ಜನಸ್ಪಂದನ ನ್ಯೂಸ್, ನವದೆಹಲಿ : ಕಾಡಿನಲ್ಲಿ ಬೇಟೆಗೆ ಪಳಗಿರುವ ಹುಲಿಗಳು (Tiger) ತಮ್ಮ ಶಿಕಾರಿಗಾಗಿ ಯಾವಾಗಲೂ ತಾಳ್ಮೆಯಿಂದ ಕಾಯುತ್ತಿರುತ್ತವೆ. ಹಸಿದ ಹುಲಿ ಯಾರನ್ನಾದರೂ ಗುರಿಯಾಗಿಸಿಕೊಂಡರೆ ಕ್ಷಣಾರ್ಧದಲ್ಲೇ ದಾಳಿ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ಇತ್ತೀಚೆಗೆ ಸಫಾರಿ ವೇಳೆ ಪ್ರವಾಸಿಗನೊಬ್ಬನ ಮೇಲೆ ಹುಲಿ (Tiger) ದಾಳಿ ಮಾಡಲು ಮುಂದಾದ ದೃಶ್ಯ ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. ಆ ವ್ಯಕ್ತಿ ಕೂದಲೆಳೆಯ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.
“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಸಫಾರಿಯಲ್ಲಿ ಭಯಾನಕ ಕ್ಷಣ :
ಈ ಘಟನೆಯ ವಿಡಿಯೋವನ್ನು Srikanta Chinnu ಎಂಬ ಎಕ್ಸ್ (X) ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಪ್ರಕಾರ, ಕಾಡಿನೊಳಗಿನ ಸಫಾರಿ ವೇಳೆ ಪ್ರವಾಸಿಗನೊಬ್ಬ ಜಿಂಕೆ ಕಂಡು ಹತ್ತಿರ ಹೋಗಿ ಫೋಟೋ ಅಥವಾ ವಿಡಿಯೋ ತೆಗೆಯಲು ಮುಂದಾಗಿದ್ದಾನೆ.
ಆದರೆ ಅಚ್ಚರಿಯಾಗಿ ಅಲ್ಲಿ ಇದ್ದ ಹುಲಿ, ಜಿಂಕೆಯ ಬದಲಿಗೆ ಆ ಪ್ರವಾಸಿಗನತ್ತ ದಾಳಿ ಮಾಡುತ್ತದೆ. ಹುಲಿ (Tiger) ವೇಗವಾಗಿ ಆತನತ್ತ ಬರುವಾಗ, ಆತ ಕೂದಲೆಳೆಯ ಅಂತರದಲ್ಲಿ ೋಡಿ ಹೋಗಿ ತಪ್ಪಿಸಿಕೊಂಡಿದ್ದಾನೆ.
ಅಲ್ಲಿಯೇ ಕಾರಿನಲ್ಲಿದ್ದ ಇತರ ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಆತಂಕದಿಂದ ತಮ್ಮ ವಾಹನಗಳನ್ನು ವೇಗವಾಗಿ ಮುಂದೆ ಚಲಾಯಿಸಿದ್ದಾರೆ.
“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”
ವೈರಲ್ ಆದ ಹುಲಿ (Tiger) ದಾಳಿಯ ವಿಡಿಯೋ :
ಈ ರೋಮಾಂಚಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. 34,000 ಕ್ಕೂ ಅಧಿಕ ಮಂದಿ ಈ ದೃಶ್ಯವನ್ನು ವೀಕ್ಷಿಸಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
- ಒಬ್ಬ ಬಳಕೆದಾರ “ಹುಲಿ (Tiger) ಯಿಂದ ಪಾರಾದ ನಂತರ ಆತ ಎಲ್ಲಿ ಓಡಿಹೋದ?” ಎಂದು ಪ್ರಶ್ನಿಸಿದ್ದರೆ,
- ಮತ್ತೊಬ್ಬ “ಅರಣ್ಯ ಇಲಾಖೆಯು ಇಂತಹ ಅಜಾಗರೂಕ ಪ್ರವಾಸಿಗರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.
