Thursday, April 25, 2024
spot_img
spot_img
spot_img
spot_img
spot_img
spot_img

Facebook ಗೆಳೆಯನಿಂದ ತಾಯಿ-ಮಗನ ಕ್ರೂ*ರ ಹ*ತ್ಯೆ ; ವರ್ಷದ ಬಳಿಕ ಆರೋಪಿ ಸೆ*ರೆ.!

spot_img

ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ಪೊಲೀಸರು ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ-ಮಗನ ಹತ್ಯೆಯ ಕೇಸ್‌ನ್ನು ಭೇಧಿಸುವಲ್ಲಿ ಸಫಲರಾಗಿದ್ದಾರೆ.

ಕಳೆದ ವರ್ಷದ 2023ರ ಮಾರ್ಚ್ 13ರಂದು ಮೈಸೂರು ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಎಂಬುವವರ ಅತಿ ಕ್ರೂರವಾಗಿ ಹತ್ಯೆಯಾಗಿತ್ತು. ಅವರ ಶವಗಳನ್ನು ಬ್ಯಾಗ್‌ವೊಂದರಲ್ಲಿ ತುಂಬಿ ಬಾವಿಗೆ ಬಿಸಾಡಲಾಗಿತ್ತು.

ಈ ತಾಯಿ-ಮಗನ (Double Murder) ಕೊಲೆ ಮಾಡಿದ ವ್ಯಕ್ತಿ ವಿಜಯಪುರದ ಸಾಗರ ನಾಯಕ ಎಂಬಾತ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Belagavi : ಪೊಲೀಸ್ ಠಾಣೆ ಆವರಣದಲ್ಲಿಯೇ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ.!

ಹಿನ್ನಲೆ : 

ಮೈಸೂರಿನಲ್ಲಿದ್ದಾಗ ಆರೋಪಿ ಸಾಗರ ನಾಯಕ ಈತನಿಗೆ ಫೇಸ್‌ಬುಕ್ ಮೂಲಕ ಶೃತಿ ಪರಿಚಯವಾಗಿತ್ತು. ಶೃತಿ ವಿವಾಹಿತಳಾಗಿದ್ದಳು, ಆದರು ಪರಿಚಯವು ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಕಾಲಕ್ರಮೇಣ ಸಾಗರನಿಗೆ ಶೃತಿಯ ನಡತೆ ಮೇಲೆ ಸಂಶಯಗೊಂಡು ಆಕೆಯಿಂದ ದೂರಾಗಿ ವಿಜಯಪುರಕ್ಕೆ ಬಂದಿದ್ದ.

ಅತಿಯಾಗಿ ಪ್ರೀತಿಸುತ್ತಿದ್ದ ಶೃತಿ, ಸಾಗರನನ್ನು ಬಿಟ್ಟಿರಲಾರದೇ ಮಗ ರೋಹಿತ್‌ ಜೊತೆಗೆ ಲಗೇಜ್ ಸಮೇತ ವಿಜಯಪುರಕ್ಕೆ ಮಾರ್ಚ್‌ ತಿಂಗಳಲ್ಲಿ ಬಂದಿದ್ದಳು. ಆಗ ಸಾಗರನೇ ಸಿಂದಗಿ ರಸ್ತೆಯ ಲಾಡ್ಜ್‌ವೊಂದರಲ್ಲಿ ಇರಿಸಿದ್ದ. ಆ ದಿನ ಸಾಗರ ಲಾಡ್ಜ್‌ಗೆ ಬಂದು ಶೃತಿಯೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ಸಿಟ್ಟಿನ ಭರದಲ್ಲಿ ಆಕೆಯ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಕೊಲೆ ನೋಡಿ ಆಕೆಯ ಮಗನನ್ನು ಸಹ ಕತ್ಯೆ ಮಾಡಿ ಅವರು ತಂದಿದ್ದ ಲಗೇಜ್‌ ಬ್ಯಾಗಿನಲ್ಲಿ ಶವಗಳನ್ನು ಪ್ಯಾಕ್‌ ಮಾಡಿದ್ದಾನೆ.

ಶವಗಳಿರುವ ಲಗೇಜ್‌ ಬ್ಯಾಗಿನ್ನು ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿದ್ದ ಬಾವಿಯಲ್ಲಿ ಬಿಸಾಡಿ ಹೊರಟು ಹೋಗಿದ್ದ.

ಇದನ್ನೂ ಓದಿ : PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ವಾರ ಕಳೆದ ನಂತರ ಬಾವಿಯಲ್ಲಿ ಬ್ಯಾಗ್‌ಗಳು ತೇಲುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಾಗ ತಿಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪೊಲೀಸರು ಪರಿಶೀಲನೆ ನಡೆಸಿದಾಗ, ತಾಯಿ- ಮಗನ ಶವಗಳು ಕೊಳೆತ ಸ್ಥಿತಿಯಲ್ಲಿ ಗುರುತು ಸಿಗದಷ್ಟು ಪತ್ತೆಯಾಗಿದ್ದವು. ಯಾವುದೇ ಕ್ಲೂ ಇಲ್ಲದ ಹಿನ್ನಲೆಯಲ್ಲಿ ಪ್ರಕರಣ ಹಾಗೇ ಉಳಿದುಕೊಂಡಿತ್ತು.

ಇನ್ನು ಅತ್ತ  ಮೈಸೂರಿನಲ್ಲಿ ಶೃತಿ ಸಂಬಂಧಿಕರು ಕಳೆ ಫೆಬ್ರುವರಿಯಲ್ಲಿ ಮೈಸೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು. ವಿಜಯಪುರದಲ್ಲಿ ನಡೆದ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಕ್ಕ ವಸ್ತುಗಳಿಗೆ ಮತ್ತು ಮೈಸೂರು ಮಿಸ್ಸಿಂಗ್ ಕೇಸ್‌ಗೂ ಸಾಮ್ಯಾತೆ ಇತ್ತು. ಹೀಗಾಗಿ ಶೃತಿ ಸಂಬಂಧಿಕರು ಮೃತದೇಹಗಳನ್ನು ಗುರುತಿಸಿದ್ದರು. ಇದರ ಜಾಡು ಹಿಡಿದು ಶೃತಿಯ ಕಾಲ್‌ ಲಿಸ್ಟ್‌ ತೆರೆದಾಗ ಸಾಗರ್‌ ಸಿಕ್ಕಿಬಿದಿದ್ದಾನೆ.

ಏನು ಗೊತ್ತಿಲ್ಲದಂತೆ ಆರಾಮಾಗಿದ್ದ ಸಾಗರ್‌ ವರ್ಷದ ನಂತರ ಸಿಕ್ಕಿಬಿದ್ದಿದ್ದು, ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
spot_img
spot_img
spot_img
- Advertisment -spot_img