Saturday, July 13, 2024
spot_img
spot_img
spot_img
spot_img
spot_img
spot_img

ಉದ್ಯೋಗದ ಆಮಿಷ : 200ಕ್ಕೂ ಹೆಚ್ಚು ಯುವತಿಯರ ಮೇಲೆ ಹಲ್ಲೆ, ಅತ್ಯಾಚಾರ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸುಮಾರು 200ಕ್ಕೂ ಹೆಚ್ಚು ಯುವತಿಯರನ್ನು ಕೂಡು ಹಾಕಿ, ಅತ್ಯಾಚಾರ ಮಾಡಲಾಗಿದೆ ಎಂಬ ಅವಮಾನೀಯ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಇಂತ ಅವಮಾನೀಯ ಘಟನೆ ನಡೆದಿದ್ದು ಬಿಹಾರದಲೆಂದು ತಿಳಿದು ಬಂದಿದ್ದು, ಘಟನೆಗೆ ಸಂಭದಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಮೂಲಗಳ ಪ್ರಕಾರ, ಇಲ್ಲಿ ಅವಕಾಶ ಇದೆ, ಅಲ್ಲಿ ಅವಕಾಶ ಇದೆ, ಉದ್ಯೋಗ ಮಾಡಿಕೊಂಡುತ್ತೇವೆ ಎಂದೆಲ್ಲ ಹೇಳಿ ಯುವತಿಯರನ್ನು ನಂಬಿಸಿ ಲೈಂಗಿಕವಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : NFL : ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ವರದಿಗಳ ಪ್ರಕಾರ, ಆರೋಪಿ ಗ್ಯಾಂಗ್ ಬಿಹಾರದ ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳನ್ನು ಬಂಡವಾಳ ಮಾಡಿಕೊಂಡಿದ್ದಲ್ಲದೆ, DVR ಹೆಸರಿನ ನಕಲಿ ಮಾರ್ಕೆಟಿಂಗ್ ರಾಕೆಟ್ (ಕಂಪನಿ) ತೆರೆಯಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ ಜಾಹೀರಾತುಗಳನ್ನು ನೀಡಿ ಮುಜಾಫರ್‌ಪುರಕ್ಕೆ ಭೇಟಿ ನೀಡುವಂತೆ ಇದರಲ್ಲಿ ತಿಳಿಸಿದರು.

ಆಮಿಷಕ್ಕೆ ಒಳಗಾಗಿ ಬಂದ ಹಲವು ಯುವತಿಯರನ್ನು ಬಂಧಿಸಿ, ಅವರ ಮೇಲೆ ಒಂದು ತಿಂಗಳುಗಳ ಕಾಲ ನಿರಂತರ ಅತ್ಯಾಚಾರ ಮಾಡಿದ್ದಾರೆ. ನಕಲಿ ಉದ್ಯೋಗ ಏಜೆಂಟ್​​​ಗಳ ಸಂಸ್ಥೆಗಳನ್ನು ನಡೆಸುತ್ತಿದ್ದ, ಒಂಬತ್ತು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : Health : ಒಂದು ತಿಂಗಳು ಚಹಾ ಕುಡಿಯುವುದನ್ನು ಬಿಟ್ಟರೆ ಏನಾಗಬಹುದು ಗೊತ್ತೆ.?

ಇದೀಗ ಒಂದು ದೊಡ್ಡ ಮೋಸದ ಜಾಲ ಪತ್ತೆ ಮಾಡಲಾಗಿದ್ದು, ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಯುವತಿಯರನ್ನು ಉದ್ಯೋಗ ನೀಡುತ್ತೇವೆ ಎಂದು ಯುವತಿಯರನ್ನು ತಿಂಗಳುಗಳ ಕಾಲ ಬಂಧಿಯಾಗಿಸಿ, ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅನೇಕ ಬಾರಿ ಅವರ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೀಗ ಈ ಬಗ್ಗೆ ವಿಡಿಯೋ ವೈರಲ್​​ ಆಗುತ್ತಿದ್ದಂತೆ, ಈ ಒಂಬತ್ತು ಮಂದಿಯೂ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ : BBMP : ಬಿಬಿಎಂಪಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ನು ಈ ಬಗ್ಗೆ ಕಿರುಕುಳ ಅನುಭವಿಸಿದ ಒಬ್ಬ ಯುವತಿ ನ್ಯಾಯಾಲಯದ ಮುಂದೆ ದೂರು ನೀಡಿದ್ದಾಳೆ. ದೂರುದಾರರ ಹೇಳಿಕೆ ಹಾಗೂ ಈ ಜಾಲಕ್ಕೆ ಬಲಿಯಾದ ಅನೇಕರ ದೂರನ್ನು ದಾಖಲಿಸಿಕೊಂಡಿದ್ದೇವೆ.

ದೂರುದಾರರು ತಿಳಿಸಿರುವಂತೆ ಈ ಜಾಹೀರಾತುಗಳನ್ನು ನೋಡಿ, ಮುಜಾಫರ್‌ಪುರಕ್ಕೆ ಬಂದಾಗ ಅವಳನ್ನು ಮೊದಲು ಕೋಣೆಯಲ್ಲಿ ಇರಿಸಲಾಗಿತ್ತು. ಆ ಕೋಣೆಯಲ್ಲಿ ಇನ್ನೂ ಹಲವಾರು ಯುವತಿಯರೂ ಇದ್ದರು. ಅಲ್ಲಿಂದ ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆ ಯುವತಿಯರಿಗೆ ಈ ಒಂಬತ್ತು ಮಂದಿ ಆರೋಪಿಗಳು ಚಿತ್ರಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರ ಜತೆಗೆ ಅವರು ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

spot_img
spot_img
- Advertisment -spot_img