- ಇನ್ನೊಬ್ಬ ನೆಟ್ಟಿಗ “ಹುಲಿಗಿಂತ ಭಯಾನಕ ಈ ಏಐ” ಎಂದು ವಿನೋದಪೂರ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಅರಣ್ಯ ಇಲಾಖೆಯಿಂದ ಹುಲಿ (Tigers) ಗಳ ಬಗ್ಗೆ ಎಚ್ಚರಿಕೆ :
ಇಂತಹ ಘಟನೆಗಳ ನಂತರ ಅರಣ್ಯ ಅಧಿಕಾರಿಗಳು ಪ್ರವಾಸಿಗರಿಗೆ ಕಾಡಿನೊಳಗೆ ನಿಯಮ ಪಾಲನೆ ಮಾಡಲು ಮತ್ತು ಪ್ರಾಣಿಗಳ ಹತ್ತಿರ ಹೋಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. “ಹುಲಿ (Tiger) ಗಳು ಪ್ರಕೃತಿಯ ಭಾಗವಾಗಿದ್ದು, ಅವುಗಳ ಪ್ರದೇಶದಲ್ಲಿ ಮಾನವರು ಅಜಾಗರೂಕತೆಯಿಂದ ನಡೆದುಕೊಂಡರೆ ದುರ್ಘಟನೆಗಳು ಸಂಭವಿಸಬಹುದು” ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀವೂ ಮೊಬೈಲ್‌ನಲ್ಲಿ ದೇವರ Wallpaper ಇಟ್ಟುಕೊಂಡಿದ್ದೀರಾ? ತಕ್ಷಣವೇ ತೆಗೆಯಿರಿ ; ಏಕೆ ಗೊತ್ತೆ?

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿವೆ. ಯಾವುದೇ ವಯೋಮಾನದ, ವಿದ್ಯಾರ್ಥಿಗಳು, ಉದ್ಯೋಗಿಗಳು ಅಥವಾ ಗೃಹಿಣಿಯರಾಗಿರಲಿ ಎಲ್ಲರೂ ತಮ್ಮ ಮೊಬೈಲ್ (Mobile) ಫೋನ್‌ನಲ್ಲಿ ತಮ್ಮ ಇಷ್ಟದ ರೀತಿಯಲ್ಲಿ ಕಸ್ಟ್‌ಮೈಸ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ.
ಅದರಲ್ಲೂ ಫೋನ್‌ನ ವಾಲ್‌ಪೇಪರ್ (Wallpaper) ಬದಲಾವಣೆ ಮಾಡುವುದು ಸಾಮಾನ್ಯ. ಅನೇಕರು ತಮ್ಮ ಧಾರ್ಮಿಕ ನಂಬಿಕೆ ಅಥವಾ ಭಕ್ತಿಯಿಂದ ದೇವರ ಅಥವಾ ದೇವತೆಗಳ ಚಿತ್ರಗಳನ್ನು ಮೊಬೈಲ್ ಪರದೆ (Wallpaper) ಯ ಮೇಲೆ ಹಾಕಿಕೊಳ್ಳುತ್ತಾರೆ.
ಆದರೆ ಇಲ್ಲಿ ಪ್ರಶ್ನೆ ಏನೆಂದರೆ? ಮೊಬೈಲ್‌ನಲ್ಲಿ ದೇವರ ಫೋಟೋ ಇಡುವುದು ಶುಭವೇ? ಅಥವಾ ಅಶುಭವೇ? ಎಂಬುದು. ಇದನ್ನು ಧಾರ್ಮಿಕ ಮತ್ತು ವಾಸ್ತು ದೃಷ್ಟಿಯಿಂದ ವಿವರವಾಗಿ ಇದೀಗ ತಿಳಿದುಕೊಳ್ಳೋಣ ಬನ್ನಿ.
