ಜನಸ್ಪಂದನ ನ್ಯೂಸ್, ಡೆಸ್ಕ್ : ಮಾನವನ ಜೀವನದಲ್ಲಿ ನಿದ್ರೆಯೂ ಆರೋಗ್ಯಕರ ಜೀವನ ಶೈಲಿಯನ್ನು (life style) ಕಾಪಾಡಿಕೊಳ್ಳಲು ಮಹತ್ವದ ಪಾತ್ರವನ್ನು ವಹಿಸುತ್ತದೆ. ಬಹುತೇಕ ಪ್ರಾಣಿಗಳು ಕಣ್ಣು ಮುಚ್ಚಿ ನಿದ್ರಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ.
ಆದರೆ ಬಹಳಷ್ಟು ಜನರಿಗೆ ಗೊತ್ತೆ ಇರದ ವಿಷಯವೇನೆಂದರೆ ಮೀನುಗಳು ಸಹ ನಿದ್ರಿಸುತ್ತವೆಯೇ? ಎಂಬುದು. ಅದಕ್ಕೆ ಉತ್ತರ ಹೌದು. ಮೀನುಗಳು (fishes) ನೀರಿನಲ್ಲಿ ಹೇಗೆ ಮಲಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.
ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್.
ಮೀನುಗಳು ಭೂಮಿಯ ಮೇಲಿನ ಪ್ರಾಣಿಗಳಂತೆಯೇ ಮಲಗುವುದಿಲ್ಲ. ಬದಲಾಗಿ ತಮ್ಮ ದೈಹಿಕ ಚಟುವಟಿಕೆಯನ್ನು (Physical activity) ಕಡಿಮೆ ಮಾಡುವ ಮೂಲಕ ಒಮ್ಮೆ ವಿಶ್ರಾಂತಿ ಪಡೆಯುತ್ತವೆ. ಇದು ಚಲನೆಯನ್ನು ಕಡಿಮೆ ಮಾಡುವುದು, ಚಯಾಪಚಯವನ್ನು ಕಡಿಮೆ ಮಾಡುವುದು ಮತ್ತು ನಿಧಾನವಾಗಿ ಉಸಿರಾಡುವುದನ್ನು ಒಳಗೊಂಡಿರುತ್ತದೆ.
ಕೆಲವು ಮೀನುಗಳು ಪಕ್ಷಿಗಳಂತೆ ತಮಗೆ ಮೀಸಲಾದ ಗೂಡುಗಳನ್ನು ಹೊಂದಿರುತ್ತವೆ. ಇನ್ನು ಕೆಲವು ಮೀನುಗಳು ನಿದ್ರೆ (sleeping) ಮಾಡಲು ನೀರಿನಲ್ಲಿ ತೇಲುತ್ತವೆ.
ಭೂಮಿಯಲ್ಲಿ ವಾಸಿಸುವ ಮತ್ತು ಮಲಗುವ ಸಮಯದಲ್ಲಿ ಕಣ್ಣುರೆಪ್ಪೆಗಳನ್ನು ಮುಚ್ಚುವ ಸಸ್ತನಿಗಳಂತೆ, ಮೀನುಗಳಿಗೆ ಕಣ್ಣುರೆಪ್ಪೆಗಳಿಲ್ಲ. ಇದರ ಪರಿಣಾಮವಾಗಿ ಮೀನುಗಳು ತಮ್ಮ ಕಣ್ಣುಗಳನ್ನು ತೆರೆದುಕೊಂಡೆ ಮಲಗುತ್ತವೆ.
ಮೀನುಗಳ ಮಲಗುವ ಸಮಯದ ಬಗ್ಗೆ ತಿಳಿಯುವುದಾದರೆ, ಹೆಚ್ಚಿನ ಮೀನುಗಳು ಹಗಲಿನಲ್ಲಿ ಎಚ್ಚರವಾಗಿರುತ್ತವೆ ಮತ್ತು ರಾತ್ರಿಯಲ್ಲಿ ಮಲಗುತ್ತವೆ. ಕ್ಯಾಟ್‌ಫಿಶ್, ನೈಫ್‌ಫಿಶ್ ಮತ್ತು ಲೋಚ್‌ಗಳಂತಹ ಇತರ ಕೆಲವು ಮೀನುಗಳು ರಾತ್ರಿಯ ಮೀನುಗಳಾಗಿವೆ. ಅಂದರೆ, ರಾತ್ರಿಯ ವೇಳೆ ಎಚ್ಚರದಿಂದ (careful) ಇರುತ್ತವೆ.
ಶಾರ್ಕ್‌ಗಳಂತಹ ಕೆಲವು ಮೀನುಗಳು ತಮ್ಮ ಕಿವಿರುಗಳ ಮೂಲಕ ಗಾಳಿಯಾಡಲು (to ventilate) ಅಂದರೆ ಉಸಿರಾಡಲು ನಿದ್ರೆಯ ಸಮಯದಲ್ಲಿಯೂ ಚಲಿಸುತ್ತಲೇ ಇರಬೇಕು.
ಕೆಲವು ಸಂದರ್ಭಗಳಲ್ಲಿ ಮೀನುಗಳು ನಿದ್ರೆಯನ್ನೇ ಮಾಡುವುದಿಲ್ಲ. ತಮ್ಮ ಮರಿಗಳನ್ನು ನೋಡಿಕೊಳ್ಳುತ್ತಿರುವಾಗ, ವಲಸೆ (immigration) ಹೋಗುತ್ತಿರುವಾಗ ನಿದ್ರಿಸುವುದಿಲ್ಲ. ನೀಲಿ ಮೀನು, ಅಟ್ಲಾಂಟಿಕ್ ಮ್ಯಾಕೆರೆಲ್, ಟ್ಯೂನ ಮತ್ತು ಬೊನಿಟೊದಂತಹ ಕೆಲವು ಜಾತಿಯ ಮೀನುಗಳಲ್ಲಿ ನಿದ್ರೆಯ ಕೊರತೆಯನ್ನು ಗುರುತಿಸಲಾಗಿದೆ.
ಇದನ್ನು ಓದಿ : ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇದಲ್ಲದೆ, ಕೆಲವು ಹವಳಗಳು, ಗುಹೆಗಳು, ಬಿರುಕುಗಳು, ಸಸ್ಯಗಳು ಮತ್ತು ಪರಭಕ್ಷಕಗಳಿಂದ ತಮ್ಮನ್ನು ಮರೆಮಾಡುವ ಮಣ್ಣಿ ಗುಡ್ಡೆಗಳಂತಹ ಸುರಕ್ಷಿತ ಸ್ಥಳಗಳನ್ನು (safe place) ಹುಡುಕುತ್ತವೆ.
ಮೀನುಗಳು ಮಲಗಿರುವಾಗಲೂ ಕೆಲ ಮೆದುಳಿನ ಚಟುವಟಿಕೆಯನ್ನು ಮಾಡುತ್ತಿರುತ್ತವೆ. ಪರಭಕ್ಷಕಗಳ (of predators) ದಾಳಿಯಿಂದ ತಪ್ಪಿಸಿಕೊಳ್ಳಲು ಈ ಕ್ರಮವನ್ನು ಅನುಸರಿಸುತ್ತವೆ.