Saturday, July 27, 2024
spot_img
spot_img
spot_img
spot_img
spot_img
spot_img

Bumper Good News : 25 ಸಾವಿರ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದ ನಮ್ಮ ಯಾತ್ರಿ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಕೆಲಸ ಸಿಗುತ್ತಿಲ್ಲ ಎಂದು ಜನರು ಬೇಸರವನ್ನು ಹೊರಹಾಕುತ್ತಲೇ ಇದ್ದರು. ಇದ್ದೀಗ ಅಂತ ಜನರಿಗಾಗಿ ನಮ್ಮ ಯಾತ್ರಿ (NY) ಅಪ್ಲಿಕೇಶನ್ ಮಂಗಳವಾರ ಬೆಂಗಳೂರಿನಲ್ಲಿ ಕ್ಯಾಬ್ ಸೇವೆಗಳನ್ನು ಅಧಿಕೃತವಾಗಿ ಪ್ರಾರಂಭಿಸಿದೆ. NY ಪ್ರಸ್ತುತ 25,000 ಕ್ಯಾಬ್ ಚಾಲಕರನ್ನು ಹೊಂದಿದೆ.

ಬೆಂಗಳೂರು ಮೂಲದ ಮೊಬಿಲಿಟಿ ಆಪ್ ನಮ್ಮ ಯಾತ್ರಿ (Namma Yatri Cab Service) ಟೆಕ್ ಕ್ಯಾಪಿಟಲ್‌ನಲ್ಲಿ ತನ್ನ ಕ್ಯಾಬ್ ಸೇವೆಗಳನ್ನು ಪ್ರಾರಂಭಿಸಿದೆ.

ಅಪ್ಲಿಕೇಶನ್ ಈಗಾಗಲೇ ಕೋಲ್ಕತ್ತಾ ಮತ್ತು ಕೊಚ್ಚಿಯಲ್ಲಿ ಕ್ಯಾಬ್ ಸೇವೆಗಳನ್ನು ಒದಗಿಸುತ್ತದೆ. ಇದು ಚೆನ್ನೈನಲ್ಲಿ ಸಾಫ್ಟ್-ಲಾಂಚ್ ಕ್ಯಾಬ್ ಸೇವೆಗಳನ್ನು ಹೊಂದಿದೆ ಮತ್ತು ಶೀಘ್ರದಲ್ಲೇ ಮುಂಬೈನಲ್ಲಿಯೂ ಸಾಫ್ಟ್-ಲಾಂಚ್ ಮಾಡಲಿದೆ.

ಇದನ್ನೂ ಓದಿ : ಅಂಚೆ ಕಛೇರಿಯಲ್ಲಿ 40,000ಕ್ಕೂ ಅಧಿಕ ನೇಮಕಾತಿ : 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

ನಮ್ಮ ಯಾತ್ರಿಯಿಂದ ಕ್ಯಾಬ್ ಸೇವೆ ಆರಂಭ :
ನಮ್ಮ ಯಾತ್ರಿ ಈಗ ಕ್ಯಾಬ್ ಸೇವೆಯನ್ನು ಪ್ರಾರಂಭಿಸಿದೆ. ನಾನ್-ಎಸಿ ಮಿನಿ ಎಸಿ, ಎಸಿ ಮಿನಿ ಎಸಿ ಮತ್ತು ಸೆಡಾನ್ ಮತ್ತು ಎಕ್ಸ್‌ಎಲ್ ಕ್ಯಾಬ್‌ಗಳನ್ನು ಹೊಂದಿದ್ದು 24/7 ಸೇವೆಯನ್ನು ‌ನೀಡುವ ಭರವಸೆಯನ್ನು ನೀಡಿದೆ.‌ ಪ್ರಯಾಣಿಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ನಾನ್-ಎಸಿ ಮಿನಿ ಕ್ಯಾಬ್‌ಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

25 ಸಾವಿರ ಚಾಲಕರಿಗೆ ಉದ್ಯೋಗ :
ಶೂನ್ಯ ಬಂಡವಾಳ ಹೂಡಿಕೆ ಅಡಿಯಲ್ಲಿ ಈ ಒಂದು ಉದ್ಯೋಗ ಕಲ್ಪಿಸಲಾಗಿದೆ.‌ಇದರಿಂದಾಗಿ 25 ಸಾವಿರ ಕ್ಯಾಬ್ ಚಾಲಕರಿಗೆ ಉದ್ಯೋಗ ದೊರಕಲಿದೆ. ಕರ್ನಾಟಕ ಸರ್ಕಾರ ನಿಗದಿಪಡಿಸಿದ ಬೆಲೆಗಳನ್ನು ಅನುಸರಿಸಿ ಚಾಲಕರಿಗೆ ಹಣವನ್ನು ಗಳಿಸಲು ದಾರಿದೀಪವಾಗಿದೆ. ನಮ್ಮ ಯಾತ್ರಿಯ ಆಟೋ ಚಾಲಕರು ರೂ. 420 ಕೋಟಿ ಗಳಿಸಲು ಸಹಾಯ ಮಾಡಿದೆ. ಪ್ರಸ್ತುತ 60 ಲಕ್ಷ ಬಳಕೆದಾರರನ್ನು ಹೊಂದಿದೆ ಈ ಮೊಬಿಲಿಟಿ ಆಪ್.

