ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಗೋಪ್ಯವಾಗಿ ಚಿತ್ರೀಕರಿಸಲ್ಪಟ್ಟ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ದಾಂಪತ್ಯದಲ್ಲಿ ನಂಬಿಕೆ, ನಿಷ್ಠೆ ಮತ್ತು ಸಂಬಂಧಗಳ ಭದತೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಪತಿಯೊಬ್ಬರು ಅನುಮಾನದಿಂದ ರಹಸ್ಯವಾಗಿ ಮಾಡಿದ್ದ ಚಿತ್ರೀಕರಣದಲ್ಲಿ ಪತ್ನಿ ಬಾತ್‌ರೂಂ (Bathroom) ನಲ್ಲಿದ್ದಾಗ ನಡೆದ ಸಂಭಾಷಣೆ ಸುದ್ದಿಯ ಕೇಂದ್ರಬಿಂದುವಾಗಿದೆ.
ನಿಜವಾದ ಪತಿಯ ಅನುಮಾನ :
ವರದಿಗಳ ಪ್ರಕಾರ, ಪತ್ನಿಯು ಬಾತ್ರೂಮ್ (Bathroom) ನಲ್ಲಿ ದೀರ್ಘಕಾಲ ಕಳೆಯುತ್ತಿರುವುದರಿಂದ ಅನುಮಾನಗೊಂಡ ಪತಿ, ಕಿಟಕಿಯ ಮೂಲಕ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!
ಆ ದೃಶ್ಯದಲ್ಲಿ ಮಹಿಳೆ ಬಾತ್ರೂಮ್ (Bathroom) ನೆಲದ ಮೇಲೆ ಕುಳಿತು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಡಿಮೆ ಧ್ವನಿಯಲ್ಲಿ ಮಾತನಾಡುತ್ತಿರುವುದು, ಕೈ ಚಳಕುಗಳಿಂದ ಸನ್ನೆ ಮಾಡುತ್ತಿರುವುದು ಸ್ಪಷ್ಟವಾಗಿದೆ.
ಇನ್ನೂ ಆಘಾತಕಾರಿ ವಿಷಯವೆಂದರೆ, ಮಹಿಳೆಯು ತನ್ನ ಪ್ರಿಯಕರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದೂ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಂಡ ಪತಿಯ ಅನುಮಾನ ನಿಜವಾಗಿ ಬದಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ bathroom ವಿಡಿಯೋ ಬಗ್ಗೆ ಭಾರೀ ಚರ್ಚೆ :
ಸದ್ಯ ಈ ಬಾತ್‌ರೂಂ (Bathroom) ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ Twitter) ಯಲ್ಲಿ @UzmaParveen94 ಹೆಸರುಳ್ಳ ಖಾತೆ ಹಂಚಿಕೊಂಡಿದೆ. “ಇಂದಿನ ಸಂಬಂಧಗಳು ಮುರಿದು ಬೀಳಲು ಕಾರಣ ಇದೇ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿದ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಯಿತು.
ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.
ಅನೇಕ ಬಳಕೆದಾರರು ಮಹಿಳೆಯ ಬಾತ್‌ರೂಂ (Bathroom) ನಲ್ಲಿಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಲವರು,
- “ಸಂಬಂಧದಲ್ಲಿ ಅನುಮಾನ ಹುಟ್ಟಿದರೆ ನಂಬಿಕೆ ಉಳಿಯುವುದಿಲ್ಲ”,
- “ನಂಬಿಕೆ ಇಲ್ಲದ ಸಂಬಂಧ ಹೆಚ್ಚು ದಿನ ಉಳಿಯದು”,
- “ಈ ವಿಡಿಯೋದಲ್ಲೇ ಸತ್ಯ ಹೊರಬಿದ್ದಿದೆ”.
ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಹೊಸ ತಲೆಮಾರಿನ ಸಂಬಂಧಗಳಲ್ಲಿ ವಿಶ್ವಾಸದ ಕೊರತೆಯೇ ದೊಡ್ಡ ಸಮಸ್ಯೆ ಎಂದು ಹಲವು ನೆಟಿಜನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : Kali Mata ವಿಗ್ರಹಕ್ಕೆ ‘ಮದರ್ ಮೇರಿ’ ಅಲಂಕಾರ ; ಭಕ್ತರಲ್ಲಿ ಆಕ್ರೋಶ, ಪೂಜಾರಿ ಬಂಧನ.!
ವಿಡಿಯೋ ವೈರಲ್ ಕಾರಣ – ನಂಬಿಕೆ ಕುಸಿತದ ಚರ್ಚೆ :
ಈ ಒಂದು ಚಿಕ್ಕ ವಿಡಿಯೋ ಈಗ ಆನ್‌ಲೈನ್‌ನಲ್ಲಿ ದಾಂಪತ್ಯ ಜೀವನ, ನಂಬಿಕೆ ಮತ್ತು ಗೌಪ್ಯತೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಲವರು ‘ಡಿಜಿಟಲ್ ಯುಗದಲ್ಲಿ ನಂಬಿಕೆ ಮತ್ತು ನಿಷ್ಠೆ ಕುಸಿಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.

ಜನಸ್ಪಂದನ ನ್ಯೂಸ್, ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತ್ನಿಯೋರ್ವಳು (Wife) ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಪರಿಹಾರ ಕಂಡಿರುವ ಪೊಲೀಸರು, ಇದು ಸುಟ್ಟ ಶವವಲ್ಲ, ಇದೊಂದು ಯೋಜಿತ ಕೊಲೆ (Planed Murder) ಎಂದು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.
