Sunday, September 8, 2024
spot_img
spot_img
spot_img
spot_img
spot_img
spot_img
spot_img

ದೀರ್ಘಕಾಲ ಕುಳಿತುಕೊಂಡೇ ಕೆಲಸ ಮಾಡ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯಲ್ಲಾಗಲಿ, ಆಫೀಸಿನಲ್ಲಾಗಲಿ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವುದು ತಂತ್ರಜ್ಞಾನ ಯುಗದಲ್ಲಿ ಅನಿವಾರ್ಯ. ಎಲ್ಲಾ ಕೆಲಸಗಳು ಕಂಪ್ಯೂಟರ್ ಮೂಲಕವೇ ಆಗುವ ಕಾರಣದಿಂದಾಗಿ ಬೆಳಗ್ಗಿನಿಂದ ಹಿಡಿದು ಸಂಜೆ ತನಕ ಕೆಲವರು ಕುಳಿತುಕೊಂಡೇ ಕೆಲಸ ಮಾಡಬೇಕಾಗುತ್ತದೆ.

ಇನ್ನೂ ಬ್ಯಾಂಕ್, ಆಧಾರ್ ಕೇಂದ್ರ, ನೆಮ್ಮದಿ ಕೇಂದ್ರ. ಐಟಿ ಇತ್ಯಾದಿಗಳಲ್ಲಿ ಕೆಲಸ ಮಾಡುವವರು ದಿನವಿಡಿ ಕುಳಿತುಕೊಂಡು ಪುರುಸೊತ್ತಿಲ್ಲದೆ ಕೆಲಸ ಮಾಡಬೇಕಾಗುವುದು.

ಇದನ್ನು ಓದಿ : CRPF : ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಅಲ್ಲದೇ ಕಚೇರಿಯಿಂದ ಮನೆಗೆ ಬಂದ ಬಳಿಕ ಕೂಡ ಕೆಲವರು ಟಿವಿ ಮುಂದೆ ಕುಳಿತುಕೊಂಡರೆ, ಇನ್ನು ಕೆಲವರು ಲ್ಯಾಪಟಾಪ್ ಅಥವಾ ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳುವರು. ಆದರೆ ಈ ಅಭ್ಯಾಸ ಒಳ್ಳೆಯದಲ್ಲ, ಅನೇಕ ರೋಗಗಳಿಗೆ ಕಾರಣವಾಗಬಹುದು.

* ಟಿವಿ ನೋಡುವುದು, ಕಂಪ್ಯೂಟರ್ ನಲ್ಲಿ ಕೆಲಸ ಅಥವಾ ಡ್ರೈವಿಂಗ್ ಮಾಡುವುದರಿಂದ ಹೆಚ್ಚು ಹೊತ್ತು ಕುಳಿತುಕೊಂಡು ಇರಬೇಕಾಗುತ್ತದೆ. ಇದು ಮುಂದೆ ಟೈಪ್ 2 ಮಧುಮೇಹಕ್ಕೆ ಕಾರಣವಾಗುವುದು.

ದೀರ್ಘಕಾಲ ಕುಳಿತುಕೊಂಡೇ ಇದ್ದರೆ ಅದರಿಂದ ದೇಹದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗುವುದು. ಇದು ಬೊಜ್ಜು ಮತ್ತು ರಕ್ತದಲ್ಲಿನ ಅಧಿಕ ಗ್ಲುಕೋಸ್ ಗೆ ಕಾರಣವಾಗಬಹುದು.

* ಅಧಿಕ ರಕ್ತದೊತ್ತಡದ ಸಮಸ್ಯೆಯು ಕಾಡುವುದು. ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ಮುಂದೆ ಹೃದಯದ ಕಾಯಿಲೆಗಳು ಬರುವುದು. ಬೊಜ್ಜು ಮತ್ತು ಒತ್ತಡದೊಂದಿಗೆ ಅಧಿಕ ರಕ್ತದೊತ್ತಡವು ಹೃದಯದ ಕಾಯಿಲೆಗಳಿಗೆ ಕಾರಣವಾಗುವುದು.

* 6-8 ಗಂಟೆಗಿಂತಲೂ ಹೆಚ್ಚು ಕಾಲ ಕುಳಿತುಕೊಂಡು ಕೆಲಸ ಮಾಡುವುದು ಮತ್ತು ವ್ಯಾಯಾಮ ಮಾಡದೆ ಇರುವುದರಿಂದ ಬೊಜ್ಜಿನ ಸಮಸ್ಯೆಯು ಕಾಡಬಹುದು. ದೀರ್ಘಕಾಲ ಕುಳಿತುಕೊಳ್ಳುವ ಕಾರಣ ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಮೆ ಆಗುವುದು ಮತ್ತು ಇದರಿಂದಾಗಿ ಹೃದಯಕ್ಕೆ ಸರಿಯಾಗಿ ರಕ್ತ ಸಂಚಾರವು ಆಗದೆ ಇರುವುದು

* ದೀರ್ಘಕಾಲ ವಿಮಾನ ಪ್ರಯಾಣ, ಟಿವಿ ನೋಡುವುದು ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಂತಹ ಜನರಲ್ಲಿ ಡಿವಿಟಿ ಸಮಸ್ಯೆಯು ಕಂಡುಬರುವುದು.

ಅಲ್ಲದೇ ಡಿವಿಟಿ ತೀವ್ರವಾದರೆ ಅದರಿಂದ ಸಾವು ಸಂಭವಿಸಬಹುದು. ಕಾಲಿನ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುವುದು ಮತ್ತು ಇದರಿಂದ ಹೃದಯ ಹಾಗೂ ಶ್ವಾಸಕೋಶಕ್ಕೆ ಸರಿಯಾಗಿ ರಕ್ತಸಂಚಾರವು ಆಗದೆ ಇರುವುದು.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋಕ್ಕಿಂತ ಮುಂಚೆ ನೀರು ಕುಡಿದರೆ ಏನಾಗುವುದು ಗೊತ್ತೇ.?

* ದೀರ್ಘಕಾಲ ಕುಳಿತುಕೊಂಡೇ ಇದ್ದರೆ ಅದರಿಂದ ಪರಿಧಮನಿ ಕಾಯಿಲೆಯು ಕಂಡುಬರುವುದು. ದೀರ್ಘಕಾಲ ಕುಳಿತುಕೊಂಡೇ ಇದ್ದರೆ ಅದರಿಂದ ಹಾರ್ಮೋನ್ ಮತ್ತು ಕಿಣ್ವಗಳು ಬಿಡುಗಡೆಯಾಗುವುದು ಇದರಿಂದಾಗಿ ಅಪಧಮನಿ ಕಾಠಿಣ್ಯವು ಕಾಡುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img