Friday, June 14, 2024
spot_img
spot_img
spot_img
spot_img
spot_img
spot_img

ಬಾಲಿವುಡ್‌ನಲ್ಲಿ ಖುಲಾಯಿಸದ luck ; ಬಿಕಿನಿ ಮಾರಲು ಮುಂದಾದ ವಿಶ್ವ ಸುಂದರಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವಿಶ್ವ ಸುಂದರಿ (Miss World) ಕಿರೀಟವನ್ನು ಮುಡಿಗೇರಿಸಿಕೊಂಡು ಆ ನಂತರ ಸೀದಾ ಬಾಲಿವುಡ್‌ಗೆ ಬಂದವರಲ್ಲಿ ಮಾನುಷಿ ಚಿಲ್ಲರ್ ಕೂಡ ಒಬ್ಬರು. ಆದರೆ ಐಶ್ವರ್ಯ ರೈ ಮತ್ತು ಪ್ರಿಯಾಂಕ ಚೋಪ್ರಾ ಅವರು ಫೇಮಸ್ ಆದಂತೆ ಇವರು ಫೇಮಸ್ ಆಗಲಿಲ್ಲ.

ಹಾಗಂತ ಮಾನುಷಿ ಕುಗ್ಗದೇ ಸೋಲು ಒಪ್ಪಿಲ್ಲ. ಇವತ್ತು ಕೂಡ ಮಾನುಷಿ ತಮ್ಮ ಪ್ರಯತ್ನವನ್ನ ಮುಂದುವರೆಸಿದ್ದಾರೆ. ಕೆಲವೊಂದಿಷ್ಟು ಚಿತ್ರಕ್ಕೆ ನಾಯಕಿಯಾಗಿ (heroine) ಆಯ್ಕೆಯಾಗಿದ್ದಾರೆ.

ಇದನ್ನು ಓದಿ : Health : ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಆದರೂ ಮಾನುಷಿ ಅವರಲ್ಲಿ ಚಿಕ್ಕ ಆತಂಕವಿದೆ ಎಂದೆನಿಸುತ್ತದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮಾನುಷಿ ಸೈಡ್ ಬಿಸಿನೆಸ್‌ನ ಆರಂಭಿಸಿದ್ದಾರೆ.

ಮಾನುಷಿ ಚಿಲ್ಲರ್ ಸದ್ಯ ಬಿಕಿನಿಯನ್ನ ಮಾರಲು ಮುಂದಾಗಿದ್ದಾರೆ. ಶೀಫಾ ಗಿಲಾನಿ ಅವರ ಜೊತೆ ಸೇರಿ ಮಾನುಷಿ ಚಿಲ್ಲರ್ ದ್ವೀಪ್ ಎಂಬ ಬ್ರ್ಯಾಂಡ್‌ನ ಶುರು ಮಾಡಿದ್ದಾರೆ.

ಈಜುಕೊಳಕ್ಕೆ (swimming pool) ಇಳಿಯುವ ಮುಂಚೆ ಅಥವಾ ಬೀಚ್‌ ನಲ್ಲಿ ಮೋಜು-ಮಸ್ತಿ ಮಾಡುವ ಮುನ್ನ ಮಹಿಳೆಯರು ಮಾನುಷಿ ಚಿಲ್ಲರ್ ಅವರ ಈ ಡ್ವೀಪ್ ನಿಂದ ಉಡುಗೆಯನ್ನು ಖರೀದಿಸಬಹುದು.

ಮರುಬಳಕೆಯ ಪಾಲಿಯೆಸ್ಟರ್ ಮತ್ತು ಸಾವಯವ ಹತ್ತಿಯಂತಹ ಪರಿಸರ ಸ್ನೇಹಿ (Environmentally friendly) ವಸ್ತುಗಳ ಬಳಕೆಯಿಂದ ಮಾಡಲಾಗುವ ಈ ಈಜುಡುಗೆಗಳಿಗೆ ₹ 1,099 ರಿಂದ ₹ 19,999ರವರೆಗೆ ಮಾನುಷಿ ಚಿಲ್ಲರ್ ದರಗಳನ್ನು ನಿಗದಿ ಮಾಡಿದ್ದಾರೆ.

ಇನ್ನೂ ಬಾಲಿವುಡ್ ನಟಿಯಾಗಿ, ವಿವಿಧ ಪ್ರತಿಷ್ಠಿತ ಬ್ರಾಂಡ್‌ಗಳ ರಾಯಭಾರಿಯಾಗಿ ನನ್ನದೇ ಬ್ರ್ಯಾಂಡ್‌ನ ಉದ್ಯಮ (business) ಆರಂಭ ಮಾಡುತ್ತೇನೆ ಎಂದು ನಾನು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಇದನ್ನು ಓದಿ : 2 ವರ್ಷದಿಂದ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು SI ಪತಿಯ ವಿರುದ್ಧ ಠಾಣೆಯ ಮುಂದೆ ಪತ್ನಿಯ ಪ್ರತಿಭಟನೆ.!

ಇದು ಕೇವಲ ಬ್ರ್ಯಾಂಡ್ ಅಲ್ಲ ಇದು ಸುಸ್ಥಿರತೆ, ಒಳಗೊಳ್ಳುವಿಕೆ ಮತ್ತು ಸಬಲೀಕರಣದ (inclusion and empowerment) ನನ್ನ ಮೌಲ್ಯಗಳನ್ನು ಸಾಕಾರಗೊಳಿಸುವ ದಿಸೆಯಲ್ಲಿ ಇಡಲಾದ ಒಂದು ಹೆಜ್ಜೆ ಎಂದಿರುವ ಮಾನುಷಿ ನಮ್ಮ ಈ ಬ್ರ್ಯಾಂಡ್ ಪರಿಸರವನ್ನು ಬೆಂಬಲಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಕೂಡ ಮಾನುಷಿ ಚಿಲ್ಲರ್ ಹೇಳಿದ್ದಾರೆ.

ದ್ವೀಪ್‌ನೊಂದಿಗೆ ಉದ್ಯಮಿಯಾಗಿ ಪಾದಾರ್ಪಣೆ ಮಾಡುತ್ತಿರುವುದು ನನ್ನ ಬದುಕಿನ ಪ್ರಯಾಣದ ಹೊಸ ಅಧ್ಯಾಯ ಎಂದಿರುವ ಮಾನುಷಿ ಚಿಲ್ಲರ್ ರೋಹ್ಟಾಂಗ್‌ನ ಸಾಮಾನ್ಯ ಹುಡುಗಿಯಾದ ನಾನು ವಿಶ್ವ ಸುಂದರಿಯಾಗ್ತೀನಿ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

spot_img
spot_img
- Advertisment -spot_img