Saturday, July 27, 2024
spot_img
spot_img
spot_img
spot_img
spot_img
spot_img

Google ಮ್ಯಾಪ್‌ನಲ್ಲಿ ನಿಮ್ಮ ಮನೆ ಲೊಕೇಶನ್ ಸೇರಿಸುವುದು ಹೇಗೆ ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಗಮ್ಯಸ್ಥಾನವನ್ನು (destination) ವೇಗವಾಗಿ ತಲುಪಲು ಗೂಗಲ್ ಮ್ಯಾಪ್ಅನ್ನು ಬಳಸಬಹುದು. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಈ ಅಪ್ಲಿಕೇಶನ್ ಅನ್ನು ಹೊಂದಿವೆ.

ಅಲ್ಲದೇ ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ಲೊಕೇಶನ್ (Home Location) ಅನ್ನು ಸೇರಿಸುವುದು ಹೇಗೆ ಎಂಬುದನ್ನು ಸಹ ನೀವು ತಿಳಿಯಬಹುದು.

ಇದನ್ನು ಓದಿ : ಮಹಿಳೆ ಮೇಲೆ ನಿರಂತರ ಅತ್ಯಾಚಾರ ; Video ವೈರಲ್ ಮಾಡಿ ಗ್ರಾ. ಪಂ. ಅಧ್ಯಕ್ಷೆಯ ಮಗನಿಂದ ವಿಕೃತಿ.!

ಗೂಗಲ್ ಮ್ಯಾಪ್‌ನಲ್ಲಿ ಮನೆಯ ಲೊಕೇಶನ್ ಸೇರಿಸುವುದು ಹೇಗೆ.?

* ಮೊಬೈಲ್ ನಲ್ಲಿರುವ ಗೂಗಲ್ ಮ್ಯಾಪ್ ಓಪನ್ ಮಾಡಿಕೊಳ್ಳಬೇಕು.

* ನಂತರ ಗೂಗಲ್ ಮ್ಯಾಪ್‌ನಲ್ಲಿ ಹೊಸ ಜಾಗವನ್ನು ಸೇರಿಸುವ ಲೊಕೇಶನ್ ಆಯ್ಕೆ ಮಾಡಿಕೊಳ್ಳಬೇಕು.

* ಆ ಲೊಕೇಶನ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲೆ ಕೆಳಗಡೆ Add A missing place ಆಯ್ಕೆ ಕಾಣುತ್ತದೆ.

* Add A missing place ಮೇಲೆ ಕ್ಲಿಕ್ ಮಾಡಬೇಕು.

* ಇಲ್ಲಿ ಆ ಜಾಗದ ಕುರಿತು ಮಾಹಿತಿ ತುಂಬಲು ಬಾಕ್ಸ್ ಇರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್ ಬಟ್ ಒತ್ತಿದರೆ ಆಯಿತು.

ಇದರಲ್ಲಿ ನೀವು ಕೆಟೆಗರಿ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ವೆಬ್ಸೈಟ್ ಇದ್ದರೆ ಸೇರಿಸಬಹುದು. ಫೋನ್ ನಂಬರ್, ಫೋಟೋ ಕೂಡ ಹಾಕಬಹುದು.

ಇದು ಅಪ್ಡೇಟ್ ಆಗಲು ಒಂದು ವಾರದಿಂದ 15 ದಿನ ಸಮಯ ತೆಗೆದುಕೊಳ್ಳುತ್ತದೆ. ಗೂಗಲ್ ನವರು ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಸೇರಿಸಿದ ನಂತರ ಕನ್ಫರ್ಮ್ ಮೇಲ್ ಬರುತ್ತದೆ. ಆಗ ನೀವು ಸೇರಿಸಿದ ಸ್ಥಳ ಗೂಗಲ್ ಮ್ಯಾಪ್‌ನಲ್ಲಿ ಸೇರ್ಪಡೆಯಾಗುತ್ತದೆ. ಈ ಮೂಲಕ ಗೂಗಲ್ ಮ್ಯಾಪ್​ಗೆ ನಿಮ್ಮ ಮನೆ, ಹೊಸ ಜಾಗವನ್ನು ಸೇರಿಸಬಹುದು.

ಪ್ರಯೋಜನಗಳು :
ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಆಧರಿಸಿ ಗೂಗಲ್ ಮ್ಯಾಪ್ ನಿಮ್ಮ ದೈನಂದಿನ ಮಾರ್ಗಗಳನ್ನು ಆಪ್ಟಿಮೈಜ್ (optimize) ಮಾಡಬಹುದು. ಇದರೊಂದಿಗೆ ನೀವು ಪ್ರಯಾಣದ ಸಮಯವನ್ನು ಉಳಿಸಲು ಅನುಕೂಲವಾಗುವಂತೆ ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಮನೆ ಅಥವಾ ಕೆಲಸಕ್ಕೆ ಹಿಂತಿರುಗುವ ಮಾರ್ಗವನ್ನು ನೀವು ಸುಲಭವಾಗಿ ಕಂಡುಕೊಳ್ಳಬಹುದು ಅಥವಾ “ಮನೆ” ಅಥವಾ “ಕೆಲಸ” ಟ್ಯಾಪ್ ಮಾಡುವ ಮೂಲಕ ಗೂಗಲ್ ಮ್ಯಾಪ್ ನಿರ್ದೇಶನಗಳನ್ನು ಪಡೆಯಬಹುದು.

ಇದನ್ನು ಓದಿ : Special news : ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವ 4 ರಾಶಿಯವರು.!

ವ್ಯಾಪಾರಗಳು, ರೆಸ್ಟೋರೆಂಟ್‌ಗಳು ಮತ್ತು ನಿಮ್ಮ ಮನೆ ಅಥವಾ ಕೆಲಸದ ಸಮೀಪವಿರುವ ಇತರ ಸ್ಥಳಗಳ ಕುರಿತು ಮಾಹಿತಿಯನ್ನು ಪಡೆಯಬಹುದು, ಅವುಗಳ ರೇಟಿಂಗ್‌, ತೆರೆಯುವ ಸಮಯ ಮತ್ತು ಸಂಪರ್ಕ ಮಾಹಿತಿಯನ್ನು ಸಹ ನೀಡಬಹುದು.

ನಿಮ್ಮ ಮನೆ ಅಥವಾ ಕಚೇರಿ ಸ್ಥಳವನ್ನು ಇತರರೊಂದಿಗೆ ನೀವು ಸುಲಭವಾಗಿ ಹಂಚಿಕೊಳ್ಳುವುದರೊಂದಿಗೆ ವಿಶೇಷವಾಗಿ ನೀವು ಯಾರನ್ನಾದರೂ ಭೇಟಿ ಮಾಡಿದಾಗ ಅಥವಾ ಅವರಿಗೆ ನಿರ್ದೇಶನಗಳನ್ನು (directions) ನೀಡಲು ಬಯಸಿದಾಗ ಇದು ಹೆಚ್ಚು ಸಹಕಾರಿಯಾಗಲಿದೆ.

spot_img
spot_img
- Advertisment -spot_img