Saturday, July 27, 2024
spot_img
spot_img
spot_img
spot_img
spot_img
spot_img

CRPF : ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಕೇಂದ್ರೀಯ ಮೀಸಲು ಪೊಲೀಸ್ ಪಡೆ (Central Reserve Police Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್ ಕಮಾಂಡೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಆಫ್​​​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : Fire : ಅಗ್ನಿಶಾಮಕ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

ಹುದ್ದೆಯ ಮಾಹಿತಿ :
* ಸಿಆರ್​ಪಿಎಫ್​​​​ – 19.
* ಬಿಎಸ್​ಎಫ್​ – 29.
* ಐಟಿಬಿಪಿ – 29.
* ಎಸ್​ಎಸ್​​ಬಿ – 12. ಹೀಗೆ ಒಟ್ಟು 89 ಅಸಿಸ್ಟೆಂಟ್ ಕಮಾಂಡೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ :
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ :
ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2023ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :
* SC/ST ಅಭ್ಯರ್ಥಿಗಳು – 5 ವರ್ಷ.

ವೇತನ :
* ಮಾಸಿಕ ₹ 56,100.

ಉದ್ಯೋಗದ ಸ್ಥಳ :
* ಭಾರತದಲ್ಲಿ ಎಲ್ಲಿ ಬೇಕಾದರೂ.

ಇದನ್ನು ಓದಿ : ಅಂಚೆ ಕಛೇರಿಯಲ್ಲಿ 40,000ಕ್ಕೂ ಅಧಿಕ ನೇಮಕಾತಿ : 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

ಆಯ್ಕೆ ಪ್ರಕ್ರಿಯೆ :
* ಲಿಖಿತ ಪರೀಕ್ಷೆ.
* ದೈಹಿಕ ಪ್ರಮಾಣಿತ ಪರೀಕ್ಷೆ.
* ಮೆಡಿಕಲ್ ಟೆಸ್ಟ್​.
* ಮೆರಿಟ್ ಲಿಸ್ಟ್.
* ಸಂದರ್ಶನ.

ಅರ್ಜಿ ಹಾಕೋದು ಹೇಗೆ.?
ಅಭ್ಯರ್ಥಿಗಳು ಆಫ್​​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಈ ಕೆಳಗೆ ವಿಳಾಸ ನೀಡಲಾಗಿದೆ.

ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್(ನೇಮಕಾತಿ)
ಡೈರೆಕ್ಟರೇಟ್ ಜನರಲ್
ಸಿಆರ್‌ಪಿಎಫ್
ಈಸ್ಟ್ ಬ್ಲಾಕ್-VII
ಲೆವೆಲ್-IV
ಆರ್.ಕೆ. ಪುರಂ
ನವದೆಹಲಿ-66.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 01/05/2024.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 21/05/2024. (ನಾಳೆಯೇ)
spot_img
spot_img
- Advertisment -spot_img