ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋವನ್ನು ಬಿಜೆಪಿ ಮುಖಂಡ ವಾಟ್ಸಪ್ ಗ್ರೂಪ್‌ಗೆ ಶೇರ್ ಮಾಡಿದ ಘಟನೆ ರಾಜಸ್ಥಾನ ಉದಯಪುರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಉದಯಪುರ ಜಿಲ್ಲೆಯ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ನತ್ತೇಖಾನ್ ಪಠಾಣೆ ಎಂಬುವವರೇ ಈ ರೀತಿ ಮುಜುಗರಕ್ಕೀಡಾಗುವ ಕೆಲಸ ಮಾಡಿಕೊಂಡಿದ್ದು, ಬಿಜೆಪಿ ನೀಡಿದ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಇದನ್ನು ಓದಿ : Hit And Run; ಮೂವರು ಯುವಕರು ಸ್ಥಳದಲ್ಲೇ ಸಾವು.!
ಮಹಿಳೆಯೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದ ನತ್ತೇಖಾನ್ ಪಠಾಣ್, ಅದರ ದೃಶ್ಯಗಳನ್ನು ಅವರು ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದ ಆ ಫೋಟೋ ಹಾಗೂ ವಿಡಿಯೋಗಳನ್ನು ಹೇಗೋ ಕೈತಪ್ಪಿ ವಾಟ್ಸ್ ಆಪ್ ಗ್ರೂಪ್ ಒಂದಕ್ಕೆ ಶೇರ್ ಮಾಡಿದ್ದಾರೆ. ನಂತರ ತಪ್ಪಿನ ಅರಿವಾಗಿ ಕೂಡಲೇ ಅವುಗಳನ್ನು ಗ್ರೂಪ್‌ನಿಂದ ಡಿಲೀಟ್ ಮಾಡಿದ್ದಾರೆ.
ಇದನ್ನು ಓದಿ : Health : ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಆದ್ರೆ ಅಷ್ಟರಲ್ಲಾಗಲೇ ಗ್ರೂಪ್‌ನಲ್ಲಿದ್ದ ಹಲವರು ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಂಚಿಕೆ ಮಾಡಿದ್ದರು. ಇದರಿಂದ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು. ಇದು ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿತ್ತು.
ಒಂದು ವಿಡಿಯೋದಲ್ಲಿ ಮದ್ಯಪಾನ ಮಾಡಿದ್ದ ನತ್ತೇಖಾನ್ ಪಠಾಣ್ ಅವರು ಮಹಿಳೆಯೊಂದಿಗೆ ಅಸಭ್ಯ ರೀತಿಯಲ್ಲಿರುವ ದೃಶ್ಯ ಇದೆ. ಆರು ವಿಡಿಯೋ ಹಾಗೂ ಹಲವು ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು.
ಆಕೆ ನನ್ನ ನಾಲ್ಕನೇ ಹೆಂಡತಿ, ಅದು ನನ್ನ ವೈಯಕ್ತಿಕ ವಿಷಯ ಎಂದು ನತ್ತೇಖಾನ್ ಪಠಾಣ್ ಹೇಳಿಕೊಂಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.