Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಹೆಚ್ಚು ನೀರು ಕುಡಿದರೆ ಈ ಸಮಸ್ಯೆಗಳು ನಿಶ್ಚಿತ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನೀರು ಪ್ರತಿ ಮಾನವನಿಗೂ ಬೇಕೆ ಬೇಕಾದಂತ ಅಮೂಲ್ಯ ವಸ್ತು. ವೈದ್ಯರು ದಿನಕ್ಕೆ 8 ರಿಂದ 12 ಗ್ಲಾಸ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ.

ಆದರೆ ಅದಕ್ಕಿಂತ ಹೆಚ್ಚು ನೀರು ಕುಡಿದರೆ ಕಿಡ್ನಿಯಲ್ಲಿ ಹೈಪರ್ ಫಿಲ್ಟ್ರೇಶನ್ ಆಗುವ ಸಾಧ್ಯತೆ ಇರುತ್ತದೆ. ಇದಲ್ಲದೆ, ಈ ಹೈಪರ್ಫಿಲ್ಟರೇಶನ್ ಮುಂದುವರಿದರೆ ಮೂತ್ರಪಿಂಡಗಳಿಗೆ ತೀವ್ರ ಹಾನಿಯನ್ನುಂಟು ಮಾಡುತ್ತದೆ.

ಇದನ್ನು ಓದಿ : ನಡು ಬೀದಿಯಲ್ಲೇ ಪುಟ್ಟ ಬಾಲಕನ ಮೇಲೆ ಮಂಗಗಳ ದಾಳಿ : ಸಹಾಯಕ್ಕೆ ಬಾರದ ಮಹಿಳೆಯರ ನಡೆಗೆ ನೆಟ್ಟಿಗರ ಆಕ್ರೋಶ ; Video ವೈರಲ್.!

ನೀರು ಹೆಚ್ಚು ಕುಡಿದಾಗ ಮೂತ್ರಪಿಂಡಗಳು ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಇದು ದೇಹದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ವಾಕರಿಕೆ, ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ.

ಹಾಗಾದರೆ ಬನ್ನಿ ಹೆಚ್ಚು ನೀರು ಕುಡಿದರೆ ಏನು ಸಮಸ್ಯೆಗಳಾಗುತ್ತವೆ ಅಂತ ತಿಳಿಯೋಣ.

* ದೇಹವು ತನಗೆ ಬೇಕಾದ ದ್ರವ ಪದಾರ್ಥಗಳನ್ನು ಹೀರಿಕೊಳ್ಳುವಲ್ಲಿ ವಿಫಲವಾಗುತ್ತದೆ.

* ನೀರು ಅತಿಯಾಗಿ ಸೇವಿಸಿದರೆ ದೇಹದಲ್ಲಿ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಈ ರೀತಿಯ ಅಧಿಕ ರಕ್ತವು ಹೃದಯ ಹಾಗೂ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಿಸುವುದಲ್ಲದೇ, ರಕ್ತ ಪರಿಚಲನೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಇದನ್ನು ಓದಿ : Health : ನಿಂಬೆಹಣ್ಣಿನೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ತಿನ್ನಲೇಬಾರದು.?

* ಮೂತ್ರವಿಸರ್ಜನೆ ಅತಿಯಾದರೆ ಒಳ್ಳೆಯದೇ ಅಲ್ಲವೇ ಎಂದು ಕೇಳಬಹುದು. ಮೂತ್ರವಿಸರ್ಜನೆ ಹೆಚ್ಚಾದರೆ ದೇಹದ ಕಲ್ಮಶ ಹೊರ ಹೋಗಿ ಆರೋಗ್ಯವಾಗಿರುತ್ತೇವೆ ನಿಜ. ಆದರೆ, ಇದು ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ.

* ಅತಿಯಾದ ನೀರು ಸೇವನೆಯಿಂದ ರಕ್ತದಲ್ಲಿ ಸೋಡಿಯಂ ಕೊರತೆ ಉಂಟಾಗಿ ಜೀವಕೋಶಗಳ ಊತಕ್ಕೆ ಕಾರಣವಾಗುತ್ತದೆ.

* ನಿಯಮಿತಕ್ಕಿಂತ ಹೆಚ್ಚು ನೀರು ಸೇವನೆಯಿಂದ ಮಿದುಳಿನ ಸಮಸ್ಯೆಗೆ ಉಂಟಾಗಬಹುದು. ಮೆದುಳಿನ ಜೀವಕೋಶಗಳ ಒಳಗೆ ನೀರು ಹೆಚ್ಚಿನ ರೀತಿಯಲ್ಲಿ ಸರಬರಾಜಾದರೆ ಮಿದುಳಿನ ಜೀವಕೋಶಗಳಲ್ಲಿ ಊತ ಉಂಟಾಗುತ್ತದೆ.

* ಅತಿಯಾದ ನೀರು ಸೇವನೆಯಿಂದ ಉಸಿರಾಟದ ಸಮಸ್ಯೆ ಉಂಟಾಗಬಹುದು.

* ಹೈಪೋನೇಟ್ರೇಮಿಯಾ ಎಂಬ ರೋಗ ಬರಬಹುದು. ಇಂತಹ ರೋಗ ಉಂಟಾದವರಿಗೆ ವಾಕರಿಕೆ, ತಲೆಸುತ್ತಿಬೀಳುವುದು, ಮೂತ್ರವಿಸರ್ಜನೆ ಹೆಚ್ಚಾಗುವಂತಹ ಸಮಸ್ಯೆಗಳು ಉಂಟಾಗುತ್ತದೆ.

ಇದನ್ನು ಓದಿ : Health : ನೀವೂ ಚಹಾ ಪ್ರಿಯರೇ .? ಹಾಗಾದ್ರೆ ಈ ಸುದ್ದಿ ಓದಿ.

* ಕೆಲವೊಮ್ಮೆ ಮನುಷ್ಯ ಕೋಮಾ ಹಂತಕ್ಕೆ ಕೂಡಾ ತಲುಪಲು ಕಾರಣವಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img