ಜನಸ್ಪಂದನ ನ್ಯೂಸ್, ಡೆಸ್ಕ್ : ಅಮೆರಿಕದ ನ್ಯೂಯಾರ್ಕ್‌ನಲ್ಲಿ 36 ವರ್ಷದ ಮಹಿಳೆಯೊಬ್ಬಳ ಮೇಲೆ ನಡೆದ ಭೀಕರ ದಾಳಿ ಹಾಗೂ ಅತ್ಯಾಚಾರ (sexual-assault) ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 28ರ ಮುಂಜಾನೆ ಅಪಾರ್ಟ್‌ಮೆಂಟ್ ಕಟ್ಟಡದೊಳಗೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ :
ವರದಿಗಳ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ನ್ಯೂಯಾರ್ಕ್‌ನ ನಾರ್ವುಡ್ ಪ್ರದೇಶದ ಪುಟ್ನಮ್ ಪ್ಲೇಸ್ ಬಳಿ ಇರುವ ವಸತಿ ಕಟ್ಟಡಕ್ಕೆ ಆರೋಪಿಯು ಪ್ರವೇಶಿಸಿದ್ದಾನೆ. ಕಟ್ಟಡದೊಳಗೆ ಮಹಿಳೆಯನ್ನು ಗುರಿಯಾಗಿಸಿಕೊಂಡು ಶಾರೀರಿಕ ದಾಳಿ ನಡೆಸಿ ನೆಲಕ್ಕೆ ತಳ್ಳಿದ ಬಳಿಕ ಆಕೆಯ ಮೇಲೆ ಅತ್ಯಾಚಾರ (sexual-assault) ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಈ ವೇಳೆ ಮಹಿಳೆ ತನ್ನನ್ನು ಬಿಡುವಂತೆ ಮನವಿ ಮಾಡಿದ್ದು, ತನ್ನ ಮೇಲೆ ಅತ್ಯಾಚಾರ (sexual-assault) ಮಾಡದಂತೆ ಮನವಿ ಮಾಡಿದ್ದಾಳೆ. ಅಲ್ಲದೆ ಎಷ್ಟು ಹಣ ಬೇಕೆಂದು ಕೇಳಿಕೊಂಡಿದ್ದಾಳೆ. ಆದರೆ ದಾಳಿಕೋರನು ಅತ್ಯಾಚಾರ (sexual-assault) ಮಾಡಿ, ಆಕೆಯ ಪರ್ಸ್‌ನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಆ ಪರ್ಸ್‌ನಲ್ಲಿ 250 ಡಾಲರ್ ನಗದು, ಆಕೆಯ ಗುರುತಿನ ಚೀಟಿ ಹಾಗೂ ಕೀಲಿಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಮತ್ತು ಬಂಧನ :
ಘಟನೆಯ ನಂತರ ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಕಟ್ಟಡದೊಳಗೆ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತು. ಆ ವಿಡಿಯೋದಲ್ಲಿ ಆರೋಪಿಯ (sexual-assault) ನ್ನು ಕುತ್ತಿಗೆಗೆ ಟವಲ್ ಸುತ್ತಿಕೊಂಡು, ಪ್ಯಾಂಟ್ ಎಳೆಯುತ್ತ ಓಡುತ್ತಿರುವ ದೃಶ್ಯಗಳು ದಾಖಲಾಗಿದ್ದವು.
Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಮರುದಿನ ಮಧ್ಯಾಹ್ನ ಬ್ರಾಂಕ್ಸ್‌ನ ಮತ್ತೊಂದು ಕಟ್ಟಡದೊಳಗೆ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದರು. ಸ್ಥಳದಿಂದ ಸುಮಾರು ಎರಡು ಮೈಲು ದೂರದಲ್ಲಿ ಆತನನ್ನು ಪತ್ತೆ ಹಚ್ಚಲಾಯಿತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವನನ್ನು ಗುರುತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ವಿವರ :
ಬಂಧಿತನನ್ನು ಕೆನ್ನೆತ್ ಸಿರಿಬೋ ಎಂದು ಗುರುತಿಸಲಾಗಿದೆ. ಅವನು ನಿರಾಶ್ರಿತನಾಗಿದ್ದು, ನ್ಯೂಜೆರ್ಸಿಯ ಯೂನಿಯನ್ ಬೀಚ್‌ನಲ್ಲಿ ತಂಗಿದ್ದಾನೆ ಎಂದು ವರದಿಗಳು ತಿಳಿಸಿವೆ. ನ್ಯೂಯಾರ್ಕ್‌ನಲ್ಲಿ ಇದುವರೆಗೂ ಆತನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿರಲಿಲ್ಲ.
ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ದಾಳಿ, ದರೋಡೆ, ಕಳ್ಳತನ ಹಾಗೂ ಕ್ರಿಮಿನಲ್ ಪ್ರಕರಣಗಳು ದಾಖಲಿಸಿದ್ದಾರೆ. ಪ್ರಸ್ತುತ ತನಿಖೆ ಮುಂದುವರಿದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲೇ ಹಂಚಿಕೊಳ್ಳುವ ನಿರೀಕ್ಷೆಯಿದೆ.
ಅತ್ಯಾಚಾರ (sexual-assault) ಮಾಡಿ ಓಡಿಹೋದ ನಿರಾಶ್ರಿತ ವ್ಯಕ್ತಿಯ ವಿಡಿಯೋ :
🚨WANTED FOR A Rape: on Sunday, September 28, 2025, at approximately 5:00 A.M., in the vicinity of East Gun Hill Road and Putnam Place, in the confines of the 52nd Precinct, a 36-year-old female victim was sexually assaulted by an unknown individual pic.twitter.com/hhkCCqUTZ3
— NYPD Crime Stoppers (@NYPDTips) September 29, 2025
Note : Sexual-assault is an act of sexual abuse in which one intentionally sexually touches another person without that person’s consent, or coerces or physically forces a person to engage in a sexual act against their will.
ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮಲ್ಲಿ ಅನೇಕರು ದಿನವನ್ನು ಪ್ರಾರಂಭಿಸುವ ಮುನ್ನವೇ ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ (Tea or Coffee) ಕುಡಿಯದೇ ಇರಲಾರರು. ಕೆಲವರಿಗೆ ಇದು ವಾಹನಕ್ಕೆ ಇಂಧನ ಹಾಕಿದಂತೆ – ಸಮಯಕ್ಕೆ ಸರಿಯಾಗಿ ಚಹಾ ಸಿಗದಿದ್ದರೆ ದಿನವೇ ಸರಿಯಾಗಿ ಹೋಗುವುದಿಲ್ಲ ಅನ್ನುವ ಮಟ್ಟಿಗೆ ಈ ಅಭ್ಯಾಸ ಬೇರೂರಿದೆ.
ಆದರೆ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ (Tea) ಸೇವಿಸುವುದರಿಂದ ದೇಹದ ಮೇಲೆ ಹಲವು ರೀತಿಯ ಹಾನಿಕರ ಪರಿಣಾಮಗಳು ಬೀಳಬಹುದು.
Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಖಾಲಿ ಹೊಟ್ಟೆಯಲ್ಲಿ ಟೀ (Tea) ಕುಡಿಯುವ ಅಪಾಯ :
ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರ ನಮ್ಮ ದೇಹದ ಆಮ್ಲೀಯತೆ (Acidity) ಮತ್ತು ಕ್ಷಾರೀಯತೆ (Alkalinity) ಮಟ್ಟಗಳು ಸ್ವಲ್ಪ ಮಟ್ಟಿಗೆ ಅಸ್ಥಿರವಾಗಿರುತ್ತವೆ. ಈ ಸಂದರ್ಭದಲ್ಲಿ ತಕ್ಷಣ ಬಿಸಿ ಚಹಾ (Tea) ಸೇವಿಸಿದರೆ ಆ ಸಮತೋಲನ ಇನ್ನಷ್ಟು ಹಾಳಾಗುತ್ತದೆ.
ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು, ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು ಹಾಗೂ ದೀರ್ಘಾವಧಿಯಲ್ಲಿ ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ.
Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!
ಅಷ್ಟೇ ಅಲ್ಲದೆ, ಬೆಳಿಗ್ಗಿನ ಟೀ (Tea) ಅಭ್ಯಾಸವು ಹಲ್ಲುಗಳ ಮೇಲಿನ ಇನಾಮಲ್ ಪದರವನ್ನು ಹಾನಿಗೊಳಿಸಿ ದಂತ ಸಂಬಂಧಿತ ಕಾಯಿಲೆಗಳಿಗೂ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಬಾಯಿಯ ವಾಸನೆ ಮತ್ತು ಹಲ್ಲುಗಳ ಕಲೆ ಕೂಡ ಹೆಚ್ಚಾಗುತ್ತದೆ.
ಮಕ್ಕಳಿಗೆ ಇನ್ನಷ್ಟು ಅಪಾಯಕಾರಿ :
ಇಂತಹ ಅಭ್ಯಾಸವನ್ನು ಮಕ್ಕಳಲ್ಲಿ ಮಾಡಿಸುವುದು ಇನ್ನೂ ಅಪಾಯಕಾರಿ. ಅವರ ಜೀರ್ಣಾಂಗ ವ್ಯವಸ್ಥೆ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಈ ಸಮಯದಲ್ಲಿ ಬಿಸಿ ಚಹಾ ಕೊಟ್ಟರೆ ಅದು ನೇರವಾಗಿ ಜೀರ್ಣಾಂಗದ ಮೇಲೆ ಒತ್ತಡ ಬೀರುತ್ತದೆ ಮತ್ತು ದೀರ್ಘಾವಧಿಯಲ್ಲಿ ಮಕ್ಕಳ ಆರೋಗ್ಯ ಹಾನಿಯಾಗಬಹುದು.
ಆದ್ದರಿಂದ ಪೋಷಕರು ಮಕ್ಕಳ ಹಠಕ್ಕೆ ಮಣಿದು ಬೆಳಿಗ್ಗೆ ಟೀ (Tea) ಕೊಡುವುದನ್ನು ತಪ್ಪಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಯಾವಾಗ ಚಹಾ ಕುಡಿಯಬೇಕು? :
ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದು ತಕ್ಷಣ ಟೀ ಕುಡಿಯುವ ಬದಲು ಮೊದಲು ಬೆಚ್ಚಗಿನ ನೀರು ಅಥವಾ ಹಣ್ಣುಗಳನ್ನು ಸೇವಿಸುವುದು ಒಳಿತು. ಬಳಿಕ ಸ್ವಲ್ಪ ಹೊತ್ತಿಗೆ ತಿಂಡಿ ಮಾಡಿದ ನಂತರ ಚಹಾ ಅಥವಾ ಕಾಫಿ ಕುಡಿಯಬಹುದು.
ಅದೇ ರೀತಿ, ಊಟ ಮಾಡಿದ ತಕ್ಷಣ ಚಹಾ ಕುಡಿಯುವ ಅಭ್ಯಾಸವೂ ಒಳ್ಳೆಯದಲ್ಲ. ಏಕೆಂದರೆ ಅದು ಆಹಾರದಲ್ಲಿನ ಕಬ್ಬಿಣ (Iron) ಸೇರಿದಂತೆ ಹಲವು ಪೋಷಕಾಂಶಗಳ ಶೋಷಣೆಯನ್ನು ತಡೆಯುತ್ತದೆ. ಹೀಗಾಗಿ ಊಟದ ನಂತರ ಕನಿಷ್ಠ ಒಂದು ಗಂಟೆಯ ನಂತರ ಮಾತ್ರ ಚಹಾ ಸೇವಿಸುವುದು ಉತ್ತಮ.
Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಸಂಪಾದಕೀಯ :
ಒಟ್ಟಿನಲ್ಲಿ, ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಚಹಾ (Tea) ಕುಡಿಯುವ ಅಭ್ಯಾಸವು ದೇಹಕ್ಕೆ ಅಗತ್ಯವಿಲ್ಲದ ಒತ್ತಡವನ್ನು ತಂದುಕೊಡುತ್ತದೆ. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳು, ದಂತ ಕಾಯಿಲೆಗಳು ಮತ್ತು ಜೀರ್ಣಕ್ರಿಯಾ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಈ ಅಭ್ಯಾಸವನ್ನು ಬದಲಿಸಿ, ಸರಿಯಾದ ಸಮಯದಲ್ಲಿ ಮಾತ್ರ ಚಹಾ ಅಥವಾ ಕಾಫಿ ಸೇವಿಸುವುದು ಒಳಿತು.