ಮೃತನನ್ನು ಯಾದಗಿರಿ ಮೂಲದ ಬಸವರಾಜು (28) ಎಂದು ಗುರುತಿಸಲಾಗಿದೆ. ಈ ಭೀಕರ ಕೊಲೆ ಪ್ರಕರಣದಲ್ಲಿ ಬಸವರಾಜು ಪತ್ನಿ (Wife) ಶರಣಮ್ಮ (25), ಆಕೆಯ ಪ್ರಿಯಕರ ವೀರಭದ್ರ (19) ಹಾಗೂ ಸಹಾಯಕ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಕಾರಣಕ್ಕೆ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿಸಿದ್ದಾಳೆ ಎಂಬ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ಇದನ್ನು ಓದಿ : Crime : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಇಂಜಿನಿಯರ್ ಅನುಮಾನಸ್ಪದ ಸಾವು ; ಕಾರಣ ನಿಗೂಢ.!
ಅಕ್ರಮ ಸಂಬಂಧವೇ ಕೊಲೆಗೆ ಕಾರಣ :
ನಾಲ್ಕು ವರ್ಷಗಳ ಹಿಂದೆ ಮದುವೆಯಾದ ಬಸವರಾಜು–ಶರಣಮ್ಮ ದಂಪತಿ, ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿತ ವೀರಭದ್ರನ ತಂದೆಯ ಬಳಿ ದಂಪತಿಗಳು ಗಾರೆ ಕೆಲಸದಲ್ಲಿ ತೊಡಗಿದ್ದರು. ವೀರಭದ್ರನ ತಂದೆ ಕೆಲಸಗಾರರ ಮೇಲ್ವಿಚಾರಣೆ ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು.
ಹೀಗೆ ಕೆಲಸದ ಸ್ಥಳದಲ್ಲಿ ಕೆಲಸಗಾರರ ಮೇಲ್ವಿಚಾರಣೆ ಮಾಡುತ್ತಿದ್ದ ವೀರಭದ್ರ ಮತ್ತು ಶರಣಮ್ಮ ನಡುವೆ ನಿಧಾನವಾಗಿ ಸಲುಗೆ ಬೆಳೆದಿದ್ದು, ನಂತರ ಅದು ಅಕ್ರಮ ಸಂಬಂಧಕ್ಕೆ ಮಾರ್ಪಟ್ಟಿದೆ.
ಕೊಲೆ ಕ್ರೂರತೆ :
ಘಟನೆಯ ದಿನ ಪತ್ನಿ (Wife) ಶರಣಮ್ಮನ ಪತಿ ಮದ್ಯಪಾನ ಮಾಡಿ ಮಲಗಿದ್ದಾಗ, ವೀರಭದ್ರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ಬಸವರಾಜುವಿನ ತಲೆಗೆ ಕಲ್ಲಿನಿಂದ ಹೊಡೆದು, ನಂತರ ಅವನಿಗೆ ನೇಣು ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೇರೆಡೆ ಸಾಗಿಸಲು ಅನಿಲ್ ಸಹಾಯ ಮಾಡಿದ್ದಾನೆ.
ಇದನ್ನು ಓದಿ : Crime : ಕರ್ನಾಟಕದ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರ ಕಗ್ಗೊಲೆ.!
ಶವ ಸುಟ್ಟು ನಾಶಪಡಿಸಿದ ಆರೋಪಿಗಳು :
ಬಸವರಾಜುವಿನ ಶವವನ್ನು ಬಿಳಿ ಬಣ್ಣದ ಕಾರಿನಲ್ಲಿ ಗಂಗೊಂಡಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಸುಟ್ಟ ಮರು ದಿನವೇ ಆರೋಪಿಗಳು ಅದೇ ಸ್ಥಳಕ್ಕೆ ಬಂದು ಶವದ ಸ್ಥಿತಿಯನ್ನು ಪರಿಶೀಲಿಸಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ನಾಟಕ : ‘ಗಂಡ ಕಾಣೆಯಾಗಿದ್ದಾನೆ’ ಎಂದು ಪೊಲೀಸರಿಗೆ ದೂರು ನೀಡಿದ್ದ ಪತ್ನಿ (Wife) :
ಶವ ಸುಟ್ಟ ಒಂದು ದಿನದ ನಂತರ ಪತ್ನಿ (Wife) ಶರಣಮ್ಮ ಮನೆಗೆಲ್ಲಿದ್ದ ನೆತ್ತರು ತೊಳೆಯುವ ಮೂಲಕ ಸುಳಿವು ಅಡಗಿಸಲು ಯತ್ನಿಸಿದ್ದಾಳೆ. ನಂತರ, “ನನ್ನ ಗಂಡ ಕಾಣೆಯಾಗಿದ್ದಾನೆ, ಹುಡುಕಿಕೊಡಿ” ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ನಾಟಕ ವಾಡಿದ್ದಾಳೆ.
ಆದರೆ, ಈ ವೇಳೆಗೆ ಸಿಸಿಟಿವಿ ದೃಶ್ಯಗಳು, ಕಾಲ್ ಡೀಟೇಲ್ಸ್ ಹಾಗೂ ತನಿಖಾ ಮಾಹಿತಿ ಪೊಲೀಸರಿಗೆ ತಲುಪಿದ್ದರಿಂದ, ಶರಣಮ್ಮನ ಹೇಳಿಕೆಯಲ್ಲಿ ಸಂಶಯ ಮೂಡಿತ್ತು.
ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ
ಸಿಸಿಟಿವಿ ದೃಶ್ಯವೇ ಮುಖ್ಯ ಸುಳಿವು :
ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಆಧಾರದ ಮೇಲೆ ಹುಡುಕಾಟ ಮುಂದುವರಿಸಿದ ಪೊಲೀಸರು, ಆರೋಪಿಗಳಾದ ಪತ್ನಿ (Wife) ಮತ್ತು ಪ್ರಿಯಕರನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ





