Friday, June 21, 2024
spot_img
spot_img
spot_img
spot_img
spot_img
spot_img

Music : ಸಂಗೀತ ಕೇಳುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಖುಷಿಯಾಗಲಿ, ದುಃಖವಾಗಲಿ ನಾವು‌ ಸಂಗೀತವನ್ನು ಕೇಳಲು ಇಷ್ಟ ಪಡುತ್ತೇವೆ ನೋವಿಗೆ ಸಂಗಾತಿಯಾಗಿ ನಿಲ್ಲುವುದು ಸಂಗೀತ. ದುಃಖದ ಸಮಯದಲ್ಲಿ ಸಂಗೀತ (Music) ಕೇಳುವುದರಿಂದ ಮನಸ್ಸು ನಿರಾಳವಾಗಿ, ರಿಫ್ರೆಶ್ ನೆಸ್ ಸಿಗುತ್ತದೆ.

ಸಂಗೀತವು ಒಂದು ಸರಳ ಪರಿಹಾರ (Simple solution) ಮನುಷ್ಯನಿಗೆ ಒತ್ತಡದಿಂದ ಮಾತ್ರವಲ್ಲ ಆನಾರೋಗ್ಯ ಸಹ ಬಾಧಿಸದಂತೆ ಮಾಡುತ್ತದೆ. ಹೌದು ತಜ್ಞರ ಪ್ರಕಾರ, ನಿತ್ಯ ಸಂಗೀತ ಕೇಳುವುದರಿಂದ ನಮ್ಮ ಮನಸ್ಥಿತಿ ಹಗುರವಾಗುತ್ತದೆ ಹಾಗೂ ಬಹುತೇಕ ಆರೋಗ್ಯ ಸಮಸ್ಯೆ ಬರುವುದಿಲ್ಲ.

ಹಾಗಾದರೆ ಸಂಗೀತ ಕೇಳುವುದರಿಂದ ಆಗುವ ಪ್ರಯೋಜನಗಳ (benefits) ಬಗ್ಗೆ ತಿಳಿಯೋಣ.

ಇದನ್ನು ಓದಿ : ಬೇರೊಬ್ಬಳೊಂದಿಗಿದ್ದ ಪತಿಯನ್ನು ರೆಡ್ ಹ್ಯಾಂಡ್ಆಗಿ ಹಿಡಿದು ಕಪಾಳಮೋಕ್ಷ ಮಾಡಿದ ಪತ್ನಿ ; Video ನೋಡಿ.!

* ರಾತ್ರಿ ವೇಳೆ ನಿದ್ರೆ ಬಾರದೆ ಹೋದರೆ ಹಾಡನ್ನು ಕೇಳುವ ಅಭ್ಯಾಸವನ್ನು ಬೆಳೆಸಿಕೊಂಡರೆ ನಿದ್ರಾ (sleep) ಹೀನತೆ ಸಮಸ್ಯೆಯು ನಿಧಾನವಾಗಿ ದೂರವಾಗುತ್ತದೆ.

* ರಾತ್ರಿಯ ವೇಳೆಯಲ್ಲಿ ಊಟದ ಸಮಯದಲ್ಲಿ ಸಂಗೀತ ಕೇಳುತ್ತಿದ್ದರೆ ಆಹಾರ ಸೇವಿಸುವುದನ್ನು ಪ್ರಮಾಣವನ್ನು ಕಡಿಮೆ ಮಾಡಬಹುದು. ಸಂಗೀತ ಕೇಳುವುದರಿಂದ ಹೆಚ್ಚು ಕ್ಯಾಲೋರಿ (calories) ಇರುವ ಆಹಾರ ಸೇವನೆಯನ್ನು ಕಡಿಮೆ ಮಾಡಬಹುದು.

* ರಾತ್ರಿ ಮಲಗುವ ಮುನ್ನ ಸಂಗೀತವನ್ನು ಕೇಳಿಕೊಂಡು ಮಲಗುವುದರಿಂದಲೂ ಮನಸು ನಿರಾಳವಾಗುತ್ತದೆ. ಖಿನ್ನತೆಯಿಂದ (depression) ಬಳಲುತ್ತಿರುವವರಿಗೆ ಸಂಗೀತವು ಔಷಧಿಯಾಗಿ ಕೆಲಸ ಮಾಡುತ್ತದೆ.

* ಯಾವುದೇ ಕೆಲಸ ಮೇಲೆ ಗಮನ ಹರಿಸಲು ಸಾಧ್ಯವಿಲ್ಲ ಎನ್ನುವವರಿಗೆ ಈ ಸಂಗೀತ ಕೇಳುವ ಅಭ್ಯಾಸವು ಬೆಸ್ಟ್ ಹಾಡುಗಳನ್ನು (best songs) ಕೇಳಿದರೆ ಸಾಕಾರಾತ್ಮಕ ವಾತಾವರಣವು ಸೃಷ್ಟಿಯಾಗಿ, ಕೆಲಸದ ಮೇಲೆ ಗಮನ ಹರಿಸಲು ಸಹಾಯಕವಾಗುತ್ತದೆ.

* ಒತ್ತಡ ನಡುವೆ ಪ್ರತಿನಿತ್ಯ ಸಂಗೀತವನ್ನು ಕೇಳುವುದರಿಂದ ಒತ್ತಡವು ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಒತ್ತಡದ ಹಾರ್ಮೋನ್​ಗಳು ಕಡಿಮೆಯಾಗಿ ಆರಾಮದಾಯಕವೆನಿಸುತ್ತದೆ.

* ದಿನನಿತ್ಯ ಸಂಗೀತ ಕೇಳುವ ಅಭ್ಯಾಸವನ್ನು ರೂಢಿಸಿಕೊಂಡರೆ ನೆನಪಿನ ಶಕ್ತಿಯು ವೃದ್ಧಿಸುತ್ತದೆ. ಈ ಸಂಗೀತವು ಮೆದುಳನ್ನು ಸಕ್ರಿಯಗೊಳಿಸಿ (brain activate) ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಇದನ್ನು ಓದಿ : BSFನಲ್ಲಿ ಎಸ್ಐ, ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

* ಭಾವನೆಗಳನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ದೈನಂದಿನ ಜೀವನದಲ್ಲಿ ಸಂತೋಷ ಮತ್ತು ವಿಶ್ರಾಂತಿಯನ್ನು ಸೃಷ್ಟಿಸುವ ಸಾಮರ್ಥ್ಯ (ability) ಸಂಗೀತಕ್ಕಿದೆ.

* ಸಂಗೀತ ಕೇಳುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಸಂಗೀತವನ್ನು ಕೇಳುವುದರಿಂದ ಎಂಡಾರ್ಫಿನ್, ಆಕ್ಸಿಟೋಸಿನ್, ಸಿರೊಟೋನಿನ್, ಡೋಪಮೈನ್ ಇ ಹಾರ್ಮೋನ್‌ಗಳ ಮಟ್ಟ ಹೆಚ್ಚಾಗಿ ಸಂತೋಷವಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img