“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಮೊಬೈಲ್ ವಾಲ್‌ಪೇಪರ್ (Wallpaper) ನಮ್ಮ ಮನಸ್ಸಿನ ಪ್ರತಿಬಿಂಬ :
ನಾವು ಫೋನ್‌ನ ಪರದೆಯ ಮೇಲೆ ಇಡುವ ಚಿತ್ರಗಳು ನಮ್ಮ ವ್ಯಕ್ತಿತ್ವ ಮತ್ತು ಮನೋಭಾವವನ್ನು ತೋರಿಸುತ್ತವೆ ಎಂದು ಪರಿಣಿತರು ಹೇಳುತ್ತಾರೆ. ಅನೇಕರು ದೇವಾಲಯಗಳು ಮತ್ತು ಮಸೀದಿಗಳಂತಹ ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಸಹ ಇಡುತ್ತಾರೆ.
ಹಾಗೆಯೇ ದೇವರ ಅಥವಾ ದೇವತೆಗಳ ಚಿತ್ರಗಳನ್ನು ವಾಲ್‌ಪೇಪರ್ (Wallpaper) ಆಗಿ ಇಟ್ಟು ಅವರ ಭಕ್ತಿಯನ್ನು ವ್ಯಕ್ತಪಡಿಸಲು ಅದನ್ನು ಬಳಸುತ್ತಾರೆ. ಆದರೆ, ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಅದು ಎಲ್ಲ ಸಂದರ್ಭಗಳಲ್ಲೂ ಶುಭಕರವಲ್ಲ.
ಮದುವೆಯಾಗು ಎಂದ Girlfriend ; ಗುಂಡಿ ತೋಡಿ ಹೂತು ಹಾಕಿದ ಪ್ರಿಯಕರ.!
ದೇವರ ಚಿತ್ರವನ್ನು ಫೋನ್‌ನಲ್ಲಿ ಇಡುವುದು ಅಶುಭವೇ?
ಪಾರಂಪರಿಕ ನಂಬಿಕೆಯ ಪ್ರಕಾರ, ದೇವರ ಅಥವಾ ದೇವತೆಗಳ ಫೋಟೋವನ್ನು ಮೊಬೈಲ್‌ನಲ್ಲಿ ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರ ಪ್ರಮುಖ ಕಾರಣ ಎಂದರೆ,
- ನಾವು ಫೋನ್ ಅನ್ನು ಎಲ್ಲೆಡೆ ಬಳಸುತ್ತೇವೆ. ಕೆಲವೊಮ್ಮೆ ಬಾತ್ರೂಮ್, ಬೆಡ್‌ರೂಮ್ ಅಥವಾ ಅಶುದ್ಧ ಸ್ಥಳಗಳಲ್ಲಿ ಕೂಡ.
- ದೇವರ ಚಿತ್ರವನ್ನು ಇಂತಹ ಸ್ಥಳಗಳಲ್ಲಿ ತೋರಿಸುವುದು ಅಗೌರವಕರವಾದ ಕೃತ್ಯ ಎನ್ನಲಾಗಿದೆ.
- ಇದು ನಮ್ಮ ಭಕ್ತಿಯನ್ನು ತೋರಿಸುವ ಬದಲಿಗೆ ಅಪರೋಕ್ಷವಾಗಿ ಪಾಪದ ಕೆಲಸ ಎಂದು ಧಾರ್ಮಿಕರು ನಂಬುತ್ತಾರೆ.
ರಾಜ್ಯದಲ್ಲಿ “Aarogya Kavacha” ಸೇವೆ ಬಲಪಡಿಸಲು 3,691 ಹೊಸ ಹುದ್ದೆಗಳ ಸೃಷ್ಟಿ.!
ಪ್ರತಿಕೂಲ ಪರಿಣಾಮಗಳ ಸಾಧ್ಯತೆ :
ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ ಚಿತ್ರವನ್ನು ಮೊಬೈಲ್‌ನಲ್ಲಿ ಇಡುವುದರಿಂದ ಕೆಲವು ನಕಾರಾತ್ಮಕ ಶಕ್ತಿಗಳು ಆಕರ್ಷಿತರಾಗಬಹುದು ಎಂದು ಹೇಳಲಾಗುತ್ತದೆ.
ಅಶುದ್ಧ ಕೈಗಳಿಂದ ಅಥವಾ ಅಶುದ್ಧ ಸ್ಥಳಗಳಲ್ಲಿ ಫೋನ್ ಬಳಸುವುದರಿಂದ ದೇವರ ಚಿತ್ರಕ್ಕೆ ಅಪಮಾನ ಆಗುತ್ತದೆ ಎನ್ನುವುದು ನಂಬಿಕೆ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಕಲಹ, ಮನಸ್ಸಿನಲ್ಲಿ ಅಶಾಂತಿ ಅಥವಾ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎಂಬ ಧಾರ್ಮಿಕ ಅಭಿಪ್ರಾಯವಿದೆ.
ಯಾವ ರೀತಿಯ ವಾಲ್‌ಪೇಪರ್ (Wallpaper) ಗಳನ್ನು ಇಡಬಾರದು?
- ದೇವರ ಅಥವಾ ದೇವತೆಗಳ ಚಿತ್ರಗಳನ್ನು,
- ಧಾರ್ಮಿಕ ಸ್ಥಳಗಳ ಫೋಟೋಗಳು (ಮಂದಿರ, ಮಸೀದಿ, ಚರ್ಚ್ ಇತ್ಯಾದಿ) ಮತ್ತು
- ಅತ್ಯಂತ ಗಾಢ ಬಣ್ಣದ ಅಥವಾ ಕತ್ತಲಾದ ಹಿನ್ನೆಲೆಯ ವಾಲ್‌ಪೇಪರ್ (Wallpaper).
Dog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!
ಇವುಗಳ ಬದಲು ಪ್ರಕೃತಿ ದೃಶ್ಯಗಳು, ಪಾಸಿಟಿವ್ ಮಂತ್ರಗಳ ಉಲ್ಲೇಖಗಳು ಅಥವಾ ಹಲಸುಬಣ್ಣದ ಹಿನ್ನೆಲೆಗಳು ಮೊಬೈಲ್ ಪರದೆಗೆ ಉತ್ತಮ ಪರಿಣಾಮ ನೀಡುತ್ತವೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ಸಂಪಾದಕೀಯ :
ದೇವರ ಮೇಲಿನ ಭಕ್ತಿ ಮನಸ್ಸಿನೊಳಗಿರಬೇಕು, ಮೊಬೈಲ್ ಪರದೆಯಲ್ಲಲ್ಲ (Wallpaper) ಎಂಬ ನಂಬಿಕೆ ಇದೆ. ಮೊಬೈಲ್‌ನಲ್ಲಿ ದೇವರ ಚಿತ್ರವನ್ನು ಇಡುವ ಬದಲು, ಪ್ರತಿದಿನ ಬೆಳಿಗ್ಗೆ ದೇವರ ಸ್ಮರಣೆ ಮಾಡುವುದೇ ಹೆಚ್ಚು ಶುಭಕರ. ದೇವರ ಚಿತ್ರಗಳನ್ನು ಮನೆಯ ಪೂಜಾಮಂಟಪದಲ್ಲಿ ಅಥವಾ ಧ್ಯಾನಸ್ಥಳದಲ್ಲಿ ಇಡುವುದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.
“ಸ್ನೇಹಿತನ ಜೊತೆ ಇದ್ದ MBA ವಿದ್ಯಾರ್ಥಿನಿಯನ್ನು ಹೊತ್ತೊಯ್ಯ್ದು ದೌರ್ಜನ್ಯ ; ಪೊಲೀಸರಿಂದ ಶೋಧ.!”
ಅಂತಿಮವಾಗಿ ಹೇಳುವುದೇನೆಂದರೆ, ದೇವರ ಚಿತ್ರವನ್ನು ಮೊಬೈಲ್ ವಾಲ್‌ಪೇಪರ್ (Wallpaper) ಆಗಿ ಬಳಸುವುದು ಧಾರ್ಮಿಕ ದೃಷ್ಟಿಯಿಂದ ಅಶುಭವೇ ಹೊರತು ಶುಭವಲ್ಲ. ಅದಕ್ಕಾಗಿಯೇ ಭಕ್ತಿಯನ್ನೂ ಗೌರವವನ್ನೂ ಸರಿಯಾದ ಸ್ಥಳದಲ್ಲಿ ಪ್ರದರ್ಶಿಸುವುದು ಅತ್ಯಂತ ಅಗತ್ಯ.







