ಜನಸ್ಪಂದನ ನ್ಯೂಸ್, ತಿರುಪುರ : ತಮಿಳುನಾಡಿನ ತಿರುಪುರ ಜಿಲ್ಲೆಯ ಕರುವಂಪಾಲಯಂ ಪ್ರದೇಶದಲ್ಲಿ ಅಸಾಮಾನ್ಯ ಘಟನೆ ನಡೆದಿದೆ. ದೇವಸ್ಥಾನ (Temple) ದೊಳಗೆ ಪ್ರವೇಶಿಸಿ ದೇವರಿಗೆ ಬೆನ್ನು ಹಾಕಿ ನಮಾಜ್ ಮಾಡಿದ ಯುವಕನ ವರ್ತನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಮಾಹಿತಿಯ ಪ್ರಕಾರ, ಸೆಂಗುಂತಪುರಂ ಪ್ರದೇಶದ ರಾಜ ಗಣಪತಿ ದೇವಾಲಯದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಪೂಚುಕಾಡು ಪ್ರದೇಶದ 21 ವರ್ಷದ ಅಜ್ಮಲ್ ಖಾನ್ ಎಂಬ ಯುವಕನೊಬ್ಬ ದೇವಸ್ಥಾನ (Temple) ದ ಒಳಭಾಗಕ್ಕೆ ಪ್ರವೇಶಿಸಿ ದೇವರ ಸನಿಹದಲ್ಲಿ ಪ್ರಾರ್ಥನೆ (ನಮಾಜ್) ಮಾಡಿದ್ದಾನೆ.
ಬೆಂಗಳೂರು Rave Party ಮೇಲೆ ಪೊಲೀಸರು ದಾಳಿ ; 35 ಯುವತಿಯರು ಸೇರಿದಂತೆ 115 ಮಂದಿ ವಶಕ್ಕೆ.!
ಈ ವೇಳೆಗೆ ದೇವಸ್ಥಾನ (Temple) ದಲ್ಲಿ ಇದ್ದ ಅರ್ಚಕರು ಮತ್ತು ಭಕ್ತರು ಆತನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಹೊರಗೆ ಹೋಗುವಂತೆ ವಿನಂತಿಸಿದ್ದಾರೆ.
ಯುವಕ ಮತ್ತು ಅರ್ಚಕರ ನಡುವೆ ಚಿಕ್ಕ ಮಟ್ಟದ ವಾಗ್ವಾದ ಸಂಭವಿಸಿದ ನಂತರ ಭಕ್ತರು ಮಧ್ಯ ಪ್ರವೇಶಿಸಿ ಯುವಕನನ್ನು ದೇವಾಲಯ (Temple) ದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಘಟನೆ ನಡೆದ ಕೆಲವೇ ಹೊತ್ತಿನಲ್ಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದ್ದಾರೆ.
“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”
ಪೊಲೀಸ್ ಮೂಲಗಳ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಯುವಕ ಮದ್ಯದ ಅಮಲಿನಲ್ಲಿದ್ದನು ಎಂಬುದು ತಿಳಿದುಬಂದಿದೆ. ಈ ಸಂಬಂಧ ಯುವಕನಿಗೆ ಕಾನೂನುಬದ್ಧ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಪುನರಾವರ್ತಿಸದಂತೆ ಸೂಚಿಸಲಾಗಿದೆ.
ಪೊಲೀಸರು ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಕೆಲವು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ಯುವಕನ ಹಿನ್ನೆಲೆ ಮತ್ತು ಉದ್ದೇಶಗಳ ಕುರಿತು ತನಿಖೆ ಮುಂದುವರಿದಿದೆ.
Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ಸಾಮಾಜಿಕ ಸಂಘಟನೆಗಳು ಶಾಂತಿ ಕಾಪಾಡಿಕೊಳ್ಳುವಂತೆ ವಿನಂತಿ ಮಾಡಿದ್ದು, “ಯಾರೇ ಆಗಲಿ ಧಾರ್ಮಿಕ ಸ್ಥಳಗಳಲ್ಲಿ ನಿಯಮ ಪಾಲನೆ ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನ (Temple) ದಲ್ಲಿಯ ವಿಡಿಯೋ :
SHOCKING: Ajmal Khan storms Raja Ganapathi Temple, Tiruppur, performs NAMAZ with BACK to Ganesha allegedly in an intoxicated state
Priest & devotees escorted him out after argument; Arrested by TNPolice for nuisance. VHP alleges pattern;demands NIA probe pic.twitter.com/wiZSed1wuU
— Megh Updates 🚨™ (@MeghUpdates) October 29, 2025
ಕಿರುಕುಳ ನೀಡಿದ Police ನಿಗೆ ಮಧ್ಯರಸ್ತೆಯಲ್ಲೇ ಎಳೆದು ಯುವತಿಯಿಂದ ಏಟು ; ವಿಡಿಯೋ.!

ಜನಸ್ಪಂದನ ನ್ಯೂಸ್, ಕಾನ್ಪುರ್ : ಮಹಿಳಾ ಸುರಕ್ಷತೆಗೆ ಹೆಸರಾಗಿರುವ ಕಾನ್ಪುರ್ ಪೊಲೀಸ್ (Police) ಇಲಾಖೆಯ ಖ್ಯಾತಿಗೆ ಧಕ್ಕೆ ತಂದಂತಹ ಘಟನೆ ನಡೆದಿದೆ. ಮಹಿಳೆಯೊಬ್ಬಳಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸ್ ಸಿಪಾಯಿಯೊಬ್ಬನನ್ನು ಅಮಾನತುಗೊಳಿಸಲಾಗಿದೆ. ಘಟನೆ ಕಾನ್ಪುರ್‌ನ ಗೋಲ್ ಚೌರಾಹಾ ಪ್ರದೇಶದಲ್ಲಿರುವ ಗುರುದೇವ ಪೋಲೀಸ್ ಚೌಕಿಯ ಹತ್ತಿರ ನಡೆದಿದೆ.
