Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಬೆಳಗ್ಗಿನ ಉಪಹಾರ ಆರೋಗ್ಯಕ್ಕೆ ಎಷ್ಟು ಮುಖ್ಯ ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಆಧುನಿಕ ಕಾಲದಲ್ಲಿ ಜನರು ಕೆಲಸದ ಒತ್ತಡದಲ್ಲಿ (pressure) ಬೆಳಗ್ಗಿನ ಉಪಹಾರ ಸೇವಿಸಲು ಹಿಂದೇಟು ಹಾಕುತ್ತಾರೆ.

ಆದರೆ ಬೆಳಗ್ಗೆ ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಬೆಳಗ್ಗೆ ತಿಂಡಿ ಮಾಡಿಲ್ಲ ಅಂದರೆ ಚಯಾಪಚಯ ಕ್ರಿಯೆ (metabolism) ಕಡಿಮೆ ಆಗುತ್ತದೆ ಹಾಗೂ ದೇಹದ ತೂಕ ಹೆಚ್ಚಾಗುತ್ತದೆ.

ಇದನ್ನು ಓದಿ : ಶಿವಕುಮಾರ ಸ್ವಾಮೀಜಿ ಕಾರಿಗೆ ಟಿಪ್ಪರ್ ವಾಹನ ಡಿಕ್ಕಿ ; ಶ್ರೀಗಳು ಆಸ್ಪತ್ರೆಗೆ ದಾಖಲು.!

ಬೆಳಗ್ಗೆ ತಿಂಡಿ ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ ಅಲ್ಲದೆ, ರೋಗಗಳು ಕೂಡ ಬರುವುದಿಲ್ಲ. ಹಾಗಾಗಿ ಬೆಳಗ್ಗಿನ ಉಪಹಾರವನ್ನು ಸೇವಿಸಿದ್ರೆ ಒಳ್ಳೆಯದು.

ಉಪಯೋಗ :
ತಜ್ಞರ ಪ್ರಕಾರ ಬೆಳಗಿನ ಉಪಹಾರ ನಿಯಮಿತವಾಗಿ (regularly) ಸೇವನೆ ಮಾಡುವವರು ಬೆಳಗಿನ ಉಪಹಾರದ ಬಗ್ಗೆ ಗಮನ ಹರಿಸದವರಿಗಿಂತ ಅವರ ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಅಲ್ಲದೇ ಆರೋಗ್ಯಕರ ತೂಕ ಕಾಪಾಡಲು ಸಹಕಾರಿ. ಶಕ್ತಿಯು ದಿನವಿಡೀ ದೇಹದಲ್ಲಿ ಉಳಿಯುತ್ತದೆ ನಿಯಮಿತ ಉಪಹಾರ ಸೇವಿಸುವುದು ಹೃದಯದ ತೊಂದರೆ ತಡೆಯುತ್ತದೆ. ಚಯಾಪಚಯ ಸಮತೋಲಿತವಾಗಿರುತ್ತದೆ. ಮಧುಮೇಹದ ಅಪಾಯ (Risk of diabetes) ಕಡಿಮೆ ಆಗುತ್ತದೆ.

ಸೇವನೆ ಮಾಡದಿದ್ರೆ ಏನಾಗಬಹುದು.?
ಮೈಗ್ರೇನ್, ಆಮ್ಲೀಯತೆ, ಊತ, ಎಂಜಾಯಿಟಿ, ತಲೆನೋವು, ಅನಿಯಮಿತ ಅವಧಿ, ವಿಟಮಿನ್ ಬಿ 12, ಪ್ರೋಟೀನ್ ಕೊರತೆ, ಡಿ ಕೊರತೆಯ ತೊಂದರೆಗಳು ಉಂಟಾಗುತ್ತವೆ.

ಅಲ್ಲದೇ ಬೆಳಗಿನ ಉಪಾಹಾರ ಸೇವಿಸದ ಜನರು ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಪ್ರತಿಕೂಲ ಲಿಪಿಡ್ ಪ್ರೊಫೈಲ್, ಮಧುಮೇಹ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ ಸೇರಿ ಹೆಚ್ಚಿನ ಕಾರ್ಡಿಯೋಮೆಟಾಬಾಲಿಕ್ ಅಪಾಯ (danger) ಹೊಂದಿರುತ್ತಾರೆ ಎಂದು ಹಲವು ಅಧ್ಯಯನ ಹೇಳಿವೆ.

ಇದನ್ನು ಓದಿ : ಕೋಳಿಯೊಂದಿಗೆ ಯುವತಿಯ ಯುದ್ಧ ; ಸೋತವರ್ಯಾರು, ಗೆದ್ದವರ್ಯಾರು? ; Video ನೋಡಿ.!

ಯಾವ ಉಪಹಾರ ಸೇವನೆ ಒಳ್ಳೆಯದು.?
ಪ್ಯಾಕ್ ಮಾಡಿದ ಆಹಾರದ ಬದಲಿಗೆ ಮನೆಯಲ್ಲಿಯೇ ತಾಜಾ ಉಪಹಾರ ಮಾಡಿ ಸೇವಿಸಿ. ಬೆಳಗಿನ ಉಪಹಾರ ಮಾಡಲು ಸಮಯವಿಲ್ಲದೇ ಇದ್ದರೆ ಬೀಜಗಳನ್ನು ತಿನ್ನುವುದು ಸಹ ಪ್ರಯೋಜನಕಾರಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img