Thursday, September 19, 2024
spot_img
spot_img
spot_img
spot_img
spot_img
spot_img
spot_img

Rape ಸಂತ್ರಸ್ತೆಗೆ ಪರೀಕ್ಷೆ ಬರೆಯಲು ಬಿಡದೆ ಅಮಾನವೀಯತೆ ತೋರಿದ ಅಧಿಕಾರಿಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಂಗಳೂರು : ಅತ್ಯಾಚಾರ ಸಂತ್ರಸ್ತೆಗೆ ಅಧಿಕಾರಿಗಳು ಬೋರ್ಡ್​ ಪರೀಕ್ಷೆಗೆ ಹಾಜರಾಗಲು ಬಿಡದೆ ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಕಳೆದ ವರ್ಷ ರಾಜಸ್ಥಾನದಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು, ಅದೇ ಕಾರಣವನ್ನು ಮುಂದಿಟ್ಟುಕೊಂಡು ಬೋರ್ಡ್​ ಪರೀಕ್ಷೆಗೆ ಹಾಜರಾಗಲು ಅತ್ಯಾಚಾರ ಸಂತ್ರಸ್ತೆಗೆ  ಅಧಿಕಾರಿಗಳು ಬಿಟ್ಟಿಲ್ಲ ಅಂತ ವರದಿಯಾಗಿದೆ. ಅತ್ಯಾಚಾರ ಸಂತ್ರಸ್ತೆಗೆ ಧೈರ್ಯ ತುಂಬಬೇಕಾದ ಅಧಿಕಾರಿಗಳೆ ಹೀಗೆ ವರ್ತಿಸಿದರೆ ಹೇಗೆ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ.

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ASI.!

ವಿದ್ಯಾರ್ಥಿನಿ ದೂರಿನ ಪ್ರಕಾರ, “ನೀನು ಪರೀಕ್ಷೆಗೆ ಹಾಜರಾದರೆ ಇಲ್ಲಿನ ವಾತಾವರಣ ಹಾಳಾಗುವುದು” ಎಂದು ಶಾಲಾ ಅಧಿಕಾರಿಗಳು ಆಕೆಗೆ ಹೇಳಿ ಅಲ್ಲಿಂದ ಕಳುಹಿಸಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಆದರೆ ವಿದ್ಯಾರ್ಥಿನಿ ಕಳೆದ 4 ತಿಂಗಳಿನಿಂದ ಅಜ್ಮೀರ್‌ನ ಖಾಸಗಿ ಶಾಲೆಯ ತರಗತಿಗಳಿಗೆ ಹಾಜರಾಗದ ಕಾರಣ ಅವರು ಪ್ರವೇಶ ಪತ್ರವನ್ನು ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಜ್ಮೀರ್‌ನ ಮಕ್ಕಳ ಕಲ್ಯಾಣ ಆಯೋಗ (ಸಿಡಬ್ಲ್ಯೂಸಿ) ಪ್ರಕರಣ ದಾಖಲಿಸಿದ್ದು, ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಅಂಜಲಿ ಶರ್ಮಾ ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿದ್ಯಾರ್ಥಿನಿಯನ್ನು ಮೂವರು ಪುರುಷರು ಸೇರಿ ಅತ್ಯಾಚಾರ ಮಾಡಿದ್ದರು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಗೆ ಮನೆಯಿಂದಲೇ ಓದುವಂತೆ  ಶಾಲೆಯವರು ಸೂಚಿಸಿದ್ದರು ಎಂದು ತಿಳಿದು ಬಂದಿದ್ದು, ಅದರಂತೆ ಆಕೆ ಒಪ್ಪಿಕೊಂಡು ಮನೆಯಿಂದಲೇ ಬೋರ್ಡ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬೋರ್ಡ್​ ಪರೀಕ್ಷೆಗೆ ವಿದ್ಯಾರ್ಥಿನಿ ಪ್ರವೇಶ ಪತ್ರವನ್ನು ತೆಗೆದುಕೊಳ್ಳಲು ಹೋದಾಗ, ನೀನು ಇನ್ನು ಮುಂದೆ ನಮ್ಮ ಶಾಲೆಯ ವಿದ್ಯಾರ್ಥಿಯಲ್ಲ ಎಂದು ಹೇಳಲಾಗಿತಂತೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವಾದ ನಂತರ ಇತರ ವಿದ್ಯಾರ್ಥಿಗಳ ಪೋಷಕರು ಆಕೆಯ ಉಪಸ್ಥಿತಿಯನ್ನು ವಿರೋಧಿಸಿದ್ದರಿಂದ ಶಾಲೆಯು ತನ್ನನ್ನು ಪ್ರವೇಶಿಸದಂತೆ ನಿರ್ಬಂಧಿಸಿದೆ ಎಂದು ವಿದ್ಯಾರ್ಥಿನಿಗೆ ತಿಳಿದಿದೆ.

ಸಿಡಬ್ಲ್ಯೂಸಿ ಅಧ್ಯಕ್ಷೆ ಅಂಜಲಿ ಶರ್ಮಾ ಹೇಳಿಕೆಯಂತೆ,  ವಿದ್ಯಾರ್ಥಿನಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 79% ಗಳಿಸಿದ್ದು, ಈಗ ಸ್ವಲ್ಪ ಖಿನ್ನತೆಗೆ ಒಳಗಾಗಿದ್ದಾಳೆ. ಶಾಲೆಯ ನಿರ್ಲಕ್ಷ್ಯದಿಂದಾಗಿ ಆಕೆಯ ಒಂದು ವರ್ಷ ನಷ್ಟವಾಯಿತು ಎಂದು ಅಂಜಲಿ ಶರ್ಮಾ ಹೇಳಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img