Friday, June 14, 2024
spot_img
spot_img
spot_img
spot_img
spot_img
spot_img

ರೇಪ್ ಮಾಡಿದ್ದ ಯುವತಿಯನ್ನು ಆಕೆಯ ಮದುವೆ ದಿನವೇ ಕಿಡ್ನ್ಯಾಪ್ ಮಾಡಲು ಯತ್ನಿಸಿದ ನೀಚ ; video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗಂತೂ ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಲ್ಲೆ, ಹತ್ಯೆ, ಅತ್ಯಾಚಾರ ಇವೆಲ್ಲ ನಡೆಯುತ್ತಿವೆ. ಅಂತೆಯೇ ದುಷ್ಕರ್ಮಿಯೋರ್ವ ಮದುವೆ ನಿಶ್ಚಿತಾರ್ಥ (Engagement) ನಡೆಯುತ್ತಿದ್ದ ಮನೆಗೆ ನುಗ್ಗಿ ತಲ್ವಾರ್‌ ತೋರಿಸಿ ವಧುವನ್ನೇ ಅಪಹರಿಸಲು ಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ (Madhya Pradesh) ಅಶೋಕ ನಗರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಇದನ್ನು ಓದಿ : Weather : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ : ಈ ಜಿಲ್ಲೆಗಳಲ್ಲಿ ಭಾರಿ ಮಳೆಗಾಳಿ ಮುನ್ಸೂಚನೆ.!

ತನ್ನಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಮದುವೆ ಆಗುತ್ತಿದ್ದಾಳೆ ಎಂದು ತಿಳಿದ ಕೂಡಲೇ ಮದುವೆ (marriage) ಮನೆಗೆ ನುಗ್ಗಿದ ಕಿಡಿಗೇಡಿ ಆಕೆ ತಂದೆ, ತಾಯಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾನೆ.

ಕಲ್ಲು ಅಲಿಯಾಸ್‌ ಸಲೀಂ ಖಾನ್‌ ಎಂಬಾತ ತನ್ನ ಸ್ನೇಹಿತರ ಜೊತೆಗೆ ಏಕಾಏಕಿ 22 ವರ್ಷದ ಹುಡುಗಿಯ ಮನೆಗೆ ನುಗ್ಗಿದ್ದಾನೆ. ಅಲ್ಲಿ ಬೇರೆ ಯುವಕನ ಜೊತೆ ಆಕೆ ನಿಶ್ಚಿತಾರ್ಥ ನಡೆಯುತ್ತಿರುವ ಬಗ್ಗೆ ಗೊತ್ತಾಗಿದೆ.

ಮನೆಗೆ ನುಗ್ಗಿದ್ದ ಸಲೀಂ ತಲ್ವಾರ್‌ ತೋರಿಸಿ ಎಲ್ಲರನ್ನೂ ಹೆದರಿಸಿದ್ದಾನೆ. ಅಷ್ಟೇ ಅಲ್ಲದೇ ಯುವತಿಯನ್ನು ಅಲ್ಲಿಂದ ಎಳೆದೊಯ್ಯಲು ಯತ್ನಿಸಿದ್ದಾನೆ. ಆಗ ಆಕೆಯ ಮನೆಯವರು ಅಡ್ಡಿಪಡಿಸಿದ್ದಾರೆ. ಆಗ ಕೋಪಕೊಂಡ ಸಲೀಂ ಆಕೆಯ ತಂದೆಯ ಕಾಲು ಹಾಗೂ ಆಕೆ ಸಹೋದರನ ಕೈ ಮುರಿದು ಮಾರಣಾಂತಿಕ ಹಲ್ಲೆ (Fatal assault) ನಡೆಸಿದ್ದಾನೆ. ಅಷ್ಟೇ ಅಲ್ಲದೇ ಯುವತಿಯ ತಾಯಿಯನ್ನು ಭೀಕರವಾಗಿ ಥಳಿಸಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಕಿಡಿಗೇಡಿಗಳು ಕತ್ತಿ, ರಾಡ್‌ ತೋರಿಸಿ ಝಳಪಿಸಿ ಅಲ್ಲಿದ್ದ ಜನರನ್ನು ಹೆದರಿಸಿ, ಯುವತಿಯನ್ನು ಎಳೆದೊಯ್ಯಲು ಯತ್ನಿಸಿದ್ದಾರೆ. ಯುವತಿ ಸಹಾಯಕ್ಕಾಗಿ ಎಷ್ಟೇ ಕೂಗಿದರೂ ದುಷ್ಕರ್ಮಿಗಳ ಕೈಯಲ್ಲಿದ್ದ ಕತ್ತಿ ನೋಡಿ ಜನ ಸುಮ್ಮನಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆದರೆ ಮತ್ತಷ್ಟು ಜನ ಸ್ಥಳದಲ್ಲಿ ಜಮಾಯಿಸಿದ್ದನ್ನು ಕಂಡು ಹೆದರಿದ ದುಷ್ಕರ್ಮಿಗಳು ಯುವತಿಯನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಅಲ್ಲಿಂದ ಹೊರಡುವಾಗ ಯುವತಿ ಮತ್ತು ಆಕೆಯ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನು ಓದಿ : Crime : ಚಿಕಿತ್ಸೆಗೆಂದು ಕರೆದೊಯ್ದು ಆಸ್ಪತ್ರೆಯಲ್ಲೇ ನಿರಂತರ ಅತ್ಯಾಚಾರವೆಸಗಿದ ಕಾಮುಕ.!

ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ. ಕಲ್ಲು ಅಲಿಯಾಸ್‌ ಸಲೀಂ ಖಾನ್‌, ಜೋಧಾ, ಸಮೀರ್‌ ಮತ್ತು ಶಾರೂಖ್‌ನನ್ನು ಅರೆಸ್ಟ್‌ ಮಾಡಿದ್ದಾರೆ.

ಇನ್ನು ಸಲೀಂ ಈ ಹಿಂದೆ ಯುವತಿ ಮೇಲೆ ಅತ್ಯಾಚಾರ ಎಸಗಿ ಆಕೆಯ ಖಾಸಗಿ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಲೀಕ್‌ (photo leak) ಮಾಡಿ ದುಷ್ಕೃತ್ಯ ಮೆರೆದಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಮೊಕದ್ದಮೆ ಎದುರಿಸುತ್ತಿದ್ದ ಎಂದು ವರದಿಯಾಗಿದೆ.

spot_img
spot_img
- Advertisment -spot_img