ಜನಸ್ಪಂದನ ನ್ಯೂಸ್, ಕೊಪ್ಪಳ : ಕೊಪ್ಪಳ ನಗರದ ಸಿಇಎನ್ ಠಾಣೆ ಹೆಡ್ ಕಾನ್ಸ್‌ಟೇಬಲ್ ವಿರುದ್ಧ ಮೊಬೈಲ್ ನಂಬರ್ಗಳ ಸಿಡಿಆರ್, ಟವರ್ ಲೋಕೇಶನ್ ಗೌಪ್ಯ ಮಾಹಿತಿ ಸೋರಿಕೆಯಾದ ಆರೋಪ ಕೇಳಿ ಬಂದಿದೆ.
ನಗರದ ಸಿಇಎನ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಕೊಟೇಪ್ಪ ವಿರುದ್ಧ ಸಿಇಎನ್ ಠಾಣೆಯ ಎಎಸ್‌ಐ ಕೇಸ್ ದಾಖಲಿಸಿದ್ದಾರೆ. 20 ದಿನಗಳಿಂದ ಹೆಡ್ ಕಾನ್ಸ್‌ಟೇಬಲ್ ಕೊಟೇಪ್ಪ ಎಸ್ಕೇಪ್ ಆಗಿದ್ದಾರೆ.
ಇದನ್ನು ಓದಿ : Hit And Run; ಮೂವರು ಯುವಕರು ಸ್ಥಳದಲ್ಲೇ ಸಾವು.!
ಮೇಲಧಿಕಾರಿಗಳ ಅನುಮತಿ ಇಲ್ಲದೇ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಈ ಹೆಡ್ ಕಾನ್ಸ್‌ಟೇಬಲ್ ಯಾರಾದರೂ ಹಣ ಕೊಟ್ಟರೇ ಸಿಡಿಆರ್, ಟವರ್ ಲೋಕೇಶನ್ ಮಾಹಿತಿ ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ.
145 ಮೊಬೈಲ್ ಸಿಡಿಆರ್, 9 ಟವರ್ ಡಂಪ್ ಮಾಹಿತಿ ಸೋರಿಕೆ ಆಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಮಹಿಳೆಯ ಜೊತೆ ಬಿಜೆಪಿ ಮುಖಂಡ ಇರುವ ಖಾಸಗಿ ಕ್ಷಣಗಳ ವಿಡಿಯೋ Viral.!
ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಹೆಡ್ ಕಾನ್ಸ್‌ಟೇಬಲ್ ಪರಾರಿಯಾಗಿದ್ದು, ಕೊಟೇಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