ಜನಸ್ಪಂದನ ನ್ಯೂಸ್, ಡೆಸ್ಕ್ : ಏರ್ ಶೋ ವೇಳೆ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ದುರ್ಘಟನೆಯೊಂದು ನಡಿದಿದ್ದು, ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ವೈರಲ್ ಆಗಿದೆ.
ಎರಡು ಸ್ಟಂಟ್ ವಿಮಾನಗಳು ಭಾನುವಾರ ದಿನದಂದು ಆಕಾಶದಲ್ಲಿ ಡಿಕ್ಕಿ ಹೊಡೆದವು. ಅವುಗಳಲ್ಲಿ ಒಂದು ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು ಎಂದು ಪೋರ್ಚುಗೀಸ್ ವಾಯುಪಡೆ (ಪಿಎಎಫ್) ತಿಳಿಸಿದೆ.
ಏರ್ ಶೋ ವೇಳೆ ನಡೆದ ಈ ದುರ್ಘಟನೆಯಲ್ಲಿ ವಿಮಾನ ಸ್ಫೋಟಗೊಂಡು ನೆಲಕ್ಕಪ್ಪಳಿಸಿದ ಪರಿಣಾಮ ಓರ್ವ ಪೈಲಟ್ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾರೆ.
ಇದನ್ನು ಓದಿ : Vidyadhan Scholarship : ’10ನೇ’ ತರಗತಿ ಪಾಸಾದವರು ಶಿಷ್ಯವೇತನಕ್ಕೆ ಈಗಲೇ ಅರ್ಜಿ ಸಲ್ಲಿಸಿ.!
ದಕ್ಷಿಣ ಪೋರ್ಚುಗಲ್ನಲ್ಲಿ ನಡೆದ ಏರ್ ಶೋ ವೇಳೆ ಈ ಘಟನೆ ನಡೆದಿದೆ. ಲಿಸ್ಬನ್‌ನ ದಕ್ಷಿಣಕ್ಕೆ 180 ಕಿಮೀ ಬೆಜಾದಲ್ಲಿನ ವಾಯುನೆಲೆಯಲ್ಲಿ ಏರ್ ಶೋ ವೇಳೆ ಆರು ವಿಮಾನಗಳು ಹಾರಾಟ ನಡೆಸಿವೆ. ಆದರೆ ಈ ವೇಳೆ ವಿಮಾನವೊಂದು ದಿಕ್ಕು ತಪ್ಪಿದಂತೆ ಅಡ್ಡಾದಿಡ್ಡಿ ಹಾರಿದೆ. ಕೊನೆಗೆ ನೇರವಾಗಿ ಮತ್ತೊಂದು ವಿಮಾನಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಿಮಾನಗಳ ನಿಯಂತ್ರಣ ತಪ್ಪಿ ನೆಲಕ್ಕುರುಳಿವೆ.
ವಿಮಾನ ದುರ್ಘಟನೆಯಲ್ಲಿ ಸ್ಪಾನಿಷ್ ಪ್ರಜೆ ಸಾವನ್ನಪ್ಪಿದ್ದಾರೆ. ಪೈಲಟ್ ಸಾವಿಗೆ ವಾಯುಪಡೆಯ ಅಧಿಕಾರಿ ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ : ವಾಹನ ಸವಾರರಿಗೆ Shock : ಇಂದಿನಿಂದ ದೇಶಾದ್ಯಂತ ಟೋಲ್ ದರ ಹೆಚ್ಚಳ.!
ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನಗಳು ‘‘ಯಾಕ್ ಸ್ಟಾರ್ಸ್’’ಎಂಬ ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಪೈಲಟ್ಗಳಿಂದ ನಿರ್ಮಿಸಲಾದ ಏರೋಬ್ಯಾಟಿಕ್ ಗುಂಪಿಗೆ ಸೇರಿದ ವಿಮಾನಗಳಾಗಿವೆ. ಡಿಕ್ಕಿ ಹೊಡೆದ ವಿಮಾನ ಯಾಕೋಚ್ಲೇವ್ ಯಾಕ್-52 ಎಂದು ಗುರುತಿಸಲಾಗಿದೆ.
Beja Air Show accident 😨😞 DEP pic.twitter.com/4WrRfoLCeO
— Don Expensive 🇪🇦 ✞ 🐸 (@kar0____) June 2, 2024