜೊತೆ ಸೇರಿ ಶಾಸಕರ ಪುತ್ರ, ಎಎಸ್‌ಐ ಬಾಲಕೃಷ್ಣ ಪಾಲೇಕರ್ ಮೇಲೆ ಹಲ್ಲೆ (accused) ನಡೆಸಿದ್ದರು.
ಅಲ್ಲದೇ ಚೆಕ್ ಬೌನ್ಸ್ ಪ್ರಕರಣ (check bounce case) ಸೇರಿ ಬಾಪು ಗೌಡ ಪಾಟೀಲ್ ವಿರುದ್ದ ಸೆಕ್ಷನ್ 353, 141,143, 147, 323, 353, 504, 506,149 ಅಡಿ ಪ್ರಕರಣ ಸಹ ದಾಖಲಾಗಿತ್ತು.
ಇನ್ನು ನ್ಯಾಯಾಲಯಕ್ಕೆ ಹಾಜರಾಗದೇ ಕಳೆದ 6 ತಿಂಗಳಿಂದ ತಲೆಮರೆಸಿಕೊಂಡು (hiding) ಸುತ್ತಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಅಧಿಕಾರಿ ಮೇಲೆ ಹಲ್ಲೆ ಮತ್ತು ಹಣದ ವಂಚನೆಯ ಪ್ರಕರಣದಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಸದ್ಯ ಬಾಪುಗೌಡನನ್ನು ಮುಂಡಗೋಡಿನಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನ (Judicial custody) ವಿಧಿಸಲಾಗಿದೆ. ಆರೋಪಿಯನ್ನು ಶಿರಸಿ ಜೈಲಿಗೆ ಕಳುಹಿಸಲಾಗಿದೆ.