ಮಂಗಳವಾರ, ನವೆಂಬರ್ 18, 2025

Janaspandhan News

HomeGeneral NewsDog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!
spot_img
spot_img
spot_img

Dog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!

- Advertisement -

ಜನಸ್ಪಂದನ ನ್ಯೂಸ್‌, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಮನಸ್ಸು ವಿಚಲಿತವಾಗುವಂತಹ ಘಟನೆ ನಡೆದಿದೆ. ಮಾಲೀಕ ಸಾವನ್ನಪ್ಪಿದ ದುಃಖವನ್ನು ಸಹಿಸಲಾರದೆ, ಆತನ ಪ್ರಿಯ ನಾಯಿ (Dog) ಕೂಡ ಅಲ್ಪಾವಧಿಯಲ್ಲೇ ಪ್ರಾಣ ಬಿಟ್ಟಿದೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಹಾಗೂ ವಿಷಾದ ಮೂಡಿಸಿದೆ.

ಮೃತ ಲಾರೆನ್ಸ್ (61) ಭದ್ರಾವತಿಯ ಹುತಾಕಾಲನಿ ಪ್ರದೇಶದ ಜಿಂಕ್ ಲೈನ್‌ನ ನಿವಾಸಿಯಾಗಿದ್ದರು. ವೃತ್ತಿಯಿಂದ ಪೇಂಟರ್ ಆಗಿದ್ದ ಅವರು ಕೆಲ ಕಾಲದಿಂದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು.

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“

ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಮನೆಗೆ ತರಲಾಗಿತ್ತು. ಆ ಸಮಯದಲ್ಲಿ ಲಾರೆನ್ಸ್ ಅವರ ಪ್ರಿಯ ಶ್ವಾನ (Dog) ಮನೆಯೊಳಗೆ ಬಂದು ಮಾಲೀಕನ ಶವದ ಪಕ್ಕದಲ್ಲೇ ಕುಳಿತುಕೊಂಡಿತ್ತು. ನಾಯಿ (Dog) ಮಾಲೀಕನ ಮರಣವನ್ನು ಮನಗಂಡಂತೆ ಕಳವಳಗೊಂಡು ದುಃಖಭರಿತವಾಗಿ ಅಲೆಯುತ್ತಿದ್ದಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ನಂತರ ಕೆಲವೇ ಗಂಟೆಗಳ ಬಳಿಕ ಶ್ವಾನವೂ ಪ್ರಾಣ ಬಿಟ್ಟಿದ್ದು, ಈ ಘಟನೆ ಎಲ್ಲರ ಮನಸ್ಸನ್ನೂ ಕಲಕುವಂತಾಗಿದೆ. ಗುರುವಾರ ಲಾರೆನ್ಸ್ ಅವರ ಅಂತ್ಯಕ್ರಿಯೆ ನೆರವೇರಿಸಿದ ವೇಳೆ, ಅವರೊಟ್ಟಿಗೆ ಮೃತಪಟ್ಟ ನಾಯಿ (Dog) ಶವವನ್ನೂ ಮನೆಯ ಹಿಂಭಾಗದಲ್ಲೇ ಹೂಳಲಾಗಿದೆ.

Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”

ಸ್ಥಳೀಯರು ಈ ಘಟನೆಯನ್ನು ಕೇಳಿ ಕಣ್ಣೀರಿಟ್ಟಿದ್ದು, “ಇದು ಮಾನವ ಮತ್ತು ಪ್ರಾಣಿ (Dog) ಯ ನಡುವಿನ ನಿಸ್ವಾರ್ಥ ಪ್ರೀತಿಯ ನಿದರ್ಶನ” ಎಂದು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

Courtesy : Kannada News Now



Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”

