Wednesday, November 6, 2024

Health : ನೀವೂ ಚಹಾ ಪ್ರಿಯರೇ .? ಹಾಗಾದ್ರೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಪಂಚದಾದ್ಯಂತ ಪ್ರತಿಯೊಬ್ಬರೂ ಚಹಾ ಸೇವಿಸಲು ಇಷ್ಟಪಡುತ್ತಾರೆ. ಪ್ರತಿದಿನ ಬೆಳಗ್ಗೆ ಒಂದು ಕಪ್ ಚಹಾ (Tea) ಸೇವಿಸಿಯೇ ಬಹುತೇಕ ಜನರು ತಮ್ಮ ದಿನವನ್ನು ಸ್ಟಾರ್ಟ್ ಮಾಡ್ತಾರೆ.

ಆದರೆ ಚಹಾವನ್ನು ತಪ್ಪಾದ ರೀತಿಯಲ್ಲಿ ಸೇವಿಸಲಾಗುತ್ತದೆ ಕೆಲವೊಮ್ಮೆ ಹೆಚ್ಚು ಚಹಾ ಕುಡಿಯುವುದು, ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿಯೇ (empty stomach) ಚಹಾವನ್ನು ಕುಡಿಯುವುದು. ಕೆಲವರು ಆಹಾರವನ್ನು ಸೇವಿಸಿದ ನಂತರ ರಾತ್ರಿ ವೇಳೆ ಚಹಾವನ್ನು ಕುಡಿಯುತ್ತಾರೆ.

ಇದನ್ನು ಓದಿ : 3 ಅಡಿ ಕುಳ್ಳನಿಗೆ 7 ಅಡಿ ಎತ್ತರದ ಗರ್ಲ್‌ಫ್ರೆಂಡ್.! ಇವರ ಪ್ರಣಯದ ವಿಡಿಯೋ ಪುಲ್‌ Viral.!

ಈ ಚಹಾವು ಅನೇಕ ಸಣ್ಣ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ತಪ್ಪಾದ ರೀತಿಯಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಅಪಾಯಕಾರಿ.

ಇನ್ನೂ ದಿನಕ್ಕೆ 3 ರಿಂದ 4 ಕಪ್ ಚಹಾವನ್ನು ಸೇವಿಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಡಯೆಟಿಷಿಯನ್ ಹೇಳುತ್ತಾರೆ. ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ಪ್ರಕಟಿಸಿರುವ ವರದಿಯ ಪ್ರಕಾರ, ದಿನಕ್ಕೆ 4 ಕಪ್ ಚಹಾ ಕುಡಿಯುವುದರಿಂದ ದೇಹಕ್ಕೆ ಹಲವಾರು ತೊಂದರೆಗಳು ಉಂಟಾಗುತ್ತವೆ.

ಚಹಾದಲ್ಲಿರುವ ಕೆಫೀನ್ ನಿದ್ರಾಹೀನತೆ, ತಲೆತಿರುಗುವಿಕೆ, ಎದೆಯುರಿ ಮತ್ತು ನರಗಳ ಸೆಳೆತದಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಅತಿಯಾಗಿ ಟೀ ಕುಡಿಯಬೇಡಿ ಎಂದು ಸೂಚಿಸಲಾಗುತ್ತದೆ.

ಅಲ್ಲದೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಈ ಕೆಳಗಿನ ಸಮಸ್ಯೆಗಳು ಉಂಟಾಗಬಹುದು.

ಇದನ್ನು ಓದಿ : ಹಳೆಯ ಹಾಡಿಗೆ 90 ವರ್ಷದ ಅಜ್ಜಿಯ ಮಸ್ತ್‌ ಮಸ್ತ್ ಸ್ಟೆಪ್ಸ್ ; ವಿಡಿಯೋ ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ.!

ಅಜೀರ್ಣತೆ ಉಂಟಾಗಬಹುದು

ನಿರ್ಜಲೀಕರಣ ಉಂಟಾಗುತ್ತದೆ.

ಯಕೃತ್ತಿನ (liver) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡುವುದು

ಮಾನಸಿಕ ಆತಂಕ (Mental anxiety) ಹೆಚ್ಚಾಗುತ್ತದೆ

ದೇಹದಲ್ಲಿ ಪಿಎಚ್ ಮಟ್ಟ ಸಮತೋಲನ ತಪ್ಪುತ್ತದೆ

ಹಾಲಿನ ಟೀ ಮತ್ತು ಡಿಕಾಕ್ಷನ್ ಹಸಿವನ್ನು (hungry) ಕಡಿಮೆ ಮಾಡುತ್ತದೆ.

ನಿಮ್ಮ ದೇಹದಲ್ಲಿ ಊತ ಮತ್ತು ಉಬ್ಬುವಿಕೆಯ ಸಮಸ್ಯೆ ಹೆಚ್ಚಾಗುತ್ತದೆ.

ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗಬಹುದು.

ನಿದ್ರಾಹೀನತೆ ಉಂಟಾಗುತ್ತದೆ.

ಇದನ್ನು ಓದಿ : ಸಂಪೂರ್ಣವಾಗಿ ಹಾವನ್ನೇ ನುಂಗಿ ಹೊರಹಾಕಿದ ನಾಗರಹಾವು ; ಮೈ ಜುಮ್ಮೆನಿಸುವ ವಿಡಿಯೋ Viral.!

ಹಲ್ಲುಗಳ ಮೇಲ್ಪದರ (surface of the teeth) ಹಾಳಾಗುತ್ತದೆ. ವಸಡುಗಳ ಸಮಸ್ಯೆ ಕಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img