Saturday, June 14, 2025

Janaspandhan News

HomeViral VideoVedio : ನದಿಯಲ್ಲಿ ಸಿಲುಕಿದ Fortuner ಕಾರು ; ಕ್ಷಣದಲ್ಲೇ ದಡಕ್ಕೆ ತಂದ ಆನೆ.!
spot_img
spot_img

Vedio : ನದಿಯಲ್ಲಿ ಸಿಲುಕಿದ Fortuner ಕಾರು ; ಕ್ಷಣದಲ್ಲೇ ದಡಕ್ಕೆ ತಂದ ಆನೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ನದಿಯಲ್ಲಿ ಸಿಲುಕಿಕೊಂಡಿದ್ದ ಟೊಯೋಟೊ ಫಾರ್ಚುನರ್ (Fortuner) ಎಸ್‌ಯುವಿ ಕಾರನ್ನು ಆನೆಯೊಂದು ಕ್ಷಣ ಮಾತ್ರದಲ್ಲಿ ಹೊರಗೆಳೆದ (Pulled out in a moment) ಘಟನೆ ಕೇರಳದ ಪಾಲಕ್ಕಾಡ್ (Palakkad, Kerala) ಜಿಲ್ಲೆಯ ಒಟ್ಟಪ್ಪಲಂ ಸಮೀಪ ನಡೆದಿದೆ.

ಕೇರಳದ ಒಟ್ಟಪ್ಪಲಂ ಬಳಿ ನದಿಯ ದಡದಲ್ಲಿ ಟೊಯೋಟೊ ಫಾರ್ಚುನರ್ ಕಾರಿನ ಎಡಭಾಗದ ಗಾಲಿಗಳು ಮಣ್ಣಿನಲ್ಲಿ ಸಿಲುಕಿಕೊಂಡಿದ್ದವು (left wheels were stuck in the mud). ಕಾರಿನ ಮಾಲೀಕ ಮತ್ತು ಚಾಲಕ ಕಾರನ್ನು ನದಿಯಿಂದಾಚೆ ಹೊರತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ.

ಇದನ್ನು ಓದಿ : Belagavi : ನನ್ನ ಸಾವಿಗೆ ಹೆಂಡತಿಯೇ ಕಾರಣ ; ಡೆತ್ ನೋಟ್ ಬರೆದಿಟ್ಟು ಪತಿ ಸಾವು.!

ಅವರ ಪ್ರಯತ್ನದಿಂದ ಕಾರಿನ ಗಾಲಿಗಳು ಇನ್ನಷ್ಟು ಆಳಕ್ಕೆ ಜಾರಿಕೊಂಡಿತು (car slid into the deep). ಇನ್ನೂ ಆ ಪ್ರದೇಶಕ್ಕೆ ಯಾವುದೇ ಇತರ ವಾಹನಗಳನ್ನು ತಂದು ಕಾರನ್ನು ಎಳೆಯಲು ಸಾಧ್ಯವಿರಲಿಲ್ಲ.

ಕಾರಿನ ಮಾಲೀಕನಿಗೆ ಒಂದು ಯೋಚನೆ ಬಂದಿದೆ. ಅದೇನೆಂದರೆ ಆನೆಯ ಸಹಾಯ ಪಡೆದು ಕಾರನ್ನು ಹೊರಗೆ ತೆಗೆಯುವ ಯೋಚನೆ.

ಇದನ್ನು ಓದಿ : Dharawad : ಲಾರಿಗೆ ಗುದ್ದಿದ ಕಾರು ; ಸ್ಥಳದಲ್ಲಿಯೇ 3 ಸಾವು.!

ಕೇರಳದ ತಿರುವೇಗಪುರದ ಶಂಕರನಾರಾಯಣನ್ ಎಂಬ ಆನೆಯ ಮಾಲೀಕನನ್ನು ಸಂಪರ್ಕಿಸಿ, ಕಾರನ್ನು ಎಳೆಯಲು ಸಹಾಯ ಮಾಡುವಂತೆ ಕೇಳಿಕೊಂಡರು. ಆನೆಯ ಮಾಲೀಕ ಶಂಕರನಾರಾಯಣನ್ ಒಪ್ಪಿಗೆ ನೀಡಿ ಆನೆಯನ್ನು ಘಟನಾ ಸ್ಥಳಕ್ಕೆ ಕರೆತಂದರು.

ಬಳಿಕ ನದಿಯಲ್ಲಿ ಸಿಲುಕಿದ್ದ ಫಾರ್ಚುನರ್ ಕಾರಿಗೆ ಹಗ್ಗವನ್ನು ಕಟ್ಟಲಾಯಿತು. ಈ ಹಗ್ಗವನ್ನು ಆನೆಯು ತನ್ನ ಸೊಂಡಿಲಿನಲ್ಲಿ ಗಟ್ಟಿಯಾಗಿ ಹಿಡಿಯಿತು (Held tightly in the trunk). ಒಂದೇ ಎಳೆತದಲ್ಲಿ, ಆನೆಯು ಬಹು ತೂಕದ ಕಾರನ್ನು ಸುಲಭವಾಗಿ ನದಿಯಿಂದ ಹೊರತೆಗೆಯಿತು.

ಇದನ್ನು ಓದಿ : Mahirakhan : ಖ್ಯಾತ ನಟಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಭದ್ರತಾ ಸಿಬ್ಬಂದಿ ; ವಿಡಿಯೋ.!

ಈ ಘಟನೆಯಿಂದ ಕಾರಿನ ಮಾಲೀಕ ಸೇರಿದಂತೆ ಸ್ಥಳದಲ್ಲಿದ್ದ ಎಲ್ಲರೂ ಅಚ್ವರಿ ಹಾಗೂ ಆನಂದ ವ್ಯಕ್ತಪಡಿಸಿದರು. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video goes viral on social media) ಆಗಿದೆ.

ಗಜರಾಜನು ಟೊಯೋಟೊ ಫಾರ್ಚುನರ್ ಕಾರನ್ನು ಕ್ಷಣದಲ್ಲಿಯೇ ಎಳೆದ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

Fortuner ಕಾರನ್ನು ಎಳೆದು ತರುತ್ತಿರುವ ಆನೆಯ ವಿಡಿಯೋ :

ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ (Fire) ಹಚ್ಚಿಕೊಂಡ ಘಟನೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫಾನಾ ಠಾಣೆ ವ್ಯಾಪ್ತಿಯ ಅಮ್ದರಿಯಾ ಎಂಬಲ್ಲಿ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ (Fire) ಹಚ್ಚಿಕೊಂಡ ಘಟನೆ ನಡೆದಿದೆ.

ಇದನ್ನು ಓದಿ : ಬೇರೊಬ್ಬಳೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಿಬಿದ್ದ ಲವರ್ ; ಪ್ರೇಯಸಿ ಮಾಡಿದ್ದೇನು ಗೊತ್ತಾ? Video ನೋಡಿ

ಹೀಗೆ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫಾನಾ ಠಾಣೆ ವ್ಯಾಪ್ತಿಯ ಅಮ್ದರಿಯಾ ಎಂಬಲ್ಲಿ ಯುವತಿ ಮದುವೆಗೆ ಒಪ್ಪದಿದ್ದಕ್ಕೆ ಈ ಯುವಕ ಆಕೆಯ (ಯುವತಿಯ) ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!

ಯುವತಿಯ ಮನೆಗೆ ಕೆಲಸ ಮುಗಿಸಿ ನೇರವಾಗಿ ಬಂದ ಯುವಕ, ಪೆಟ್ರೋಲ್ ಸುರಿಕೊಂಡು ಮದುವೆಯಾಗಲು ಒಪ್ಪುವಂತೆ ಒತ್ತಡ ಹೇರಿದ್ದಾನೆ. ಆಗ ಯುವತಿಯು ಯುವಕನ ಬೇಡಿಕೆಯನ್ನು ನಿರಾಕರಿಸಿದ್ದಾರೆ.

ಮದುವೆಗೆ ಯುವತಿ ನಿರಾಕರಿಸಿದ ಹಿನ್ನಲೆಯಲ್ಲಿ ಕೋಪಗೊಂಡ ಯುವಕ ಮನೆಯ ಹೊರಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!

ಇನ್ನು ಸಿಟ್ಟಿನ ಭರದಲ್ಲಿ ಬೆಂಕಿ ಹಚ್ಚಿಕೊಂಡ ಯುವಕನ ರಕ್ಷಣೆಗೆ ಸ್ಥಳದಲ್ಲಿದ್ದವರು ಪ್ರಯತ್ನಿಸಿದ್ದಾರೆ. ಆದರೆ ಅದಾಗಲೇ ಬೆಂಕಿ ಮೈಯಲ್ಲಾ ಹರಡಿದ ಪರಿಣಾಮ ಸುಮ್ಮನಾದೆವೂ ಎಂದು ಹೇಳಿದ್ದಾರೆ.

ಸದ್ಯ ತೀವ್ರವಾಗಿ ಸುಟ್ಟಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಗಂಭೀರ ಸ್ವರೂಪದ ಗಾಯಗಾಳಾದ ಪರಿಣಾಮ ಯುವಕನನ್ನು ವಾರಣಾಸಿಯ ಬಿಎಚ್‌ಯು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನು ಓದಿ : Sexual harassment : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್.!

ಯುವಕ ಕೂಗಾಡುತ್ತ, ಬೆಂಕಿ ಹಚ್ಚಿಕೊಳ್ಳುವ ಸಂಪೂರ್ಣ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಬಲ್ಲಿಯಾ ಪೊಲೀಸರು, ತನಿಖೆ ನಡೆಯುತ್ತಿದೆ, ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.

ಬೆಂಕಿ (‌Fire) ಹಚ್ಚಿಕೊಂಡ ಯುವಕನ ವೈರಲ್ ವಿಡಿಯೋ :

ಹಿಂದಿನ ಸುದ್ದಿ 😀
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments