ಜನಸ್ಪಂದನ ನ್ಯೂಸ್, ಡೆಸ್ಕ್ : ಒಣಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹವು ಆರೋಗ್ಯದಿಂದ ಇರುತ್ತದೆ. ಪಿಸ್ತಾ, ಬಾದಾಮಿ, ಅಂಜೂರ್, ವಾಲ್‌ನಟ್, ದ್ರಾಕ್ಷಿ, ಗೋಡಂಬಿ (Cashew) ಇವುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗುತ್ತವೆ.
ಇನ್ನೂ ಒಣಹಣ್ಣುಗಳಲ್ಲಿ ಗೋಡಂಬಿ ವಿಶಿಷ್ಟವಾದ ರುಚಿಯನ್ನು ಹೊಂದಿದ್ದು, ಇದು ಬೇರೆ ಡ್ರೈಫೂಟ್ಸ್‌ಗಿಂತ (dry fruits) ಬೇರೆ ಎನಿಸುತ್ತದೆ.
ಗೋಡಂಬಿಯನ್ನು ಮಕ್ಕಳಿಂದ ವಯಸ್ಸಾದ ಅಜ್ಜ – ಅಜ್ಜಿಯಂದಿರೂ ಸಹ ತಿನ್ನಲು ಇಷ್ಟಪಡುತ್ತಾರೆ. ಹಾಗಾದ್ರೆ ಬನ್ನಿ ಗೋಡಂಬಿ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ಇದನ್ನು ಓದಿ : Health : ಅಧಿಕ ಬೊಜ್ಜಿನ ಸಮಸ್ಯೆಯಿಂದ ಬರುವ ರೋಗಗಳು.!
* ಗೋಡಂಬಿ ತಿಂದರೆ ವೀಕ್ನೆಸ್ ಹೋಗಿ, ದೇಹಕ್ಕೆ ಶಕ್ತಿ ದೊರೆಯುತ್ತದೆ.
* ಗರ್ಭಿಣಿಯರಿಗೆ ಗೋಡಂಬಿಯಲ್ಲಿ ಸಿಗುವ ಪೋಷಕಾಂಶಗಳು ಹೆಚ್ಚು ಹಿತಕಾರಿ. ಗೋಡಂಬಿಯಲ್ಲಿರುವ ಮೆಗ್ನೇಶಿಯಂ ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು.
* ಗೋಡಂಬಿಯಲ್ಲಿ ಮೆಗ್ನೇಶಿಯಂ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳ ಬೆಳವಣಿಗೆ (Bone health) ಮತ್ತು ಶಕ್ತಿ ವರ್ಧನೆಗೆ ನೆರವಾಗುತ್ತದೆ.
* ಮಧುಮೇಹಿಗಳು ಗೋಡಂಬಿ (Cashew Nuts) ತಿನ್ನಬೇಕು. ಅದು ದೇಹದಲ್ಲಿರುವ ಗ್ಲುಕೋಸ್ ಅನ್ನು ಸ್ಟೆಬಿಲೈಸ್ ಮಾಡುತ್ತದೆ.
* ಗೋಡಂಬಿಯಲ್ಲಿ ಮೆಗ್ನೇಶಿಯಂ ಮತ್ತು ಫೈಬರಿನ ಪ್ರಮಾಣ ಸಾಕಷ್ಟು ಇರುತ್ತದೆ. ಇದು ದೇಹದ ಮೆಟಾಬಲಿಸಂ ಹೆಚ್ಚಿಸುತ್ತದೆ. ಇದರಿಂದ ದೇಹದ ತೂಕ ಕಡಿಮೆ ಆಗುತ್ತದೆ.
* ಗೋಡಂಬಿಯಲ್ಲಿ ಫೈಬರ್ ಬೇಕಾದಷ್ಟಿರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ (Digestion) ಬಹಳ ಉತ್ತಮ
* ಗೋಡಂಬಿಯಲ್ಲಿ ಮೆಗ್ನೇಶಿಯಂ, ಸತು, ಕಬ್ಬಿಣದಾಂಶ, ಪಾಸ್ಪರಸ್ ಮುಂತಾದ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಇವು ಕೂದಲನ್ನು ಬಲಿಷ್ಠಗೊಳಿಸುತ್ತವೆ. ಜೊತೆಗೆ ಅದನ್ನು ಮೃದುವಾಗಿಸುತ್ತದೆ.
ಇದನ್ನು ಓದಿ : Music : ಸಂಗೀತ ಕೇಳುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!
* ಗೋಡಂಬಿಯಲ್ಲಿ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಸಾಕಷ್ಟಿರುತ್ತದೆ. ಇದು ಚರ್ಮದ (skin) ಆರೋಗ್ಯವನ್ನು ಕಾಪಾಡುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.