Friday, June 14, 2024
spot_img
spot_img
spot_img
spot_img
spot_img
spot_img

Cinema : ತನಗಿಂತ 6 ವರ್ಷ ಚಿಕ್ಕವನೊಂದಿಗೆ 3ನೇ ಮದುವೆಯಾದ ಖ್ಯಾತ ನಟಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಆಧುನಿಕ ಕಾಲದಲ್ಲಿ ಮದುವೆಯಾದವರಿಗೆ ದಿನ ಕಳೆಯುವಷ್ಟರಲ್ಲಿ ಕೋರ್ಟ್ (court) ಮೆಟ್ಟಿಲೇರುವ ಮಟ್ಟಿಗೆ ಮದುವೆ, ದಾಂಪತ್ಯ ಅನ್ನೋದು ಕಾಮನ್‌ ಆಗಿದೆ.

ಅದರಲ್ಲೂ ಸಿನಿಮಾ ಮಂದಿಗೆ ಇದು ಬಟ್ಟೆ ಬದಲಿಸಿದಷ್ಟೇ ಸುಲಭ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮಾಲಿವುಡ್ ನ ನಾಯಕಿ ಮೀರಾ ವಾಸುದೇವನ್. ಈಕೆ ತನ್ನ 42ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ.

ಇದನ್ನು ಓದಿ : ಬಾಲಿವುಡ್‌ನಲ್ಲಿ ಖುಲಾಯಿಸದ luck ; ಬಿಕಿನಿ ಮಾರಲು ಮುಂದಾದ ವಿಶ್ವ ಸುಂದರಿ.!

ಮಲಯಾಳಂ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ಮುಂಬೈ (Mumbai) ಮೂಲದ ತಮಿಳು ಚೆಲುವೆ ಮೀರಾ ವಾಸುದೇವನ್. ಹೆಚ್ಚು ಕಡಿಮೆ ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಇವರು ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ, ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಆ್ಯಕ್ಟ್ ಮಾಡಿದ್ದಾರೆ.

ಸದ್ಯ ಮೀರಾ ವಾಸುದೇವನ್ ತಮ್ಮ 42ರ ಹರೆಯದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಸಿನಿಮ್ಯಾಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಪಿನ್ ಜೊತೆ ಸಪ್ತಪದಿ ತುಳಿದಿದ್ದಾರೆ.

ವಿಶೇಷ ಅಂದರೆ ವಿಪಿನ್ ನಯಂಗಮ್, ಮೀರಾ ವಾಸುದೇವನ್‌ ಅವರಿಗಿಂತ ಆರು ವರ್ಷ ಚಿಕ್ಕವರಂತೆ.

ಇನ್ನೂ ಮೀರಾ ವಾಸುದೇವನ್‌ ಅವರಿಗೆ ಇದು ಮೂರನೇ ಮದುವೆ (third marriage). 19 ವರ್ಷದ ಹಿಂದೆ ವಿಶಾಲ್ ಅಗರ್‌ ವಾಲ್ ಅವರನ್ನ ಮೀರಾ ಮದುವೆಯಾಗಿದ್ದರು. ಆದರೆ ಆ ಸಂಬಂಧ ಐದೇ ವರ್ಷಕ್ಕೆ ಕೊನೆಯಾಗಿತ್ತು.

ಇದನ್ನು ಓದಿ : Lokayukta trap : ಲಂಚ ಪಡೆಯುವಾಗ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!

ನಂತರ ಮೀರಾ ಮಲಯಾಳಂನ ಜನಪ್ರಿಯ ನಟ (famous hero) ಜಾನ್ ಕೊಕ್ಕೆನ್ ಜೊತೆ ಮದುವೆಯಾಗಿ ಒಂದು ಮಗುವಿಗೆ ತಾಯಿಯೂ ಆದರು. ಆದರೆ ಈ ಮದುವೆ ಕೂಡ ಮುರಿದು ಬಿತ್ತು. 2016ರಲ್ಲಿ ಮೀರಾ ವಾಸುದೇವನ್, ಜಾನ್ ಕೊಕ್ಕೆನ್ ಅವರಿಂದ ವಿಚ್ಛೇದನ ಪಡೆದು ದೂರವಾದರು.

ಈಗ ಮೀರಾ ವಯಸ್ಸಿನಲ್ಲಿ ತನಗಿಂತ ಆರು ವರ್ಷ ಚಿಕ್ಕವನಾದ ವಿಪಿನ್ ನಯಂಗಮ್ ಜೊತೆ ಸಪ್ತಪದಿಯನ್ನ ತುಳಿದಿದ್ದಾರೆ. ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದಾರೆ. ವಿಪಿನ್ ಜೊತೆ ಮೀರಾ ಹೊಸ ಬದುಕು ಆರಂಭವಾಗಿ ಒಂದು ತಿಂಗಳಾಗಿದ್ದು, ಮದುವೆಯ ವಿಚಾರವನ್ನು ಮೀರಾ ಈಗ ಶೇರ್ ಮಾಡಿಕೊಂಡಿದ್ದಾರೆ.

spot_img
spot_img
- Advertisment -spot_img