Friday, June 14, 2024
spot_img
spot_img
spot_img
spot_img
spot_img
spot_img

Video : ಕರ್ಮದ ಫಲ ಯಾರನ್ನು ಬಿಡಲ್ಲ ಅನ್ನೋದಕ್ಕೆ ಇಲ್ಲಿದೆ ನೋಡಿ ಜೀವಂತ ಉದಾಹರಣೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಮಾಡಿದ ಕರ್ಮ ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದರ ಫಲವನ್ನು ಅನುಭವಿಸಲೇಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು. ಇನ್ನು ಕೆಲವರಿಗೆ ತಕ್ಷಣವೇ ಅವರ ಕರ್ಮಫಲ (Karma) ಸಿಗುತ್ತದೆ. ಹಿರಿಯರು ಹೇಳಿದ ಈ ಮಾತಿಗೆ ಪುಷ್ಠಿ ನೀಡುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ವೃದ್ಧೆ ಮಹಿಳೆಯೊಬ್ಬಳು ರಸ್ತೆಯ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಿದ್ದಾಗ (begging) ಅಲ್ಲಿಗೆ ಬರುವ ಮಹಿಳಾ ಟ್ರಾಫಿಕ್ ಪೊಲೀಸ್​ ಆಕೆಯನ್ನು ಹಲವು ಬಾರಿ ಒದ್ದು ಅಲ್ಲಿಂದ ಕಳುಹಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : Air show ವೇಳೆ ಮುಖಾಮುಖಿ ಡಿಕ್ಕಿಯಾದ ವಿಮಾನ : ಓರ್ವ ಪೈಲಟ್ ಸಾವು ; ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ.!

ಭಿಕ್ಷುಕಿ ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಕರುಣೆ ತೋರದ (Unmerciful) ಲೇಡಿ ಪೊಲೀಸ್​ ಮೃಗೀಯವಾಗಿ ವರ್ತಿಸಿದ್ದಾಳೆ. ಮೇಲೆ ಏಳಲು ಆಗದೇ ಭಿಕ್ಷುಕಿ ನೆಲದಲ್ಲಿ ತೆವಳುತ್ತಾ ಪಕ್ಕಕ್ಕೆ ಸರಿಯುವ ದೃಶ್ಯ ಎಂತವರ ಮನಕಲಕುವಂತಿದೆ.

ಮಹಿಳಾ ಟ್ರಾಫಿಕ್ ಪೋಲೀಸ್ ಮಹಿಳೆಯನ್ನು ಒದ್ದು, ಬಲವಂತವಾಗಿ ಜಾಗ ಖಾಲಿ ಮಾಡಿಸಿದಳು. ಬಳಿಕ ತನ್ನ ಕೆಲಸವನ್ನು ನಿರ್ವಹಿಸಲು ಶುರು ಮಾಡಿದರು. ಆದರೆ, ಇದ್ದಕ್ಕಿದ್ದಂತೆ ಆಕೆಗೆ ಏನಾಯಿತೋ? ತಲೆ ತಿರುಗಿ ಒಮ್ಮೆಲೇ ಕೆಳಗೆ ಬೀಳುತ್ತಾರೆ. ಭಿಕ್ಷುಕ ಮಹಿಳೆ ಎಲ್ಲಿ ಕುಳಿತಿದ್ದರೋ, ಆ ಜಾಗದಲ್ಲಿಯೇ ಪ್ರಜ್ಞೆ ತಪ್ಪಿ ಬೀಳುತ್ತಾರೆ.

ಇದನ್ನು ಕಂಡ ಭಿಕ್ಷುಕಿ ತಕ್ಷಣ ನೀರಿನ ಬಾಟಲಿಯಲ್ಲಿದ್ದ ನೀರನ್ನು ತೆಗೆದುಕೊಂಡು ಆಕೆಯ ಮುಖಕ್ಕೆ ಚಿಮುಕಿಸಿ ನಿಧಾನವಾಗಿ ಎಬ್ಬಿಸುತ್ತಾರೆ. ಬಳಿಕ ಭಿಕ್ಷುಕಿಯ ಕೈಹಿಡಿದುಕೊಂಡು ಲೇಡಿ ಪೊಲೀಸ್​ ನಿಧಾನವಾಗಿ ಮೇಲೇಳುತ್ತಾರೆ. ಈ ದೃಶ್ಯ ಮಾನವೀಯತೆ (Humanity) ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಉತ್ತಮ ನಿದರ್ಶನ.

ಇದನ್ನು ಓದಿ : Special news : ಇಂತಹ 500 ನೋಟು ನಿಮ್ಮಲ್ಲಿದೆಯಾ.? ಹಾಗಾದ್ರೆ ನೀವಾಗಬಹುದು ಲಕ್ಷಾಧೀಶ.!

Sreenath Boyapati ಎಂಬ X ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಡೀ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿದೆ.

ಈ ವಿಡಿಯೋ ನೋಡಿದ ಹಲವು ನೆಟ್ಟಿಗರು ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಕರ್ಮ ಮಾಡಿದರೆ ಫಲ ಹೀಗೆ ಇರುತ್ತದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

spot_img
spot_img
- Advertisment -spot_img