ಜನಸ್ಪಂದನ ನ್ಯೂಸ್, ಡೆಸ್ಕ್ : ಗಂಡ ಬೇರೊಬ್ಬ ಯುವತಿಯೊಂದಿಗೆ ಇರುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದ ಮಿಸ್ ವೈಜಾಗ್ ನಕ್ಷತ್ರ, ಕ್ಯಾಮೆರಾ (camera) ಮುಂದೆಯೇ ಪತಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಇನ್ನೂ ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ರೇಪ್ ಮಾಡಿದ್ದ ಯುವತಿಯನ್ನು ಆಕೆಯ ಮದುವೆ ದಿನವೇ ಕಿಡ್ನ್ಯಾಪ್ ಮಾಡಲು ಯತ್ನಿಸಿದ ನೀಚ ; video viral.!
ಮಾಜಿ ಸುಂದರಿ ಮಿಸ್ ವೈಜಾಗ್ ನಕ್ಷತ್ರರವರು ತನ್ನ ಪತಿಯು ಬೇರೊಬ್ಬ ಯುವತಿಯೊಂದಿಗೆ ಇರುವಾಗಲೇ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಮಿಸ್ ವೈಜಾಗ್ ನಕ್ಷತ್ರ ಮತ್ತು ಆಕೆಯ ಪತಿ ತ್ರಿಪುರಾಣ ವೆಂಕಟ ಸಾಯಿ ತೇಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕಿನ ಕುರಿತು ವ್ಯಾಪಕ ಸುದ್ದಿ ಹರಿದಾಡಿದ್ದವು. ಅವರ ಆಪ್ತ ವಲಯದಲ್ಲಿ ಈ ಬಿರುಕಿಗೆ ಪತಿ ಸಾಯಿ ತೇಜಾ ಅವರ ವಿವಾಹೇತರ ಸಂಬಂಧವೇ (An extramarital affair) ಕಾರಣ ಎಂದು ಹೇಳಲಾಗಿತ್ತು.
ಅಲ್ಲದೆ 2021ರಲ್ಲೇ ಈ ಜೋಡಿ ಕೋರ್ಟ್ ನಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತದೆ. ಇದರ ನಡುವೆಯೇ ಇದೀಗ ಅವರ ಪತ್ನಿಯೇ ಪತಿ ಸಾಯಿ ತೇಜಾರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಿಡಿಯೋದಲ್ಲಿ ನಕ್ಷತ್ರಾ ಬಲವಂತವಾಗಿ ಅಪಾರ್ಟ್ಮೆಂಟ್ ಗೆ ನುಗ್ಗುವುದನ್ನು ಕಾಣಬಹುದು. ನಕ್ಷತ್ರ ಪತಿ ನೆಲದ ಹಾಸಿಗೆಯ ಮೇಲೆ ಮಲಗಿದ್ದ ಇನ್ನೊಬ್ಬಳೊಂದಿಗೆ ಇರುವುದನ್ನು ಕಾಣಬಹುದು.
ಆಕೆಯ ಪತಿ ಮಧ್ಯಪ್ರವೇಶಿಸುತ್ತಿದ್ದಂತೆ, ನಕ್ಷತ್ರ ಅವನಿಗೆ ಕಪಾಳಮೋಕ್ಷ ಮಾಡುತ್ತಾಳೆ ಮತ್ತು ಅವನಿಗೆ ಅನೇಕ ಬಾರಿ ಹೊಡೆಯುವುದನ್ನು (hitting) ಮುಂದುವರಿಸುತ್ತಾಳೆ.
ನಾನು ಮಿಸ್ ವೈಜಾಗ್ ಪ್ರಶಸ್ತಿ ಗೆದ್ದಿದ್ದೇನೆ. 2017ರಲ್ಲಿ ತೇಜಾ ಹಾಗು ನನ್ನ ಪ್ರೇಮ ವಿವಾಹವಾಯಿತು. ಕೆಲಕಾಲ ನಮ್ಮ ಸಂಸಾರ ಚೆನ್ನಾಗಿತ್ತು. ನಮಗೆ ಒಂದು ಮಗುವಿದೆ. ಅಷ್ಟರಲ್ಲಿ ಪತಿಯ ನಡವಳಿಕೆ ಸಂಪೂರ್ಣ ಬದಲಾಯಿತು. ಬೇರೆ ಹುಡುಗಿಯನ್ನು ಮದುವೆಯಾದ ಮಾಹಿತಿ ನನಗೆ ಸಿಕ್ಕಿತು ಎಂದು ನಕ್ಷತ್ರ ಹೇಳಿದ್ದಾರೆ.
ಅಲ್ಲದೇ ನನ್ನ ಪತಿ ಮಹಿಳೆಯೊಂದಿಗೆ ದಾಸ್ಪಲ್ಲ ಹಿಲ್ಸ್‌ನಲ್ಲಿದ್ದಾಗ ನಾನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದಿದ್ದೇನೆ. ನನಗೆ ವಂಚಿಸಿದ ತೇಜಾ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿ : Cinema : ತನಗಿಂತ 6 ವರ್ಷ ಚಿಕ್ಕವನೊಂದಿಗೆ 3ನೇ ಮದುವೆಯಾದ ಖ್ಯಾತ ನಟಿ.!
ಆದರೆ ನಕ್ಷತ್ರ ಅವರ ಪತಿ, ಆಕೆ ಇದ್ದಕ್ಕಿದ್ದಂತೆ ತನ್ನ ಕಚೇರಿಗೆ ಬಂದು ಗಲಾಟೆ ಮಾಡುವುದನ್ನು ತೇಜ ವಿರೋಧಿಸಿದ್ದಾರೆ. ಸಿನಿಮಾ ಆಡಿಷನ್ಗೆ (audition) ಬಂದಿದ್ದ ಯುವತಿ ಮೇಲೆ ಆಕೆ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ನಕ್ಷತ್ರ ತನ್ನ ಕಚೇರಿಗೆ ಬಂದು ಜಗಳ ಮಾಡುವಾಗ ತೇಜ ಪೊಲೀಸರಿಗೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸರು ಕೊಠಡಿ ಪ್ರವೇಶಿಸಿ ಕೊಠಡಿಯಲ್ಲಿದ್ದ ಓರ್ವ ಯುವತಿಯನ್ನು ಅಲ್ಲಿಂದ ಕಳುಹಿಸಿದ್ದರು. ಆದರೆ ಪತ್ನಿಯ ಆರೋಪ ಸುಳ್ಳು ಎಂದು ತೇಜ ಹೇಳುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
Former Miss Vizag catches husband red-handed with another woman.pic.twitter.com/X0bOxlaqnr
— زماں (@Delhiite_) May 31, 2024