Wednesday, May 22, 2024
spot_img
spot_img
spot_img
spot_img
spot_img
spot_img

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಯಾವ Colour ಬಟ್ಟೆ ಧರಿಸಬೇಕು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಜೀವನದಲ್ಲಿರುವ ಬಹುಪಾಲು ಸಮಸ್ಯೆಗಳಿಗೆ ಜ್ಯೋತಿಷ್ಯದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಜ್ಯೋತಿಷ್ಯವು (Astrology) ಆದಿ ಕಾಲದಿಂದಲೂ ಮಾನವ ಬದುಕಿಗೆ ನಿರ್ದೇಶನ ಹಾಗೂ ಪ್ರೇರೇಪಣೆ (Direction and motivation) ನೀಡುತ್ತದೆ. ನಮ್ಮ ಆಸೆಗಳು ಮತ್ತು ಪ್ರೇರಣೆಗಳ ಹಿಂದಿನ ಚಾಲನಾ ಶಕ್ತಿಗಳನ್ನು ಮುನ್ನಡೆಸಲು ಜ್ಯೋತಿಷ್ಯ ಸಹಾಯ ಮಾಡುತ್ತದೆ.

ಜೀವನದ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯಲು ನಾವು ದಿನನಿತ್ಯ ಯಾವ ಬಣ್ಣದ ಬಟ್ಟೆಗಳನ್ನು (What color clothes) ಧರಿಸಬೇಕು ಎಂಬುದು ಕೂಡ ಮುಖ್ಯವಾಗುತ್ತದೆ.

ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್‌.

ಸೋಮವಾರ :
ಶಿವ ಮತ್ತು ಚಂದ್ರ ದೇವನ ದಿನವೆಂದು ಪರಿಗಣಿಸಲಾಗುವ ಸೋಮವಾರ, ಬಿಳಿ ಮತ್ತು ಬೆಳ್ಳಿ (ಸಿಲ್ವರ್) ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ (good luck). ಈ ದಿನ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಜೀವನದಲ್ಲಿ ಶಾಂತಿ ಸಿಗುತ್ತದೆ.

ಮಂಗಳವಾರ :
ಮಂಗಳವಾರ ಹನುಮಂತನ ದಿನ. ಆದ್ದರಿಂದ, ಭಜರಂಗಬಲಿಯ ಆಶೀರ್ವಾದ (blessing) ಪಡೆಯಲು, ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ಬುಧವಾರ :
ಈ ದಿನವೂ ಗಣಪನಿಗೆ ಸಮರ್ಪಿತವಾಗಿದೆ. ಹಸಿರು ಗಣೇಶನಿಗೆ ತುಂಬಾ ಇಷ್ಟವಾದ್ದರಿಂದ ಈ ದಿನ ಹಸಿರು ಬಣ್ಣದ (green colour) ಬಟ್ಟೆಗಳನ್ನು ಧರಿಸುವುದು ಶುಭ.

ಗುರುವಾರ :
ಈ ದಿನ ವಿಷ್ಣು ಮತ್ತು ಗುರು ರಾಯರನ್ನು ನೆನೆಯಲಾಗುತ್ತದೆ. ಹಾಗಾಗಿ ಈ ದಿನ ಹಳದಿ ಬಣ್ಣದ (yellow colour) ಬಟ್ಟೆಗಳನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ.

ಶುಕ್ರವಾರ :
ಲಕ್ಷ್ಮೀ ಮತ್ತು ಶುಕ್ರ ದೇವನನ್ನು ಈ ದಿನ ನೆನೆಯಲಾಗುತ್ತದೆ. ಪೂಜೆಯಲ್ಲಿ ಲಕ್ಷ್ಮೀ ದೇವಿಗೆ ಕೆಂಪು ಕುಂಕುಮ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಅರ್ಪಿಸಲಾಗುತ್ತದೆ. ಆದ್ದರಿಂದ ಈ ದಿನದಂದು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಎಲ್ಲಾ ರೀತಿಯ ಆಸೆಗಳು ಈಡೇರುತ್ತವೆ (Wishes are fulfilled) ಎಂದು ನಂಬಲಾಗಿದೆ.

ಇದನ್ನು ಓದಿ : ವಿಡಿಯೋ ನೋಡಿ ಪ್ಯಾಂಟ್‌ಲ್ಲೇ ಸುಸ್ಸೂ ಮಾಡ್ಕೊಂದಿದ್ದಾನೆ ಅನ್ಕೊಬೇಡಿ ; ಇದು ಹೊಸ Fashion.!

ಶನಿವಾರ :
ಈ ವಾರ ಶನಿ ದೇವರಿಗೆ ಸಮರ್ಪಿತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನಿಗೆ ಕಪ್ಪು ಬಣ್ಣ (black colour) ಬಲು ಪ್ರೀತಿಯಾಗಿರುವುದರಿಂದ ಅದೇ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ ಎನ್ನಲಾಗಿದೆ.

ಭಾನುವಾರ :
ಭಾನುವಾರವನ್ನು ಸೂರ್ಯ ದೇವನ ಆರಾಧನೆಯ ದಿನವೆಂದು ಪರಿಗಣಿಸಲಾಗುತ್ತದೆ. ಸೂರ್ಯ ದೇವರ ಮಹಿಮೆಯಂತೆ, ಈ ದಿನದಂದು ಚಿನ್ನ, ಗುಲಾಬಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಗೌರವ ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು (success) ತರುತ್ತದೆ ಎಂದು ನಂಬಲಾಗಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img