ಜನಸ್ಪಂದನ ನ್ಯೂಸ್, ಡೆಸ್ಕ್ : ಕೋತಿಯೊಂದು ಆಟವಾಡುತ್ತಿದ್ದ ಮಗುವಿನ ಮೇಲೆ ನಿರಂತರ ದಾಳಿ ಮಾಡಿ ಎತ್ತಿಕೊಂಡು ಹೋಗಲು ಪ್ರಯತ್ನಿಸಿರುವ ದೃಶ್ಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.
ವಿಡಿಯೋದಲ್ಲೇನಿದೆ :
ವಿಡಿಯೋದಲ್ಲಿ ಕೋತಿಯೊಂದು ಇತರ ಮಕ್ಕಳೊಂದಿಗೆ ಹೊರಗೆ ಆಡುತ್ತಿರುವ ಮಗುವಿನ ಮೇಲೆ ದಾಳಿ ಮಾಡಿದೆ. ಮಗು ಮನೆಯ ಹೊರಗೆ ಮರದ ಮೆಟ್ಟಿಲುಗಳ ಮೇಲೆ ಇದ್ದಾಗ ಮಂಗ ಇದ್ದಕ್ಕಿದ್ದಂತೆ ಹಾರಿ ಬಂದು ಮಗುವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ.
ಇದನ್ನು ಓದಿ : BSFನಲ್ಲಿ ಎಸ್ಐ, ಹೆಡ್ ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇತರ ಮಕ್ಕಳು ಭಯದಿಂದ ಓಡಿಹೋಗುತ್ತಾರೆ. ಕೂಡಲೇ ಮಗುವಿನ ಬೊಬ್ಬೆ ಕೇಳಿ ಓಡಿ ಬಂದ ತಾಯಿ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಆದರೂ ಮಗ ಆಕೆಯ ಕೈಯಿಂದ ಮಗುವನ್ನು ಹಿಡಿದುಕೊಂಡು ಹೋಗಲು ಪ್ರಯತ್ನಿಸುತ್ತದೆ.
ಕೂಡಲೇ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ (ಮಗುವಿನ ತಂದೆಯು ಆಗಿರಬಹುದು) ಕೋತಿಯನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೋತಿಯೂ ಮಗುವನ್ನು ಕೊಂಡೊಯ್ಯಲು ಬಿಡದ ಪ್ರಯತ್ನ ನಡೆಸಿದೆ.
ಇದನ್ನು ಓದಿ : ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ 5,250 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮಗುವಿನ ತಾಯಿ ಮಗುವನ್ನು ಕೋತಿಯ ಹಿಡಿತದಿಂದ ಕಿತ್ತು ತನ್ನ ಮಡಿಲಲ್ಲಿ ಹಿಡಿದಿಡುತ್ತಾಳೆ. ಆದರೆ, ಪಟ್ಟುಬಿಡದ ಕೋತಿ ತನ್ನ ದಾಳಿಯನ್ನು ಮುಂದುವರೆಸಿದೆ. ತಾಯಿಯ ತೋಳುಗಳಿಂದಲೂ ಮಗುವನ್ನು ಎಳೆಯಲು ಪ್ರಯತ್ನಿಸುತ್ತಿದೆ.
ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸುಮಾರು 7 ಮಿಲಿಯನ್ ಮಂದಿ ಇದನ್ನು ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು ಎಲ್ಲರ ಅಸಹಾಯಕತೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ವಿಡಿಯೋ ನೋಡಿ :
Monkey tries to take baby with him. pic.twitter.com/mspoVUDm5o
— Creepy.org (@creepydotorg) May 26, 2024