Saturday, July 13, 2024
spot_img
spot_img
spot_img
spot_img
spot_img
spot_img

ಬೈಕ್‌ನಲ್ಲಿ ಹೊರಟ ದಂಪತಿ : ಮಹಿಳೆಯನ್ನೇ ಗುರಿಯಾಗಿಸಿ ದಾಳಿ ಮಾಡಿದ ಬಿಡಾಡಿ ಹಸು ; ಭಯಾನಕ ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಸ್ತೆಯಲ್ಲಿ ಓಡಾಡುವ ಬಿಡಾಡಿ ಹಸುವೊಂದು ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗಳ ಪೈಕಿ ಮಹಿಳೆಯ ಮೇಲೆ ಘೋರವಾದ ದಾಳಿ ಮಾಡಿದ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಿಡಾಡಿ ಹಸು ಮಹಿಳೆಯ ಮೇಲೆ ದಾಳಿದ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಭಾನುವಾರ ಮಧ್ಯಾಹ್ನ 2-30ರ ಸುಮಾರಿಗೆ ಗುಜರಾತ್‌ನ ಮೊಡಾಸಾದ ಸಹಯೋಗ್‌ ಚೌಕ್ ಬಳಿ ಈ ಘಟನೆ ನಡೆದಿದೆ.

ಇದನ್ನು ಓದಿ : NFL : ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ವಿಡಿಯೋದಲ್ಲೇನಿದೆ :

ಮಧ್ಯಾಹ್ನದ ಹೊತ್ತಿಗೆ ಬಿಡಾಡಿ ಹಸುವೊಂದು ಪೆಟ್ರೋಲ್ ಪಂಪ್‌ನ ಬಳಿ ಬೈಕ್‌ನಲ್ಲಿದ್ದ ದಂಪತಿಯನ್ನು ಹಿಂಬಾಲಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಬೈಕ್‌ನ ಹಿಂದೆ ಕುಳಿತಿದ್ದ ಮಹಿಳೆ ತನ್ನನ್ನೇ ಹಸು ಬೆನ್ನಟ್ಟಿರುವುದನ್ನು ಗಮನಿಸಿ ಅದನ್ನು ಬೈಕ್‌ನಲ್ಲಿಯೇ ಕುಳಿತು ಬೆದರಿಸಲು ಪ್ರಯತ್ನಿಸಿದ್ದಾಳೆ.

ಆದರೂ ಹಸು ಬೆನ್ನುಬಿದ್ದದ್ದನ್ನು ನೋಡಿ ಬೈಕ್‌ ಸವಾರ ಬೈಕ್‌ ನಿಲ್ಲಿಸಿದ್ದಾನೆ. ಆಗ ಬೈಕ್‌ನ ಹಿಂದೆ ಕುಳಿತಿದ್ದ ಮಹಿಳೆಯನ್ನೇ ಗುರಿಯಾಗಿಸಿ ಹಸು ದಾಳಿ ಮಾಡಿದೆ. ಆಗ ಮಹಿಳೆ ತಪ್ಪಿಸಿಕೊಳ್ಳಲು ಬೈಕ್‌ ನಿಂದ ಓಡಲಾರಂಭಿಸಿದ್ದಾಳೆ. ಆದರೂ ಬೆನ್ನು ಬಿಡದ ಈ ಬಿಡಾಡಿ ಹಸು ಮಹಿಳೆಯನ್ನು ಹಿಂಬಾಲಿಸಿ ದಾಳಿಗಾಗಿ ಓಡಿಲಾರಂಭಿಸಿದೆ.

ಹಾಗೆಯೇ ಹಿಂದೆ ಅಟ್ಟಿಸಿಕೊಂಡು ಬಂದ ಹಸು ಆಕೆಯನ್ನು ಗುದ್ದಿ ಕೆಳಗೆ ಕೆಡವಿ ಕೊಂಬಿನಿಂದ ತಿವಿಯಲು ಶುರುಮಾಡಿದೆ. ಆಗ ಆಕೆಯ ಪತಿ ಹಸುನಿಂದ ಆಕೆಯನ್ನು ಬಿಡಿಸಲು ಪ್ರಯತ್ನಿಸಿದರೂ ಅದು ಬಿಡದೇ ಆಕೆಯ ಮೇಲೆ ದಾಳಿ ಮುಂದುವರಿಸಿದೆ. ಆಗ ಅಲ್ಲಿದ್ದ ಜನರು ಹಸುವಿಗೆ ದೊಣ್ಣೆಯಿಂದ ಹೊಡೆದು ಓಡಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಇದನ್ನು ಓದಿ : ಆನ್‌ಲೈನ್ ಪಾರ್ಸೆಲ್ ತೆರೆದಾಗ ಬಂತು ಬುಸುಗುಟ್ಟುತ್ತಿರುವ ಹಾವು ; ಬೆಚ್ಚಿಬಿದ್ದ ದಂಪತಿ.!

ಈ ದುರಂತದಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿದೆ. ಸದ್ಯ ಆಕೆಯ ಆರೋಗ್ಯವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇಲ್ಲಿ ಗಮನಿಸಬೇಕಾದ ಅಂಶವೆನೆಂದರೆ, ದಂಪತಿಗಳು ಹಸುವಿಗೆ ಯಾವುದೇ ಪ್ರಚೋದನೆ ಮಾಡದಿದ್ದರೂ ಸಹ, ಆ ಹಸು ಬೈಕ್‌ನ ಮೇಲೆ ಹೊರಟಿದ್ದ ಮಹಿಳೆಯನ್ನೇ ಗುರಿ ಮಾಡಿ ಏಕೆ ದಾಳಿ ಮಾಡಿತು ಎಂಬುದು ತಿಳಿದುಬಂದಿಲ್ಲ.

ಮಹಿಳೆಯ ಮೇಲೆ ಘೋರವಾಗಿ ದಾಳಿ ಮಾಡಿದ ಹಸುವಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಸ್ತೆಯಲ್ಲಿ ಸಂಚರಿಸುವಾಗ ಬೀದಿ ಪ್ರಾಣಿಗಳಿಂದ ಎಚ್ಚರಿಕೆಯಿಂದ  ಇರುವುದು ಒಳ್ಳೆಯದು.

spot_img
spot_img
- Advertisment -spot_img