Monday, May 20, 2024
spot_img
spot_img
spot_img
spot_img
spot_img
spot_img

Belagavi : ಭೀಕರ ರಸ್ತೆ ಅಪಘಾತ ; ಮೂವರು ಮಹಿಳೆಯರ ಸಾ**ವು.!

spot_img

ಜನಸ್ಪಂದನ ನ್ಯೂಸ್, ಅಥಣಿ : ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಬಳ್ಳಿಗೇರಿ ಗ್ರಾಮದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.

ಮೃತ ದುರ್ದೈವಿಗಳು ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಎಂದು ತಿಳಿದು ಬಂದಿದೆ.

ಇದನ್ನು ಓದಿ : ವಿಮಾನದಿಂದ ಪ್ಯಾರಾಚೂಟ್​ ಧರಿಸದೆ 12 ಸಾವಿರ ಅಡಿಗಳಿಂದ ಜಿಗಿದ ಯುವಕ ; ಮುಂದೆನಾಯ್ತು Video ನೋಡಿ.!

ಬಳ್ಳಿಗೇರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಕ್ರೂಸರ್ ವಾಹನದ ಎಡಬದಿಯ ಟೈರ್ ಸ್ಫೋಟಗೊಂಡು (tire blast) ಈ ಅಪಘಾತ ಸಂಭವಿಸಿದೆ.

ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್‌ ವಾಹನ ಪಲ್ಟಿಯಾಗಿದೆ. ಕ್ರೂಸರ್ ಪಲ್ಟಿಯಾದ ಪರಿಣಾಮ ಮೂವರು ಮಹಿಳೆಯರು ಗಂಭೀರ ಗಾಯಗೊಂಡು (serious injuries) ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ರೆಸ್ಟೋರೆಂಟ್‌ನಲ್ಲಿ ಬ್ಯೂಟಿ ಕ್ವೀನ್ ಗುಂಡಿಕ್ಕಿ ಬರ್ಬರ ಹತ್ಯೆ ; CCTV ಯಲ್ಲಿ ಭಯಾನಕ ದೃಶ್ಯ ಸೆರೆ.!

ಇನ್ನೂ ಅಲ್ಲಿನ ಸಾರ್ವಜನಿಕರು ಸಹಾಯಕ್ಕೆ ಧಾವಿಸಿ ಚೆಲ್ಲಾಪಿಲ್ಲಿಯಾಗಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಳ್ಳಿಗೇರಿ ಗ್ರಾಮದಲ್ಲಿ ಮೃತ ಮಹಿಳೆಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ

spot_img
spot_img
spot_img
- Advertisment -spot_img