Saturday, July 27, 2024
spot_img
spot_img
spot_img
spot_img
spot_img
spot_img

ಕಾಲೇಜು ವಿದ್ಯಾರ್ಥಿನಿಗೆ PSI, ಕಾನ್ಸ್‌ಟೇಬಲ್ ಕಿರುಕುಳ ನೀಡಿದ ಕೇಸ್’ಗೆ ಬಿಗ್ ಟ್ವಿಸ್ಟ್.!

spot_img

ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಗಜೇಂದ್ರಗಡ (Gajendragad) ತಾಲ್ಲೂಕಿನ ನರೇಗಲ್‍ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಪೇದೆ ಅನುಚಿತವಾಗಿ ವರ್ತಿಸಿದ್ದರು ಎಂದು ಯುವತಿ ಆರೋಪಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಅದೇನೆಂದರೆ ಪೊಲೀಸ್ ಪೇದೆಯು ಯುವತಿಯ ವಿರುದ್ಧ ಹನಿಟ್ರ್ಯಾಪ್ (Honey trap) ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆ ಪೊಲೀಸ್ ಪೇದೆ (police constable) ಶಂಕರ್ ಅವರನ್ನು ಅಮಾನತು ಮಾಡಲಾಗಿತ್ತು.

ಇದನ್ನು ಓದಿ : ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ ; ಪ್ರೊಪೆಸರ್ ಸೇರಿ ಐವರು ಅರೆಸ್ಟ್.!

ಯುವತಿ ಜೊತೆಗೆ ಅನೈತಿಕ ಸಂಬಂಧ ಇರುವುದು ಸತ್ಯ. ಆದರೆ ಆಕೆ ನನಗೆ ಗೊತ್ತಾಗದ ಹಾಗೆ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲಾಕ್‍ಮೇಲ್ (blackmail) ಮಾಡುತ್ತಿದ್ದಾಳೆ.

ಆಡಿಯೋ, ಫೋಟೊ ಹಾಗೂ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : ನಟಿಯ ಬೋಲ್ಡ್ ಪೋಟೋ ವೈರಲ್ ; ಚಡ್ಡಿ ಹಾಕಿದ್ದಿಯೇನಮ್ಮ ಎಂದ ನೆಟ್ಟಿಗರು.!

ಯುವತಿಯ ಹಿಂದೆ ದೊಡ್ಡ ಜಾಲವೇ ಇದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಪೇದೆ ಎಸ್ಪಿ ಅವರ ಬಳಿ ಮನವಿ ಮಾಡಿದ್ದಾರೆ.

spot_img
spot_img
- Advertisment -spot_img