Friday, June 14, 2024
spot_img
spot_img
spot_img
spot_img
spot_img
spot_img

ಮಗನ ಎದೆ ಮೇಲೆ ಕುಳಿತು ಕ್ರೂರವಾಗಿ ಥಳಿಸಿದ ತಾಯಿ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತಾನೋರ್ವ ತಾಯಿ ಅನ್ನೋದನ್ನು ಮರೆತು (forget) 11 ವರ್ಷದ ಮಗನ ಎದೆ ಮೇಲೆ ಕುಳಿತು ಕ್ರೂರವಾಗಿ ಥಳಿಸಿದ ಘಟನೆ ನಡೆದಿದೆ.

ಹರಿಯಾಣದ (Hariyan) ಫರಿದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಇದನ್ನು ಓದಿ : Weather : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ : ಈ ಜಿಲ್ಲೆಗಳಲ್ಲಿ ಭಾರಿ ಮಳೆಗಾಳಿ ಮುನ್ಸೂಚನೆ.!

ಮಗುವಿನ ತಂದೆ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಮಗನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ ಪತಿಗೆ ಬುದ್ಧಿ ಕಲಿಸಬೇಕು ಅಂತ ಪತ್ನಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ (local police station) ದೂರು ಸಹ ದಾಖಲಿಸಿದ್ದಾರೆ. ಇನ್ನೂ ಮಹಿಳೆಯ ಮೃಗೀಯ ವರ್ತನೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ದೂರಿನಲ್ಲಿ, ಮಗನ ಮೇಲೆ ಹಲ್ಲೆ ನಡೆಸುವುದನ್ನು ಖಂಡಿಸಿದ್ದಕ್ಕೆ ಪುತ್ರನಿಗೆ ವಿಷ ಕೊಟ್ಟು, ತಾನು ಕುಡಿದು ಆತ್ಮಹತ್ಯೆ (suicide) ಮಾಡಿಕೊಳ್ಳೋದಾಗಿ ಪತ್ನಿ ಬೆದರಿಕೆ ಹಾಕಿದ್ದಳು ಎಂದು ತಿಳಿಸಿದ್ದಾರೆ. ಈ ಮೊದಲು ಮಹಿಳೆ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ದೂರು ನೀಡಲಾಗಿತ್ತು. ಇದೀಗ ಈ ಪ್ರಕರಣವನ್ನು ಸೂರಜ್‌ಕುಂಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗ ದೊಡ್ಡವನಾಗುತ್ತಿದ್ದಂತೆ ಪತ್ನಿ ಅವನ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್ ಆಗಲಾರಂಭಿಸಿದಳು. ಅವನ ಮೇಲೆ ಹೆಚ್ಚು ಒತ್ತಡ ಹಾಕಿ ಹಲ್ಲೆಯೂ ಮಾಡಲಾರಂಭಿಸಿದಳು. ಮಗನಿಗೆ ಆಟವಾಡಲು, ಪೇಟಿಂಗ್ ಮಾಡಲು ಪತ್ನಿ ಬಿಡುತ್ತಿರಲಿಲ್ಲ. ಕೇವಲ ಮಗ ಓದಬೇಕು ಅನ್ನೋದು ಆಕೆಯ ಒತ್ತಡ ಆಗಿತ್ತು. ಆದ್ದರಿಂದ ಬೆಡ್‌ರೂಮ್ ಸೇರಿದಂತೆ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ ಎಂದು ಬಾಲಕನ ತಂದೆ ಹೇಳಿದ್ದಾರೆ.

ಇದನ್ನು ಓದಿ : ಕಸ ಎಸೆದಿಲ್ಲವೆಂದು ಪತಿಗೆ, ಈ ಹೆಮ್ಮಾರಿ ಪತ್ನಿ ಮಾಡಿದ್ದೇನು ಗೊತ್ತೇ.? Video ನೋಡಿ.!

ಇನ್ನೂ ದೂರು ದಾಖಲಾಗುತ್ತಿದ್ದಂತೆ ಮಹಿಳೆ ತನ್ನ ಮಗನನ್ನು ಕರೆದುಕೊಂಡು ತವರು ಮನೆ ಸೇರಿದ್ದಾಳೆ. ಹಲ್ಲೆಗೊಳಗಾದ 11 ವರ್ಷದ ಬಾಲಕ ತನ್ನ ತಂದೆಯೋರ್ವ ವ್ಯಸನಿ ಎಂದು ಮಕ್ಕಳ ಕಲ್ಯಾಣ ಸಮಿತಿಗೆ ಹೇಳಿಕೆ ನೀಡಿದ್ದಾನೆ.

ಈ ಹಿನ್ನೆಲೆ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಘಟನೆಯ ಸತ್ಯಾಸತ್ಯತೆಯನ್ನು ತಿಳಿಯಲು ಎಲ್ಲಾ ಆಯಾಮದಲ್ಲಿ (all dimensions) ತನಿಖೆ ನಡೆಸುತ್ತಿದ್ದಾರೆ.

spot_img
spot_img
- Advertisment -spot_img