ಜನಸ್ಪಂದನ ನ್ಯೂಸ್, ಡೆಸ್ಕ್ : ಬೊಜ್ಜು ಅಥವಾ ಅಧಿಕ ತೂಕ (overweight) ಎನ್ನುವುದು ಆಧುನಿಕ ಯುಗದ ಸಮಸ್ಯೆ. ಆಧುನಿಕತೆಗೆ ತೆರೆದುಕೊಂಡಿರುವ ಭಾರತ ಕೂಡಾ ಈ ಸಮಸ್ಯೆಯಿಂದ ಹೊರತಾಗಿಲ್ಲ.
ಅತ್ಯುತ್ತಮ ಆರೋಗ್ಯ ಹೊಂದಿರುವ ಜನರು ಎಂದೇ ಖ್ಯಾತಿಯಾಗಿದ್ದ ಚೀನೀಯರು ಸಹ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇದನ್ನು ಓದಿ : ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು : ಪೇಶೆಂಟ್ ಜಸ್ಟ್ ಮೋಯೆ, ಮೋಯೆ ; Video ನೋಡಿ.!
ಕಾರಣಗಳು :
ದಿನವಿಡಿ ಕುಳಿತುಕೊಂಡು ಮಾಡುವಂತಹ ಕೆಲಸ, ದೈಹಿಕ ಪರಿಶ್ರಮವಿಲ್ಲದೆ ಇರುವುದು, ವ್ಯಾಯಾಮದ ಕೊರತೆ, ಫಾಸ್ಟ್ ಫುಡ್ ಇತ್ಯಾದಿಗಳು ದೇಹದಲ್ಲಿ ಬೊಜ್ಜು ಬರಲು ಕಾರಣವಾಗಿದೆ. ದೇಹದ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕ ಹೊಂದಿದ್ದರೆ ಅದನ್ನು ಬೊಜ್ಜು (obesity) ಎಂದು ಕರೆಯಲಾಗುತ್ತದೆ.
ಬೊಜ್ಜು ದೇಹವಿದ್ದರೆ ಆಗ ಖಂಡಿತವಾಗಿಯೂ ಅದರಿಂದ ಅನಾರೋಗ್ಯ ಹಾಗೂ ಅಡ್ಡಪರಿಣಾಮಗಳು ಕಟ್ಟಿಟ್ಟ ಬುತ್ತಿ. ದೇಹವು ಕ್ರಿಯಾಶೀಲವಾಗಿ (active) ಇಲ್ಲದೆ ಇದ್ದರೆ ಆಗ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
*ಇದು ಮೂತ್ರಪಿಂಡದ ಕಾಯಿಲೆಗೆ ಮೂಲ ಕಾರಣವಾಗಿದೆ.
* ಕ್ಯಾನ್ಸರ್ (cancer) ಕಾಯಿಲೆಗಳಿಗೆ ಕಾರಣವಾಗಬಹುದು.
* ಕೊಲೆಸ್ಟ್ರಾಲ್ ಹೆಚ್ಚಾಗಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
* ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ
* ಹೃದ್ರೋಗದ (Heart disease) ಸಮಸ್ಯೆ ಉಂಟಾಗುವುದು.
* ಗರ್ಭಾವಸ್ಥೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು.
ಇದನ್ನು ಓದಿ : Health : ಕಲ್ಲಂಗಡಿ ಹಣ್ಣಿನಿಂದ ತ್ವಚೆಗೆ ಆಗುವ ಪ್ರಯೋಜನಗಳು.!
* ಇದು ಒಂದು ರೋಗವಾಗಿ ಸಂಭವಿಸುತ್ತದೆ.
* ಪಾರ್ಶ್ವವಾಯು (Paralysis) ಸಮಸ್ಯೆಗಳು ಉಂಟಾಗುತ್ತವೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.