Saturday, July 27, 2024
spot_img
spot_img
spot_img
spot_img
spot_img
spot_img

Phone ಕದ್ದಾಲಿಕೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹೈದರಾಬಾದ್ ಪೊಲೀಸರು ಫೋನ್​ ಕದ್ದಾಲಿಕೆ, ಕೆಲವು ಕಂಪ್ಯೂಟರ್​ಗಳು ಮತ್ತು ಅಧಿಕೃತ ಡೇಟಾ (Data) ವನ್ನು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಶನಿವಾರ ಬಂಧಿಸಿದ್ದಾರೆ.

ಬಂಧಿತ ಅಧಿಕಾರಿಗಳನ್ನು ಹೆಚ್ಚುವರಿ DCP ತಿರುಪತಣ್ಣ (Thirupathanna) ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಎನ್.ಭುಜಂಗರಾವ್ (N Bhujanga Rao) ಎಂದು ತಿಳಿದು ಬಂದಿದೆ.

ಇದನ್ನು ಓದಿ : Facebook ಗೆಳೆಯನಿಂದ ತಾಯಿ-ಮಗನ ಕ್ರೂ*ರ ಹ*ತ್ಯೆ ; ವರ್ಷದ ಬಳಿಕ ಆರೋಪಿ ಸೆ*ರೆ.!

ಬಂಧಿತ ಈ ಇಬ್ಬರು ಪೊಲೀಸ್ ಅಧಿಕಾರಿಗಳು ಈ ಹಿಂದೆ ಕ್ರಮವಾಗಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ (SIB) ಮತ್ತು ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ASP)ಕೆಲಸ ಮಾಡಿದ್ದರು. ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಗುಪ್ತಚರ ಮಾಹಿತಿಯನ್ನು ಅಳಿಸಿಹಾಕಿದ ಆರೋಪದಲ್ಲಿ ಹಾಗೂ ಆಪಾದಿತ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾನತುಗೊಂಡ DSP ಡಿ.ಪ್ರಣೀತ್ ರಾವ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬಗ್ಗೆ ಒಪ್ಪಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳ ಮೇಲೆ ನಿಗಾ ಇಡುವ ಸಂಚು, ಫೋನ್​ ಕದ್ದಾಲಿಕೆಯಂತಹ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಬಂಧಿತರಾಗಿರುವ ವಿಶೇಷ ತನಿಖಾ ದಳದ (SIB) ಡಿಎಸ್​ಪಿ ಆಗಿದ್ದ ಡಿ.ಪ್ರಣೀತ್ ಕುಮಾರ್ ಅಲಿಯಾಸ್ ಪ್ರಣೀತ್ ರಾವ್ (D Praneeth Rao) ಮತ್ತು ಇತರ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದಾರೆ.

ಇದನ್ನು ಓದಿ : PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ಮಾರ್ಚ್ 10ರಂದು ಎಸ್‌ಐಬಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ, ಪ್ರಣೀತ್ ರಾವ್ ಮತ್ತು ಇತರರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸೇವಾಧಿಕಾರಿಯಿಂದ ಕ್ರಿಮಿನಲ್ ನಂಬಿಕೆ ದ್ರೋಹ, ಸಾಕ್ಷ್ಯಾಧಾರಗಳ ನಾಶ, ಕ್ರಿಮಿನಲ್​ ಕ್ರಿಮಿನಲ್ ಪಿತೂರಿ ಆರೋಪದಡಿ ದೂರು ದಾಖಲಿಸಲಾಗಿದೆ.

ಫೋನ್​ ಕದ್ದಾಲಿಕೆ, ಸಾಕ್ಷ್ಯನಾಶ, ನಕಲಿ ಪ್ರೊಫೈಲ್​ ತಯಾರಿ, ರಹಸ್ಯ ಅನಧಿಕೃತ ಮತ್ತು ಕಾನೂನುಬಾಹಿರವಾಗಿ ಮೇಲ್ವಿಚಾರಣೆ ಮಾಡಿದ ಆರೋಪದಡಿ ಹಿರಿಯ ಪೊಲೀಸ್​ ಅಧಿಕಾರಿ ಪ್ರಣೀತ್ ರಾವ್ ಅವರನ್ನು ಮಾರ್ಚ್ 13ರಂದು ಬಂಧಿಸಲಾಯಿತು. ಬಳಿಕ ಗಂಭೀರ ಆರೋಪ ಎದುರಿಸುತ್ತಿರುವ ರಾವ್ ಅವರನ್ನು ತೆಲಂಗಾಣ ಸರ್ಕಾರ ಅಮಾನತುಗೊಳಿಸಿತು. ಬಂಧಿತ ಅಧಿಕಾರಿ ಹಿಂದಿನ ಬಿಆರ್‌ಎಸ್ ಸರ್ಕಾರದಲ್ಲಿ ಡಿಎಸ್‌ಪಿ ಆಗಿದ್ದರು. ನಂತರ ಪೊಲೀಸ್ ಮಹಾನಿರ್ದೇಶಕ (DGP) ಕಚೇರಿಯಲ್ಲಿ ಡಿಎಸ್‌ಪಿ ಆಗಿ ಕೆಲಸ ಮಾಡಿದ್ದಾರೆ.  (ಎಜೇನ್ಸಿಸ್)

spot_img
spot_img
- Advertisment -spot_img