Friday, June 14, 2024
spot_img
spot_img
spot_img
spot_img
spot_img
spot_img

ಕಸ ಎಸೆದಿಲ್ಲವೆಂದು ಪತಿಗೆ, ಈ ಹೆಮ್ಮಾರಿ ಪತ್ನಿ ಮಾಡಿದ್ದೇನು ಗೊತ್ತೇ.? Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯವು (everyday) ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ಏಕಾಏಕಿ (suddenly) ವೈರಲ್​ ಆಗಿಬಿಡುತ್ತವೆ.

ಕೆಲವು ದೃಶ್ಯಗಳನ್ನು ನೋಡಿದಾಗ ಅಯ್ಯೋ ದೇವ್ರೇ ಎಂತಹ ವಿಚಿತ್ರ ಜನರು ಈ ಭೂಮಿ ಇದ್ದಾರಪ್ಪ ಅಂತ ಅನ್ನಿಸಿಬಿಡುತ್ತದೆ. ಇದೀಗ ಅಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿದೆ.

ಇದನ್ನು ಓದಿ : ಬಾಲಿವುಡ್‌ನಲ್ಲಿ ಖುಲಾಯಿಸದ luck ; ಬಿಕಿನಿ ಮಾರಲು ಮುಂದಾದ ವಿಶ್ವ ಸುಂದರಿ.!

ಮನೆಯಲ್ಲಿದ್ದ ಕಸವನ್ನು (garbage) ಎಸೆದು ಬರಲಿಲ್ಲ ಅಂತ ಹೆಮ್ಮಾರಿ ಹೆಂಡತಿಯೋರ್ವಳು (wife) ತನ್ನ ಪತಿಯು ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬರುತ್ತಿದ್ದಂತೆ ಆತನ ಮೇಲೆ ಕೈ ಮಾಡಿದ್ದಾಳೆ.

ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಮ್ಮಾರಿ ಪತ್ನಿಯ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಪತಿಯು ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದಿದ್ದಾನೆ. ಆತ ಬರುತ್ತಿದ್ದಂತೆ ಓಡಿ ಬಂದ ಪತ್ನಿ ತನ್ನ ಗಂಡನಿಗೆ ಜಾಡಿಸಿ ಒದಿಯುತ್ತಿರುವುದನ್ನು (kicking) ವಿಡಿಯೋದಲ್ಲಿ ನೋಡಬಹುದು. ನಂತರ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

ಪತ್ನಿ ತನ್ನ ಮೇಲೆ ಕೈ ಮಾಡಿದರೂ ಪತಿರಾಯ ಕೂಗಾಡದೇ ಸುಮ್ಮನೆ ನಿಂತಿದ್ದ. ಈ ದೃಶ್ಯ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : Lokayukta trap : ಲಂಚ ಪಡೆಯುವಾಗ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!

ಘಟನೆಯ ಕುರಿತಾದ ವಿಡಿಯೋವನ್ನು @cctvidiots ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪತಿ 14 ಗಂಟೆಗಳ ಪಾಳಿ ಕೆಲಸ ಮುಗಿಸಿ ಮನೆಗೆ ಮರಳಿ ಬರುವಾಗ ಕಸವನ್ನು ಬಿಸಾಡಲು ಮರೆತಿದ್ದಾನೆ ಎಂದು ಪತ್ನಿ ಆತನಿಗೆ ಥಳಿಸಿದ್ದಾಳೆ” ಎಂಬ ಶೀರ್ಷಿಕೆ (title) ನೀಡಲಾಗಿದೆ.

ಸದ್ಯ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪತ್ನಿಯ ಈ ಮೃಗೀಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_img
spot_img
- Advertisment -spot_img