ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಂತ ಹೇಳ್ಕೊಂಡು ವ್ಯಕ್ತಿಯೋರ್ವ ಮದುವೆ ಆಗುವುದಾಗಿ ಮಹಿಳೆಗೆ ವಂಚಿಸಿ, ಲವ್, ಸೆಕ್ಸ್, ದೋಖಾ ಮಾಡಿರುವ ಘಟನೆ ನಡೆದಿದೆ.
ಇದನ್ನು ಓದಿ : ಸಂಪೂರ್ಣವಾಗಿ ಹಾವನ್ನೇ ನುಂಗಿ ಹೊರಹಾಕಿದ ನಾಗರಹಾವು ; ಮೈ ಜುಮ್ಮೆನಿಸುವ ವಿಡಿಯೋ Viral.!
ಚಿಕ್ಕಬಾಣಾವಾರದ ವಿಶ್ವನಾಥ ಅಲಿಯಾಸ್ ವಿಷ್ಣುಗೌಡ ಎಂಬಾತ 40 ವರ್ಷದ ಮಹಿಳೆಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ಬಳಿ 41 ಲಕ್ಷ ರೂ. ಹಣ ಮತ್ತು 5 ಲಕ್ಷ ರೂ. ಮೌಲ್ಯದ ಎಲ್‌ಐಸಿ ಬಾಂಡ್‌ನ್ನು ಕಿತ್ತುಕೊಂಡಿದ್ದಾನೆ ಎನ್ನಲಾಗಿದೆ.
ಮಹಿಳೆ 11 ವರ್ಷದ ಹಿಂದೆಯೇ ಗಂಡನಿಂದ ವಿಚ್ಛೇದನ ಪಡೆದಿದ್ದು, ಆಬಳಿಕ ಇಬ್ಬರಿಗೂ ಪರಿಚಯವಾಗಿದೆ.
ಇದನ್ನು ಓದಿ : “ಗಂಡ ಬೇಡಾ, ಪ್ರಿಯಕರ ಬೇಕು” ಎಂದ ಖುಷಿಯಿಂದ ಹನಿಮೂನ್’ಗೆ ಹೋಗಿ ಬಂದ ನವವಿವಾಹಿತೆ.!
ಇನ್ನೂ ವಿಶ್ವನಾಥ ಅಲಿಯಾಸ್ ವಿಷ್ಣುಗೌಡ ಪೊಲೀಸ್ ಡ್ರೆಸ್ನಲ್ಲಿ ಇರುವ ಫೋಟೋ ಹಾಗೂ ಗನ್ ಇರುವುದನ್ನು ನೋಡಿರುವ ಮಹಿಳೆಗೆ, ಈತ ಪೊಲೀಸ್ ಹುದ್ದೆಯಲ್ಲಿದ್ದಾನೆ ಎಂದು ನಂಬಿದ್ದಾರೆ. ಆದರೆ ಆತ ನಕಲಿ ಪೊಲೀಸ್ ಎಂಬುದು ನಂತರ ಗೊತ್ತಾಗಿದೆ.
ಆರೋಪಿ ಬಲವಂತವಾಗಿ ಚೆಕ್ ಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ. ಮನೆಗೆ ನುಗ್ಗಿ ಮಹಿಳೆಯ ತಂದೆ- ತಾಯಿ ಮೇಲೆ ಹಲ್ಲೆ ನಡೆಸಿದ್ದು, ಮಹಿಳೆಯ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : ಈ ಸುಂದರ ಯುವತಿ ಮಾಡೆಲ್ ಅಂತ ತಿಳಿದಿದ್ದರೆ ನಿಮ್ಮ ಊಹೆ ತಪ್ಪು ; ಹಾಗಾದ್ರೆ ಯಾರಿವಳು.? ಈ video ನೋಡಿ.!
ಈತ ಮಹಿಳೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದು, ಇಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಸದ್ಯ ಘಟನೆಯ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.