Saturday, July 27, 2024
spot_img
spot_img
spot_img
spot_img
spot_img
spot_img

ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್‌.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದು, ತಕ್ಷಣ ಅಲ್ಲೇ ಇದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ ಆತನನ್ನು ರಕ್ಷಿಸಿ ಆಗಬಹುದಾದ ಅಪಾಯದಿಂದ ಪಾರು ಮಾಡಿದ್ದಾರೆ.

ಉತ್ತರಾಖಂಡದ (Uttarakhand) ಲಸ್ಕರ್‌ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನು ಓದಿ : ಮದುವೆ ಸಂಭ್ರಮಕ್ಕೆ ಬಂದು WhatsApp ಸ್ಟೇಟಸ್ ಹಾಕಿ ನೇಣಿಗೆ ಶರಣಾದ ಖ್ಯಾತ ನಟಿ.!

ಘಟನೆಯ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮಹಿಳಾ ಪೊಲೀಸ್‌ ಸಿಬ್ಬಂದಿಯ ಶಕ್ತಿ, ಸಾಮರ್ಥ್ಯ ಹಾಗೂ ಕರ್ತವ್ಯ ಪ್ರಜ್ಞೆಗೆ (To a sense of duty) ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯು ಕೋಲ್ಕತ್ತಾ-ಜಮ್ಮು ಟವಿ ಎಕ್ಸ್‌ಪ್ರೆಸ್‌ ರೈಲಿಗೆ (express train) ಹತ್ತಲು ಹೋಗಿದ್ದು, ಫ್ಲ್ಯಾಟ್‌ಫಾರ್ಮ್‌ ಮತ್ತು ರೈಲಿನ ನಡುವಿನ ಸಂದಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಜಿಆರ್‌ಪಿ ಕಾನ್‌ಸ್ಟೇಬಲ್‌ ಉಮಾ ಆತನನ್ನು ರಕ್ಷಿಸಿದ್ದಾರೆ.

ತಿಂಡಿ ಮತ್ತು ಜ್ಯೂಸ್‌ ತೆಗೆದುಕೊಳ್ಳಲೆಂದು ಆ ವ್ಯಕ್ತಿ ರೈಲಿನಿಂದ ಇಳಿದಿದ್ದ. ತಕ್ಷಣ ಹೊರಡುತ್ತಿದ್ದನ್ನು ಗಮನಿಸಿದ ಆ ಓಡಿ ಹೋಗಿ ಹತ್ತಲು ಯತ್ನಿಸಿದ್ದಾನೆ. ಕೈಯಲ್ಲಿ ಆಹಾರ ಪೊಟ್ಟಣಗಳು ಇದ್ದ ಕಾರಣ ಆತನಿಗೆ ಹತ್ತಲು ಸಾಧ್ಯವಾಗಿಲ್ಲ. ಹೀಗಾಗಿ ಆಯತಪ್ಪಿ (squarely) ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನು ಓದಿ : ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ನು ಘಟನೆ ಬಳಿಕ ರೈಲು ಐದು ಗಂಟೆ ತಡವಾಗಿ ಲಕ್ಷರ್‌ ರೈಲು ನಿಲ್ದಾಣಕ್ಕೆ ತಲುಪಿದೆ. ಆ ವ್ಯಕ್ತಿ ಕೆಳಗೆ ಬೀಳುತ್ತಿದ್ದನ್ನು ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ರೈಲಿನ ಚೈನ್‌ ಎಳೆದು ರೈಲನ್ನು ನಿಲ್ಲಿಸಿದ್ದರು.

ಇನ್ನು ಆತನಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ (No serious injuries), ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img