Saturday, July 27, 2024
spot_img
spot_img
spot_img
spot_img
spot_img
spot_img

ಧೂಮಪಾನ ಮಾಡಿ, ಲಕ್ಷ್ಮಣನನ್ನು ನಿಂದಿಸಿದ ಸೀತಾ ಪಾತ್ರಧಾರಿ ; ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹಲವರು ಜನವರಿ 22ರಂದು ಸಂಪನ್ನಗೊಂಡ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯದ ಕುರಿತು ಆಕ್ಷೇಪ (objection) ವ್ಯಕ್ತಪಡಿಸಿ, ವಿವಾದಾತ್ಮಕ (Controversial) ಹೇಳಿಕೆಗಳನ್ನು ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ನಡುವೆ ಪುಣೆ ವಿಶ್ವವಿದ್ಯಾಲಯದಲ್ಲಿ (Pune university) ನಡೆದ ಘಟನೆ ವಿದ್ಯಾರ್ಥಿ ಗುಂಪಿನ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ.

ರಾಮಲೀಲಾ ನಾಟಕವನ್ನು (Ramleela drama) ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ್ದು, ನಾಟಕದಲ್ಲಿ ಆಕ್ಷೇಪಾರ್ಹ ದೃಶ್ಯಗಳು (Offensive scenes) ಕಂಡುಬಂದಿವೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಿಸಿದೆ.

ನಾಟಕ ಪ್ರದರ್ಶನ ಸಂಬಂಧ ಪೊಲೀಸರು ಪ್ರವೀಣ್ ಭೋಲೆ, ಭವೇಶ್ ಪಾಟೀಲ್, ಜಯ್ ಪೆಡ್ನೇಕರ್, ಪ್ರಥಮೇಶ್ ಸಾವಂತ್, ಹೃಷಿಕೇಶ್ ದಾಲ್ವಿ ಮತ್ತು ಯಶ್ ಚಿಖ್ಲೆ ಸೇರಿದಂತೆ ಆರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ (complaint) ದಾಖಲಾಗಿದೆ.

ಭಾರತೀಯ ದಂಡ ಸಂಹಿತೆ (IPC Section) 295A, 294, 143, 147, 149, 323 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪುಣೆ ವಿಶ್ವವಿದ್ಯಾಲಯದ ಎಬಿವಿಪಿ ಅಧ್ಯಕ್ಷ ಶಿವ ಬರೋಲೆ ತಿಳಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಸೀತಾ ಮಾತೆಯ ವೇಷ ಧರಿಸಿರುವ ಯುವತಿ ಧೂಮಪಾನ ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೇ ಲಕ್ಷ್ಮಣ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ.

ಲಲಿತಾ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕವು ಆಕ್ಷೇಪಕಾರಿಯಾಗಿದ್ದು, ಧಾರ್ಮಿಕ ಭಾವನೆಗಳಿಗ್ಗೆ ಧಕ್ಕೆ ಉಂಟು ಮಾಡಿದೆ. ಈ ಸಂಬಂಧ ದೂರು ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪುಣೆ ವಿಶ್ವವಿದ್ಯಾಲಯದ ಎಬಿವಿಪಿ ಅಧ್ಯಕ್ಷ ಶಿವ ಬರೋಲೆ ತಿಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್​ ಆಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದಡಿ ದೂರು ದಾಖಲಾಗಿದೆ.

spot_img
spot_img
- Advertisment -spot_img