Friday, June 14, 2024
spot_img
spot_img
spot_img
spot_img
spot_img
spot_img

Prostitution : ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ; ಇಬ್ಬರು ಯುವತಿಯರ ರಕ್ಷಣೆ.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಇಂದಿರಾ ನಗರ ಠಾಣೆಯ ಪೊಲೀಸರು, ವೇಶ್ಯಾವಾಟಿಕೆ ದಂಧೆ (Prostitution) ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಪೊಲೀಸರು ದಾಳಿ (raid) ನಡೆಸಿದ ವೇಳೆ ಸ್ಪಾ ಮ್ಯಾನೇಜರ್‌ನನ್ನು ಬಂಧಿಸಿ ಹೊರರಾಜ್ಯದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : BSFನಲ್ಲಿ ಎಸ್ಐ, ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮ್ಯಾನೇಜರ್‌ ಮಣಿ ಎಂಬಾತನನ್ನು ಬಂಧಿಸಲಾಗಿದೆ (arrested). ಇನ್ನೂ ಸ್ಪಾ ಮಾಲೀಕ ಉಪ್ಪೇನ್ ರಾಟಿ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.

ಸ್ಪಾವೊಂದರಲ್ಲಿ ಹೊರರಾಜ್ಯದ ಮಹಿಳೆಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ (Definite information) ಮೇರೆಗೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಉತ್ತರ ಪ್ರದೇಶ ಮತ್ತು ನಾಗಲ್ಯಾಂಡ್ ಮೂಲದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಇದನ್ನು ಓದಿ : ಬಾಲಿವುಡ್‌ನಲ್ಲಿ ಖುಲಾಯಿಸದ luck ; ಬಿಕಿನಿ ಮಾರಲು ಮುಂದಾದ ವಿಶ್ವ ಸುಂದರಿ.!

ಗ್ರಾಹಕರನ್ನು ಕ್ರಾಸ್ ಮಸಾಜ್, ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್ ಇತ್ಯಾದಿ ಸೇವೆಗಳ ಹೆಸರಿನಲ್ಲಿ ಬರ ಮಾಡಿಕೊಂಡು ಬಳಿಕ ಲೈಂಗಿಕ ಕ್ರಿಯೆಗೆ (sexual activity) ಪುಸಲಾಯಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾಗಿ ಸ್ಪಾ ಮ್ಯಾನೇಜರ್ ಮಣಿ ವಿಚಾರಣೆ ವೇಳೆ ಹೇಳಿದ್ದಾನೆ.

ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

spot_img
spot_img
- Advertisment -spot_img