ವರದಿಗಳ ಪ್ರಕಾರ, ಮಹಿಳೆಯೊಬ್ಬಳು ಸ್ಟಾಂಪ್ ಪೇಪರ್ ಖರೀದಿಸಲು ಗೋಲ್ ಚೌರಾಹಾಕ್ಕೆ ತೆರಳಿದ್ದಾಗ, ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ (Police) ಸಿಬ್ಬಂದಿಯೊಬ್ಬನು ಹಿಂದಿನಿಂದಲೇ ಆಕೆಯ ಗಮನ ಸೆಳೆಯಲು ಅಶ್ಲೀಲ್ ಸನ್ನೆ ಮಾಡಲು ಪ್ರಯತ್ನಿಸಿದ್ದಾನೆ.
Rules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ; ವಿಡಿಯೋ ವೈರಲ್.!
ಬಳಿಕ, ಅವಳ ಮೊಬೈಲ್ ನಂಬರನ್ನು ಕೇಳಿ, ಬಲವಂತವಾಗಿ ಮಾತನಾಡಲು ಯತ್ನಿಸಿದ್ದಾನೆ. ಇದರಿಂದ ಬೇಸತ್ತ ಮಹಿಳೆಯರು ಮಧ್ಯರಸ್ತೆಯಲ್ಲೇ ಪ್ರತಿಭಟಿಸಿದ್ದು, ಆ ಪೊಲೀಸ್‌ನ ಕಾಲರ್ ಹಿಡಿದು ಗುರುದೇವ ಚೌಕಿಯವರೆಗೆ ಎಳೆದೊಯ್ದಿದ್ದಾರೆ.
ಸ್ಥಳದಲ್ಲಿದ್ದ ಹಲವರು ಈ ಘಟನೆಯ ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯಾವಳಿಯಲ್ಲಿ ಆರೋಪಿಯು ತನ್ನ ಪೋಲೀಸ್ (Police) ನೇಮ್ ಪ್ಲೇಟ್ ತೆಗೆದು ಜೇಬಿಗೆ ಇಡುವುದು ಕಾಣಿಸಿಕೊಂಡಿದೆ. ಮಹಿಳೆಯರು ನ್ಯಾಯಕ್ಕಾಗಿ ಪೋಲೀಸ್ ಠಾಣೆಯವರೆಗೂ ತೆರಳಿ ಹೋರಾಟ ಮುಂದುವರಿಸಿದ್ದಾರೆ.
School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!
ಘಟನೆ ಬಳಿಕ ಸ್ಥಳೀಯ ಪೋಲೀಸ್ (Police) ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿದರು. ಮಹಿಳೆಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯು ನಿಜವಾಗಿಯೂ ಅಸಭ್ಯ ವರ್ತನೆ ನಡೆಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಎಸಿಪಿ ರಾಮ್ ಠೇಕೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಆರೋಪಗಳ ಹಿನ್ನೆಲೆ ನೋಡಿದರೆ ಪೊಲೀಸ್ (Police) ಸಿಬ್ಬಂದಿಯ ವರ್ತನೆ ಅಸಭ್ಯವಾಗಿರಬಹುದು ಎಂಬ ಪ್ರಾಥಮಿಕ ಸುಳಿವುಗಳು ದೊರೆತಿವೆ.
ಆದ್ದರಿಂದ ಅವನನ್ನು ತಕ್ಷಣದ ಪರಿಣಾಮದಿಂದ ಅಮಾನತುಗೊಳಿಸಲಾಗಿದೆ. ಜೊತೆಗೆ ಲೈಂಗಿಕ ಕಿರುಕುಳ ಮತ್ತು ಶಿಸ್ತಿನ ಉಲ್ಲಂಘನೆ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಬೆಂಗಳೂರು Rave Party ಮೇಲೆ ಪೊಲೀಸರು ದಾಳಿ ; 35 ಯುವತಿಯರು ಸೇರಿದಂತೆ 115 ಮಂದಿ ವಶಕ್ಕೆ.!
ಈ ಘಟನೆಯು ಸ್ಥಳೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳಾ ಸುರಕ್ಷತೆ ಕುರಿತಂತೆ ಪೊಲೀಸರ (Police) ಪಾತ್ರದ ಮೇಲೆ ಪ್ರಶ್ನೆಗಳು ಎದ್ದಿವೆ. ಉನ್ನತ ಅಧಿಕಾರಿಗಳು ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವಿಡಿಯೋ :
शर्मनाक
कानपुर के गोल चौराहे पर एक लड़की स्टांप पेपर लेने गई थी तभी वहां मौजूद पुलिसकर्मी ने लड़की को छेड़ना शुरू कर दिया और उसके साथ अश्लील हरकत किया
लड़की और लड़की की बहन ने बहादुरी दिखाई, पुलिस वाले का हाथ पकड़ कर खींचते हुए पुलिस चौकी ले गई …रास्ते में पुलिस वाले ने अपना… pic.twitter.com/X2wunUiZGf
— The News Basket (@thenewsbasket) October 29, 2025