Accident

ಜನಸ್ಪಂದನ ನ್ಯೂಸ್‌, ರಂಗಾರೆಡ್ಡಿ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಸಮೀಪದ ಮಿರ್ಜಗುಡ ಪ್ರದೇಶದಲ್ಲಿ ಸೋಮವಾರ (ನ.03) ನಡೆದ ಭೀಕರ ರಸ್ತೆ ಅಪಘಾತ (Accident) ದಲ್ಲಿ ಕನಿಷ್ಠ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಮೂಲಗಳ ಪ್ರಕಾರ, ತಂದೂರ್ ಡಿಪೋಗೆ ಸೇರಿದ ಸರ್ಕಾರಿ ಬಸ್ ಒಂದು ಚೆವೆಲ್ಲಾ ಕಡೆಗೆ ತೆರಳುತ್ತಿದ್ದ ವೇಳೆ ಜಲ್ಲಿ ಕಲ್ಲು ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬಂದು ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ (Accident) ಸಂಭವಿಸಿದೆ.

Kannada ರಾಜ್ಯೋತ್ಸವ ಸಂಭ್ರಮದ ನಡುವೆ ಮಂಗನ ಚೆಲ್ಲಾಟ ; ನೆರೆದಿದ್ದ ಜನರಿಗೆ ಪ್ರಾಣಭೀತಿ ; ವಿಡಿಯೋ ವೈರಲ್.!

ಅಪಘಾತ (Accident) ದ ತೀವ್ರತೆಯಿಂದ ಬಸ್‌ನ ಮುಂಭಾಗ ಸಂಪೂರ್ಣ ನಾಶವಾಗಿದ್ದು, ಪ್ರಯಾಣಿಕರಲ್ಲಿ 1 ವರ್ಷದ ಮಗು ಸೇರಿದಂತೆ 11 ಮಹಿಳೆಯರು ಮತ್ತು 9 ಪುರುಷರು ಮೃತಪಟ್ಟಿದ್ದಾರೆ. ಸುಮಾರು 24 ಮಂದಿ ಗಾಯಗೊಂಡಿದ್ದು, ಇವರಲ್ಲಿ ಐದು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಅಪಘಾತಕ್ಕೀಡಾದ (Accident) ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಹಲವರು ಟ್ರಕ್‌ನ ಜಲ್ಲಿಕಲ್ಲು ಬಸ್ ಒಳಗೆ ಬಿದ್ದ ಪರಿಣಾಮ ಅದರಡಿಗೆ ಸಿಲುಕಿಕೊಂಡಿದ್ದರು.

Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!

ಸ್ಥಳೀಯರು ಕೂಡ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಟ್ರಕ್ ಚಾಲಕ ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ ಮತ್ತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ತಪ್ಪು ದಿಕ್ಕಿನಿಂದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂಬ ಮಾಹಿತಿ ದೊರಕಿದೆ. ಡಿಕ್ಕಿಯ ತೀವ್ರತೆಯಿಂದ ಟ್ರಕ್ ಪಲ್ಟಿಯಾಗಿದ್ದು, ಅದರಲ್ಲಿದ್ದ ಜಲ್ಲಿಕಲ್ಲು ಬಸ್‌ನೊಳಗೆ ಬಿದ್ದಿದೆ.

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“

ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಕೆಲವರು ವಿದ್ಯಾರ್ಥಿಗಳಾಗಿದ್ದು, ವಾರಾಂತ್ಯದ ಬಳಿಕ ಕಾಲೇಜುಗಳಿಗೆ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಂತರ ಹೈದರಾಬಾದ್–ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟಣೆ ಉಂಟಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತ (Accident) ದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಸ್ಥಳೀಯರು ಇಂತಹ ದುರ್ಘಟನೆಗಳನ್ನು ತಡೆಗಟ್ಟಲು ಭಾರಿ ವಾಹನಗಳ ನಿಯಂತ್ರಣ ಹಾಗೂ ವೇಗ ನಿಯಮಗಳ ಕಟ್ಟುನಿಟ್ಟಾದ ಜಾರಿಗೆ ಒತ್ತಾಯಿಸಿದ್ದಾರೆ.

ವಿಡಿಯೋ :
- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments