Wednesday, May 22, 2024
spot_img
spot_img
spot_img
spot_img
spot_img
spot_img

ಮೂವರನ್ನು ಬೆತ್ತಲಾಗಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಕಿರಾತಕರು ; ಕಾರಣ.?

spot_img

ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಹಣಕ್ಕಾಗಿ‌ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರಿ ಮತ್ತು ಆತನ ಸ್ನೇಹಿತರಿಬ್ಬರನ್ನು ಅಪಹರಿಸಿ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿ ಅರ್ಜುನ್‌ ಮಡಿವಾಳ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ವಿಮಾನದಿಂದ ಪ್ಯಾರಾಚೂಟ್​ ಧರಿಸದೆ 12 ಸಾವಿರ ಅಡಿಗಳಿಂದ ಜಿಗಿದ ಯುವಕ ; ಮುಂದೆನಾಯ್ತು Video ನೋಡಿ.!

ರೂಮಿನಲ್ಲಿ ಅರ್ಜುನ್‌ ಸೇರಿದಂತೆ ಮೂವರನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಟಾರ್ಚರ್ ನೀಡಿ, ಹಣವನ್ನು ಲಪಟಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅರ್ಜುನ್‌ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಮೇ 5ರಂದು ಪರಿಚಯಸ್ಥನಾಗಿದ್ದ ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರು ತೋರಿಸಲು ಅರ್ಜುನ್‌ ತನ್ನಿಬ್ಬರು ಸ್ನೇಹಿತರಾದ ಎಂ.ಡಿ ಸಮೀರೊದ್ದಿನ್, ಅಬ್ದುಲ್ ರಹೇಮಾನ್ ಜತೆಗೆ ಹೋಗಿದ್ದರು.

ಈ ವೇಳೆ ಆರೋಪಿ ರಮೇಶ್‌ ಕಾರಿನ ಟೆಸ್ಟ್‌ ಡ್ರೈವ್‌ ಮಾಡಿ, ಕಾರಿಗೆ ಹಣ ನೀಡುವವರು ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿ ಇದ್ದಾರೆ. ಅಲ್ಲಿಗೆ ಹೋಗೋಣಾ ಎಂದು ಮೂವರನ್ನು ಕರೆದುಹೋಗಿದ್ದಾರೆ.

ನಂತರ ಯಾವುದೋ ಮನೆ ಬಳಿ ಕಾರು ನಿಲ್ಲಿಸಿ ಸುಮಾರು ಹತ್ತಾರು ಮಂದಿ ಅರ್ಜುನ್‌ ಹಾಗೂ ಮತ್ತಿಬ್ಬರನ್ನು ಬಲವಂತದಿಂದ ಎಳೆದುಕೊಂಡು ಹೋಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ರಮೇಶ್‌ ಸೇರಿ ಇಮ್ರಾನ್ ಪಟೇಲ್, ಮಹಮ್ಮದ್ ಮತೀನ್ ಸೇರಿ ಹಲವರು ಹಲ್ಲೆ ನಡೆಸಿದ್ದಾರೆ.

ಅಲ್ಲದೇ ಮೂವರನ್ನು ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ನಡೆಸಿದ್ದಾರೆ. ಬಳಿಕ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಇದನ್ನು ಓದಿ : Video : ಮಹಿಳೆಯ ಕುತ್ತಿಗೆಗೆ ಬೆಲ್ಟ್​​​ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ ದುಷ್ಕರ್ಮಿಯಿಂದ ಅತ್ಯಾಚಾರ.!

ಹಲ್ಲೆ ಮಾಡಿ ಹಣ ಹಾಕಿಸಿಕೊಂಡು, ಬಳಿಕ ಪ್ರತಿ ಬಾರಿ ಕಾರು ಮಾರಾಟ ಮಾಡಿದಾಗ ಕಮಿಷನ್‌ ರೂಪದಲ್ಲಿ ಒಂದು ಲಕ್ಷ ರೂ. ಹಣ ಕೊಡಬೇಕು ಎಂದಿದ್ದಾರೆ. ಕೊಡದೆ ಹೋದರೆ ಮನೆಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಇಮ್ರಾನ್ ಪಟೇಲ್, ಮೊಹಮ್ಮದ್ ಮತೀನ್ ಸೇರಿ ಹಲವರು ಕೃತ್ಯ ಎಸಗಿದ್ದರು. ಇದೀಗ ಪೊಲೀಸರು ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.

ಸದ್ಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

spot_img
spot_img
spot_img
- Advertisment -spot_img