Thursday, September 19, 2024
spot_img
spot_img
spot_img
spot_img
spot_img
spot_img
spot_img

ಆನ್‌ಲೈನ್ ಪಾರ್ಸೆಲ್ ತೆರೆದಾಗ ಬಂತು ಬುಸುಗುಟ್ಟುತ್ತಿರುವ ಹಾವು ; ಬೆಚ್ಚಿಬಿದ್ದ ದಂಪತಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪಾರ್ಸೆಲ್ ಬಂದ ಬಾಕ್ಸ್‌ ತೆರೆಯುತ್ತಿದ್ದಂತೆ ಬುಸುಗುಟ್ಟುತ್ತಿರುವ ಹಾವು ಕಂಡು ದಂಪತಿಗಳು ತಬ್ಬಿಬ್ಬಾದ ಘಟನೆ ಬೆಂಗಳೂರಿನಲ್ಲಿ ನಡೆದಿರುವ ಬಗ್ಗೆ ತಿಳಿದು ಬಂದಿದೆ.

ಹೌದು, ಬೆಂಗಳೂರಿನ ಸರ್ಜಾಪುರದ ದಂಪತಿಗಳು ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಬುಕ್ ಮಾಡಿದ್ದರು. ಪಾರ್ಸೆಲ್​​ ತೆರೆಯುತ್ತಿದ್ದಂತೆ ಬುಸುಗುಟ್ಟುತ್ತಿರುವ ಹಾವು ಕಂಡು ದಂಪತಿಗಳು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ತಮ್ಮ ಅನುಭವವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : NFL : ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸಾಫ್ಟ್‌ವೇರ್ ಉದ್ಯೋಗದಲ್ಲಿರುವ ಈ ದಂಪತಿ ವಾರದ ಹಿಂದೆಯಷ್ಟೇ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಆರ್ಡರ್​ ಮಾಡಿದ್ದರು. ಅದರಂತೆ ಪಾರ್ಸೆಲ್​​ ಮನೆ ಬಾಗಿಲಿಗೆ ಬಂದು ತಲುಪಿದೆ. ಪಾರ್ಸೆಲ್​​ ಓಪನ್​​ ಮಾಡುತ್ತಿದ್ದಂತೆ ಅದರೊಳಗೆ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಬದಲಾಗಿ ನಾಗರಹಾವೊಂದು ಜಡೆ ಎತ್ತಿ ನಿಂತಿದೆ.

ತಕ್ಷಣ ಬಾಕ್ಸ್​ ಅನ್ನು ಮುಚ್ಚಿ ತಮಗಾದ ಕರಾಳ ಅನುಭವವನ್ನು ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : BBMP : ಬಿಬಿಎಂಪಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಘಟನೆಯ ಬಳಿಕ ಅಮೇಜಾನ್ ಕಂಪೆನಿ ದಂಪತಿಗೆ ಎಕ್ಸ್‌ಬಾಕ್ಸ್‌ ಕಂಟ್ರೋಲರ್‌ಗೆ ನೀಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದೆ. ಆದರೆ, ವಿಷಪೂರಿತ ಹಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ತಪ್ಪಾಗಿ ಪಾರ್ಸೆಲ್​​​ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ. ಆದರೆ ಪಾರ್ಸೆಲ್​​ ಒಳಗಡೆ ಜೀವಂತ ಹಾವು ಹೇಗೆ ಬಂತು? ಎಂಬುದು ಪ್ರಶ್ನೆಯಾಗಿ ಉಳಿದುಕೊಂಡಿದೆ.

ಈ ವಿಡಿಯೋ ನೋಡಿದ ಹಲವರು ಶಾಕ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಡಿಲಿವರಿ ವ್ಯವಸ್ಥೆ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ. ಈ ವಿಡಿಯೋಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img