ಇದನ್ನೂ ಓದಿ : NIFT : ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸಲು ಪ್ರಯತ್ನ :
ಪರಿಸರ ಸ್ನೇಹಿ ವಾತಾವರಣ ಸೃಷಿ ಮಾಡಲು ನಮ್ಮ ಯಾತ್ರಿ ಅ್ಯಪ್ ತಂಡ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಅಂಗವೈಕಲ್ಯ ಸ್ನೇಹಿ ಸವಾರಿಗಳು, ಹೆಚ್ಚುವರಿ ಲಗೇಜ್‌ಗಳು, ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವುದು ಮತ್ತು ಸಾರ್ವಜನಿಕ ಸಾರಿಗೆ ಕೇಂದ್ರಗಳಿಗೆ ಪ್ರವಾಸಗಳಂತಹ ವಿಶೇಷ ಸೌಲಭ್ಯವನ್ನು ಸಹ ಒದಗಿಸುತ್ತವೆ.

ಒಂದು ಲಕ್ಷ‌ ಚಾಲಕರನ್ನು ಕರೆ ತರುವ ಗುರಿ :
ಮುಂದಿನ ಆರು ತಿಂಗಳಲ್ಲಿ ಕನಿಷ್ಠ 1 ಲಕ್ಷ ಚಾಲಕರನ್ನು ಕರೆತರುವ ಗುರಿಯನ್ನು ಈ ಅಪ್ಲಿಕೇಶನ್ ಹೊಂದಿದೆ. ಈಗಾಗಲೇ ಆಟೋ ಚಾಲಕರಿಗೆ ₹420 ಕೋಟಿ ಗಳಿಸಲು ಸಹಾಯ ಮಾಡಿದೆ. ಪ್ರಸ್ತುತ 60 ಲಕ್ಷ ಬಳಕೆದಾರರನ್ನು ಹೊಂದಿದೆ. ಓಲಾ ಮತ್ತು ಉಬರ್ ನಡುವಿನ ಜಗಳದ ನಡುವೆ ನಮ್ಮ ಯಾತ್ರಿ ಆ್ಯಪ್ ಈ ಸೇವೆಯನ್ನು ಒದಗಿಸಿದೆ.

ಓಲಾ‌ ಹಾಗೂ ಊಬರ್ ರೀತಿಯಲ್ಲಿ ಆ್ಯಪ್ ಡೌನ್‌ಲೌಡ್ ಮಾಡಿಕೊಂಡು ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ನಮ್ಮ ಯಾತ್ರಿಯು ಗ್ರಾಹಕರನ್ನು ನೇರವಾಗಿ ಚಾಲಕರಿಗೆ ಸಂಪರ್ಕಿಸುತ್ತದೆ ಮತ್ತು ಮಧ್ಯವರ್ತಿಗಳನ್ನು ತೆಗೆದುಹಾಕುವ ಮೂಲಕ ಗ್ರಾಹಕರಿಗೆ ಕೈಗೆಟುಕುವ ದರಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುವ ಗುರಿಯನ್ನು ಹೊಂದಿದೆ. 

ಇದನ್ನೂ ಓದಿ : ಐಟಿಐ, ಡಿಪ್ಲೊಮ, ಬಿಇ ಮತ್ತು ಯಾವುದೇ ಪದವಿ ಪಡೆದಿದ್ದೀರಾ.? HAL ನಲ್ಲಿದೆ ಉದ್ಯೋಗವಕಾಶ.!

ದರ ನಿಗಧಿ :

NY AC Mini ಗೆ 4km ವರೆಗೆ 100 ರೂ ಮತ್ತು ಕನಿಷ್ಠ ದರಕ್ಕಿಂತ ಪ್ರತಿ ಕಿಲೋಮೀಟರ್‌ಗೆ 18 ರೂ, ಸೆಡಾನ್‌ಗೆ 115 ರಿಂದ 4km ವರೆಗೆ ಮತ್ತು ಕನಿಷ್ಠ ದರಕ್ಕಿಂತ ಪ್ರತಿ ಕಿಲೋಮೀಟರ್‌ಗೆ 21 ರೂ, XL ಕ್ಯಾಬ್‌ಗಳಿಗೆ 130 ರಿಂದ 4km ವರೆಗೆ ದರವನ್ನು ನಿಗದಿಪಡಿಸಿದೆ. ಮತ್ತು ಕನಿಷ್ಠ ದರಕ್ಕಿಂತ ಪ್ರತಿ ಕಿಲೋಮೀಟರ್‌ಗೆ 24 ರೂ. XL ಕ್ಯಾಬ್‌ಗಳಿಗೆ ಪಿಕಪ್ ಶುಲ್ಕಗಳು ರೂ 30 ಆಗಿದ್ದರೆ ಇತರರಿಗೆ ರೂ 20 ಎಂದು ನಿಗದಿಪಡಿಸಲಾಗಿದೆ. NY ರಾತ್ರಿ 10 ರಿಂದ ಬೆಳಿಗ್ಗೆ 5 ರ ನಡುವೆ ಹಗಲಿನ ಶುಲ್ಕದ 1.5 ಪಟ್ಟು ವಿಧಿಸುತ್ತದೆ.

spot_img
spot_img
- Advertisment -spot_img