Friday, June 14, 2024
spot_img
spot_img
spot_img
spot_img
spot_img
spot_img

ಮಹಿಳೆ ಮೇಲೆ ನಿರಂತರ ಅತ್ಯಾಚಾರ ; Video ವೈರಲ್ ಮಾಡಿ ಗ್ರಾ. ಪಂ. ಅಧ್ಯಕ್ಷೆಯ ಮಗನಿಂದ ವಿಕೃತಿ.!

spot_img

ಜನಸ್ಪಂದನ ನ್ಯೂಸ್, ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು (Hanur) ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುತ್ರನೋರ್ವ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುತ್ರ ವೈದೇಶ್​ ಎಂಬಾತ ಈ ನೀಚ ಕೃತ್ಯವೆಸಗಿದ್ದಾನೆ. ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆಯ ಮೇಲೆ ಆರೋಪಿ ವೈದೇಶ್ ಅತ್ಯಾಚಾರ ನಡೆಸಿದ್ದಾನೆ.

ಇದನ್ನು ಓದಿ : ಉತ್ತರ ಪತ್ರಿಕೆ ಓದದೇ ರೀಲ್ಸ್ ಮಾಡುತ್ತ ಮಾರ್ಕ್ಸ್ ಕೊಟ್ಟ ಮೇಡಂ ; ಮುಂದೆನಾಯ್ತು Video ನೋಡಿ.

ಗ್ರಾಮ ಪಂಚಾಯತಿ ವತಿಯಿಂದ ಮನೆ ಕಟ್ಟಿಸಿ ಕೊಡಬೇಕೆಂದರೆ ನನ್ನ ಜೊತೆ ಮಲಗಬೇಕೆಂದು ಹೇಳಿದ್ದನಂತೆ.

ಅಲ್ಲದೇ ಪದೇ ಪದೇ ಮಹಿಳೆಯನ್ನ ಮಂಚಕ್ಕೆ ಕರೆದು ಪೀಡಿಸುತ್ತಿದ್ದ. ಆತನ ಕಾಟ ತಾಳಲಾರದೆ ವೈದೇಶ್​ನನ್ನ ಮಹಿಳೆ ಮನೆಗೆ ಕರೆದಿದ್ದಾಳೆ.

ಈ ವೇಳೆ ಸಂತ್ರಸ್ಥೆ ಮನೆ ಒಳನುಗ್ಗಿದ ಆರೋಪಿ ಆಕೆಯನ್ನು ವಿವಸ್ತ್ರಗೊಳಿಸಿ (undress), ಫೋಟೋ ಹಾಗೂ ವಿಡಿಯೋವನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದ.

ಸಹಕರಿಸದಿದ್ರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡೋದಾಗಿ ಧಮ್ಕಿ ಹಾಕಿ ನಿರಂತರ ಅತ್ಯಾಚಾರ (Continuous rape) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ : ಭಜನೆ ಮಾಡ್ತಿದ್ದ ಮಹಿಳೆಯರ ಮುಂದೆಯೇ ಅಂಡರ್‌ವೇರ್‌ನಲ್ಲೇ ಕುಳಿತ ಸಬ್ ಇನ್ಸ್‌ಪೆಕ್ಟರ್ ; Video Viral.!

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಮನನೊಂದ ಮಹಿಳೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೈದೇಶ್ ಹಾಗೂ ವೀಡಿಯೋ ವೈರಲ್ ಮಾಡಿದ ಬಸಮಣಿ , ಶಿವಮ್ಮ ಎಂಬುವರ ವಿರುದ್ದ ಐಪಿಸಿ ಸೆಕ್ಷನ್ 376, 384, 417, 509 ಮತ್ತು ಐಟಿ ಕಾಯ್ದೆ 66(ಇ), 67, 67(ಎ) ಅನ್ವಯ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

spot_img
spot_img
- Advertisment -spot_img