ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಲೇಜು ವಿದ್ಯಾರ್ಥಿಗಳು (college students) ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆ ಪುಣೆ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಐವರು ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ.
ಈ ವಿದ್ಯಾರ್ಥಿಗಳು ‘ರಾಮಲೀಲಾ’ ವನ್ನು ಆಧಾರಿಸಿ ಒಂದು ನಾಟಕ ಮಾಡುತ್ತಿದ್ದರು. ಇದರ ಭಾಗವಾಗಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ (arrest) ಎಂದು ವರದಿಯಾಗಿದೆ.
ಲಲಿತ ಕಲಾ ಕೇಂದ್ರದ ವಿಭಾಗದ ಮುಖ್ಯಸ್ಥ ಡಾ.ಪ್ರವೀಣ್ ಭೋಲೆ ಮತ್ತು ವಿದ್ಯಾರ್ಥಿಗಳಾದ ಭವೇಶ್ ಪಾಟೀಲ್, ಜಯ್ ಪೆಡ್ನೇಕರ್, ಪ್ರಥಮೇಶ್ ಸಾವಂತ್, ರಿಷಿಕೇಶ್ ದಳವಿ ಮತ್ತು ಯಶ್ ಚಿಖ್ಲೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಬಿಡುಗಡೆ (release) ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ : ಮಥುರಾ ಮಂದಿರ ಕೆಡವಿದ್ದು ಔರಂಗಜೇಬನೇ ; RTI ಅರ್ಜಿಗೆ ಪುರಾತತ್ವ ಇಲಾಖೆ ಉತ್ತರವೇನು.?
ಈ ನಾಟಕದಲ್ಲಿನ ಆಕ್ಷೇಪಾರ್ಹ ಸಂಭಾಷಣೆಗಳು ಮತ್ತು ದೃಶ್ಯಗಳು, 6 ಜನರ ಬಂಧನಕ್ಕೆ ಕಾರಣವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ನಾಟಕವು ‘ರಾಮಲೀಲಾ’ದ ವಿವಿಧ ಪಾತ್ರಗಳನ್ನು ಚಿತ್ರಿಸುವಂತಿತ್ತು. ಜೊತೆಗೆ ಅವರ ಸಂಭಾಷಣೆ ಕೂಡ ಹಾಗೆಯೇ ಇತ್ತು ಎಂದು ಆರೋಪಗಳು ಕೇಳಿ ಬಂದಿವೆ. ನಾಟಕ ಪ್ರದರ್ಶನದ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಗೆ ಸಂಬಂಧಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಮತ್ತು ಪುಣೆ ವಿಶ್ವವಿದ್ಯಾಲಯದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ.
ವಿಶ್ವವಿದ್ಯಾನಿಲಯದ ಅಧಿಕೃತ ಪ್ರದರ್ಶನ (Official show) ಕಲೆ ಕೇಂದ್ರವಾದ ಲಲಿತ ಕಲಾ ಕೇಂದ್ರವು ಶುಕ್ರವಾರ ಸಂಜೆ ಈ ನಾಟಕವನ್ನು ಪ್ರಸ್ತುತ ಪಡಿಸಿತ್ತು. ಇದು ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿ : ರಸ್ತೆ ಬದಿಯ ವ್ಯಾಪಾರಿಗಳ ಮೇಲೆ ಪೊಲೀಸಪ್ಪನ ದರ್ಪ.!
ಎಫ್‌ಐಆರ್‌ನಲ್ಲಿ ಒದಗಿಸಲಾದ ಆರಂಭಿಕ ಮಾಹಿತಿಯ ಪ್ರಕಾರ, ನಾಟಕದಲ್ಲಿ ಸೀತಾಮಾತೆ ಸಿಗರೇಟ್ ಸೇದುವುದು ಮತ್ತು ಆಕ್ಷೇಪಾರ್ಹ ಭಾಷೆ ಬಳಸಿ ಇತರರಿಗೆ ಬೈಯುವುದು ಇತ್ತು. ಸೀತೆಯ ಪಾತ್ರವನ್ನು ಯುವಕನೊಬ್ಬ ಮಾಡಿದ್ದು, ಸಿಗರೇಟ್ ಸೇದುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರದರ್ಶನದ ವೇಳೆ ಎಬಿವಿಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಾಟಕವನ್ನು ನಿಲ್ಲಿಸಲಾಯಿತು ಎಂದು ಎಫ್‌ಐಆರ್ ವರದಿ ಮಾಡಿದೆ.
ಇನ್ನೂ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (SPPU) ಆಡಳಿತವು ರಾಮಾಯಣದ ಪಾತ್ರಗಳ ಅಪಹಾಸ್ಯವನ್ನು ಬೆಂಬಲಿಸುವುದಿಲ್ಲ ಮತ್ತು ಜನರ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದೆ.