Sunday, September 8, 2024
spot_img
spot_img
spot_img
spot_img
spot_img
spot_img
spot_img

BSNLಗೆ ಪೋರ್ಟ್ ಆಗ್ತೀರಾ.? ನಿಮ್ಮ ಸುತ್ತಮುತ್ತ ಟವರ್ ಇದೆಯಾ ಅಥವಾ ಇಲ್ವಾ ಅಂತ ಚೆಕ್ ಮಾಡಿಕೊಳ್ಳಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಎಸ್ಎನ್ಎಲ್ ಗ್ರಾಹಕರು ಶೀಘ್ರದಲ್ಲಿಯೇ ವೇಗದ ಇಂಟರ್ನೆಟ್ ಸೇವೆಗಳನ್ನು ಪಡೆಯುತ್ತಾರೆ. ಯಾಕೆಂದರೆ ಶೀಘ್ರದಲ್ಲಿ ತನ್ನ ಗ್ರಾಹಕರಿಗೆ ಬಿಎಸ್ಎನ್ಎಲ್ 4G ನೆಟ್ವರ್ಕ್ ಅನ್ನು ಪರಿಚಯಿಸಲಿದೆ.

ಇದನ್ನು ಓದಿ : ವೇಶ್ಯಾವಾಟಿಕೆಗೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ ವಕೀಲ ; High court ಹೇಳಿದ್ದೇನು.?

ರಾಜ್ಯದಲ್ಲಿ ಈ ಕಂಪನಿಯು ಈಗಾಗಲೇ 200 ಟವರ್ ಗಳನ್ನು ಸ್ಥಾಪಿಸಿದೆ. ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ಇದರ ಸೇವೆ ಈಗಾಗಲೇ ಆರಂಭ ಆಗಿದೆ. ಅಲ್ಲಿನ ಗ್ರಾಹಕರು ಈಗ ಯಾವುದೇ ಅಡೆತಡೆ ಇಲ್ಲದೆ ವೇಗದ ಇಂಟರ್ನೆಟ್ ಸೇವೆಗಳನ್ನು ಪಡೆಯುತ್ತಿದ್ದಾರೆ.

ಅನೇಕ ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಹೆಚ್ಚಿಸಿದ ನಂತರ, ಜನರು ಸರ್ಕಾರಿ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ನತ್ತ ಮುಖ ಮಾಡಿದ್ದಾರೆ. ಏಕೆಂದರೆ, BSNLನ ರೀಚಾರ್ಜ್ ಯೋಜನೆಗಳು ಇನ್ನು ಕೂಡಾ ಅಗ್ಗವಾಗಿವೆ.

ಆದರೆ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡುವುದಕ್ಕಿಂತ ಮುಂಚೆ ನೀವು ವಾಸಿಸುತ್ತಿರುವ ಕಡೆ BSNL ಟವರ್ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ಇದನ್ನು ಓದಿ : Nurse ಜೊತೆ ಹೆಡ್ ಕಾನ್ಸ್‌ಟೇಬಲ್ ಅಕ್ರಮ ಸಂಬಂಧ ; ರೆಡ್ ಹ್ಯಾಂಡ್ಆಗಿ ಹಿಡಿದ ಕಾನ್ಸ್‌ಟೇಬಲ್ ಪತ್ನಿ.!

BSNL ಟವರ್ ಹತ್ತಿರದಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಹೇಗೆ?
ಮೊದಲು ಈ ಸರ್ಕಾರಿ ವೆಬ್‌ಸೈಟ್‌ ಕ್ಲಿಕ್ ಮಾಡಬೇಕು https://tarangsanchar.gov.in/

ಪುಟವನ್ನು ಕೆಳಗೆ ಸ್ಕ್ರೊಲ್ ಮಾಡಿ My Location ಬಟನ್ ಕ್ಲಿಕ್ ಮಾಡಬೇಕು.

ಮುಂದಿನ ಪುಟದಲ್ಲಿ, ಹೆಸರು, ಇಮೇಲ್, ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು.

ಬಳಿಕ Send me a mail with OTP ಮೇಲೆ ಕ್ಲಿಕ್ ಮಾಡಬೇಕು.

ಮೇಲ್ ನಲ್ಲಿ ಬಂದಿರುವ OTP ಹಾಕಿರಿ.

ಮುಂದಿನ ಪುಟದಲ್ಲಿ ನಿಮಗೆ ಮ್ಯಾಪ್ ಕಾಣಿಸುತ್ತದೆ. ಸುತ್ತಲಿನ ಎಲ್ಲಾ ಮೊಬೈಲ್ ಟವರ್‌ಗಳು ಇಲ್ಲಿ ಕಾಣಿಸುತ್ತವೆ.

ಇದನ್ನು ಓದಿ : ನೀವು BSNL ಸಿಮ್ ಬಳಕೆ ಮಾಡ್ತೀರಾ.? ಹಾಗಿದ್ರೆ ನಿಮಗೊಂದು ಸಿಹಿಸುದ್ದಿ.!

ಯಾವ ಟವರ್ ಮೇಲಾದರೂ ಕ್ಲಿಕ್ ಮಾಡಿ. ಅಲ್ಲಿ ಸಿಗ್ನಲ್ ಪ್ರಕಾರ (2G/3G/4G ಅಥವಾ 5G)ಮತ್ತು ಅದು ಯಾವ ಕಂಪನಿಯ ಟವರ್ ಎಂಬುದರ ಮಾಹಿತಿ ಸಿಗುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img