Thursday, June 20, 2024
spot_img
spot_img
spot_img
spot_img
spot_img
spot_img

Crime : ತಾಯಿಯ ಎದುರೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತಾಯಿಯ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರಿನ (Bihar) ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ನಡೆದಿದೆ.

ಚಲಿಸುತ್ತಿದ್ದ ವಾಹನದಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (gang rape) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಅಂಚೆ ಕಛೇರಿಯಲ್ಲಿ 40,000ಕ್ಕೂ ಅಧಿಕ ನೇಮಕಾತಿ : 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

ಈ ವೇಳೆ ಬಾಲಕಿಯ ತಾಯಿ ಪ್ರತಿಭಟಿಸಲು ಮುಂದಾದಾಗ ಅವರು ಆಕೆಯನ್ನು ನಿರ್ದಯವಾಗಿ (Mercilessly) ಥಳಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಇಬ್ಬರೂ ಪ್ರಜ್ಞಾಹೀನರಾದಾಗ (When unconscious) ಕಾಮುಕರು ಶೇಖುಪ್ರಾ ಸೇತುವೆ ಬಳಿ ರಸ್ತೆ ಬದಿ ಎಸೆದು ಓಡಿ ಹೋಗಿದ್ದಾರೆ.

ಘಟನೆಯ ನಂತರ 112 ವಾಹನವು ಅಲ್ಲಿಗೆ ತಲುಪಿ ತಾಯಿ ಮತ್ತು ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದೆ. ಇದಾದ ನಂತರ ನೌಬತ್‌ಪುರ ಪೊಲೀಸ್ ಠಾಣೆಯ ತಂಡ ಆಸ್ಪತ್ರೆ ತಲುಪಿದೆ. ಸದ್ಯ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.

ಇದನ್ನು ಓದಿ : NIFT : ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮಹಿಳೆ ಮಗುವಿನೊಂದಿಗೆ ಬಂದಾಗ, ಇಬ್ಬರೂ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತಿದ್ದರು. ಬಳಿಕ ತಾಯಿಗೆ ಥಳಿಸಿ, ಮಗಳ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ನ್ಯಾಯಕ್ಕಾಗಿ ಮಹಿಳೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

spot_img
spot_img
- Advertisment -spot_img