Saturday, July 13, 2024
spot_img
spot_img
spot_img
spot_img
spot_img
spot_img

ಮುಂಬೈನಿಂದ ಅಯೋಧ್ಯೆವರೆಗೆ ಪಾದಯಾತ್ರೆ ಕೈಗೊಂಡ ಮುಸ್ಲಿಂ ಯುವತಿ ; ಜ್ಞಾನವಾಪಿ ಬಗ್ಗೆ ಹೇಳಿದ್ದೇನು.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾದೇವನಿಲ್ಲದೆ ರಾಮರಾಜ್ಯ (Ram Rajya) ಅಪೂರ್ಣ. ಜ್ಞಾನವಾಪಿ (Gyanavapi) ಸಂಕೀರ್ಣದಲ್ಲಿ ಭಗವಂತನಿದ್ದಾನೆ, ದೇವಾಲಯವಿದೆ ಎಂದು ತನಗೆ ಸದಾ ಅನಿಸುತ್ತಿತ್ತು ಎಂದು ಶಬ್ನಮ್​ ಶೇಖ್ (Shabnam Shaikh)​ ಹೇಳಿದ್ದಾರೆ.

ಶಬ್ನಮ್​ ಶೇಖ್​ ರಾಮಲಲ್ಲಾ ದರ್ಶನ ಪಡೆಯಲು ಮುಂಬೈನಿಂದ ಅಯೋಧ್ಯೆಗೆ (Mumbai to Ayodhya) ಪಾದಯಾತ್ರೆ ಕೈಗೊಂಡಿದ್ದರು. ರಾಮಲಲ್ಲಾನ ದರ್ಶನ ಪಡೆಯಲಿ ನಿತ್ಯ ಲಕ್ಷಾಂತರ ಮಂದಿ ಅಯೋಧ್ಯೆ ಭೇಟಿ ನೀಡುತ್ತಿದ್ದಾರೆ.

ತನ್ನ ಸ್ನೇಹಿತರಾದ (Friends) ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಅವರೊಂದಿಗೆ ಶಬ್ನಮ್ ಶೇಖ್, ಅಯೋಧ್ಯೆ ಪ್ರವಾಸಕ್ಕೆ (Tour) ಹೋಗಿದ್ದರು.

ರಾಮಲಲ್ಲಾನ ದರ್ಶನ ಪಡೆಯುವುದು ಅವರ ಉದ್ದೇಶವಾಗಿತ್ತು. ಮುಸ್ಲಿಮ್ ಆಗಿದ್ದರೂ, ಶಬ್ನಮ್ ರಾಮನಲ್ಲಿ ಅಚಲವಾದ ನಂಬಿಕೆಯನ್ನ (believe) ಇಟ್ಟುಕೊಂಡಿದ್ದಾರೆ.

ಮಹಾದೇವನಿಲ್ಲದೆ ರಾಮರಾಜ್ಯ ಪೂರ್ಣಗೊಳ್ಳುವುದಿಲ್ಲ ಎನ್ನುವ ನಂಬಿಕೆ ನನ್ನದು ಎಂದು ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ (on foot) ತೆರಳಿದ್ದ ಶಬ್ನಮ್ ಶೇಖ್ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿಯಲ್ಲಿ ಭಗವಂತನಿದ್ದಾನೆ, ದೇವಸ್ಥಾನವಿದೆ (temple) ಎಂದು ತನಗೆ ಯಾವಾಗಲೂ ಅನಿಸುತ್ತಿತ್ತು ಆದರೆ ಈಗ ಅದು ಸತ್ಯ (true) ಎನಿಸಿದೆ ಎಂದಿದ್ದಾರೆ.

ರಾಮಜನ್ಮ ಭೂಮಿಗೆ ಹೋಗಲು ಇದುವೇ ಪ್ರೇರಣೆಯಾಗಿದೆ (motivation). ಶಬ್ನಮ್ ಭಗವಾನ್ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಾರೆ. ಅವರಿಗೆ ಎಲ್ಲವೂ ಸಮಾನ. ಶ್ರೀರಾಮನ ಆರಾಧನೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಜಾತಿಗೆ (to religion or caste) ಸೀಮಿತವಾಗಿಲ್ಲ. ಜತೆಗೆ ಹೆಣ್ಣುಮಕ್ಕಳು ಕಾಲ್ನಡಿಗೆಯಲ್ಲಿ ಪ್ರಯಾಣಿಸುವಂತಿಲ್ಲ ಎಂಬ ಕಲ್ಪನೆಯನ್ನೂ ಮುರಿಯಬೇಕಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ವಾರಾಣಸಿ (Varanasi) ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಸಂಕೀರ್ಣದಲ್ಲಿರುವ ವ್ಯಾಸ್ ಜಿ ಅವರ ತೆಹ್ಖಾನಾದಲ್ಲಿ ನಿತ್ಯ ಪೂಜೆಗೆ ಅನುಮತಿ (Permission) ನೀಡಿದ ನಂತರ, ನೆಲಮಾಳಿಗೆ ತೆರೆಯಲಾಗಿದೆ.

ಅಯೋಧ್ಯೆಯಲ್ಲಿ ಮಾತನಾಡಿದ ಶಬ್ನಮ್ ಮಹಾದೇವನಿಲ್ಲದೆ ರಾಮರಾಜ್ಯ ಅಪೂರ್ಣ ನಾವೂ ಈ ಸುದ್ದಿಯ ಮೇಲೆ ಸದಾ ಗಮನವಿಡುತ್ತಿದ್ದೆವು ಎಲ್ಲೋ ಒಂದು ದೇವಸ್ಥಾನವಿದೆ ಎಂಬ ಕಲ್ಪನೆ (imagination) ಇತ್ತು ಎಂದಿದ್ದಾರೆ.

spot_img
spot_img
- Advertisment -spot_img