ಜನಸ್ಪಂದನ ನ್ಯೂಸ್, ಬೆಂಗಳೂರು : ಮುಜರಾಯಿ ಇಲಾಖೆ ಹಾಗೂ ಸಾರಿಗೆ (transportation) ಸಚಿವ ರಾಮಲಿಂಗಾರೆಡ್ಡಿ (Ramalingareddy) ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.
ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಇದನ್ನು ಓದಿ : 3 ಮದುವೆ ; ನಾಲ್ವರು ಬಾಲಿವುಡ್ ನಟಿಯರ ಜೊತೆ Affair ಹೊಂದಿದ್ದರು ಈ ಮಾಜಿ ಪ್ರಧಾನಿ.!
ಕೋರ್ಟ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಯಾಗಿದ್ದು, ಸಚಿವರಿಗೆ ಬಂಧನದ ಭೀತಿ (Arrest) ಶುರುವಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ, ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ (Violation) ಮಾಡಿದ್ದ ಕಾರಣಕ್ಕೆ ಕೇಸ್ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಕೋರ್ಟ್‌ನಿಂದ ಸಮನ್ಸ್ ಜಾರಿಯಾದರೂ ಸಚಿವ ರಾಮಲಿಂಗಾರೆಡ್ಡಿ ಕೋರ್ಟ್‌ಗೆ ಗೈರು ಹಾಜರಾಗಿದ್ದರು.
ಇದನ್ನು ಓದಿ : ವರ್ತೂರ್ ಸಂತೋಷ್’ಗೆ ಸನ್ಮಾನಿಸಿದ PSIಗೆ ಇಲಾಖೆ ನೀಡಿದ ಶಿಕ್ಷೆಯೇನು ಗೊತ್ತಾ.?
ಹೀಗಾಗಿ 42 ನೇ ಎಸಿಎಂಎಂ ಜಡ್ಜ್ ಜೆ.ಪ್ರೀತ್ ಜಾಮೀನು ರಹಿತ ವಾರೆಂಟ್ (warrant) ಜಾರಿ ಮಾಡಿ ಆದೇಶ ಮಾಡಿದ್ದಾರೆ.