Wednesday, May 22, 2024
spot_img
spot_img
spot_img
spot_img
spot_img
spot_img

ಗುರುತೇ ಸಿಗದಷ್ಟು ಬದಲಾದ ಸ್ಟಾರ್ ಹಿರೋಯಿನ್ ; Video ವೀಕ್ಷಿಸಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ಟಾರ್​ ನಟರಿಗೆ ವಯಸ್ಸು 60 ಮೀರಿದರೂ ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಡುವ 20ರ ಆಸುಪಾಸಿನ ನಟಿಯರ ಜೊತೆ ಬೇಕಾದರೂ ರೊಮ್ಯಾನ್ಸ್​ ಮಾಡುತ್ತಾರೆ. ಆದರೆ ನಟಿಯರದ್ದು ಹಾಗಲ್ಲ. ವಯಸ್ಸು 30 ದಾಟುತ್ತಿದ್ದಂತೆಯೇ ಅವಕಾಶಗಳು ಕುಗ್ಗಲು ಶುರುವಾಗುತ್ತದೆ. ಇನ್ನು 40 ಮೀರಿದರೆ ಮುಗಿದೇ ಹೋಯ್ತು.

ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ನಟಿಯರು ಎನ್ನಿಸಿಕೊಳ್ಳಲು ಸಾಧ್ಯ ಎನ್ನುವ ಮಾತೂ ಇರುವುದರಿಂದ ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಎಲ್ಲದ್ದಕ್ಕೂ ಅಡ್ಜಸ್ಟ್​ ಮಾಡಿಕೊಳ್ಳುವ ಸ್ಥಿತಿ ನಟಿಯರದ್ದು.

ಇದನ್ನು ಓದಿ : ವಿದೇಶದಲ್ಲಿ ದುಡಿಯುತ್ತಿರುವ ಪತಿ : ಇತ್ತ ಇಬ್ಬರೊಂದಿಗೆ ಪತ್ನಿಯ ಅಕ್ರಮ ಸಂಬಂಧ ; ಮುಂದೆ.?

ಇದೀಗ ವೈರಲ್​ ಆಗಿರೋ ವಿಡಿಯೋದಲ್ಲಿ ಬಾಲಿವುಡ್​​ ನಟಿ ಭೂಮಿ ಪೆಡ್ನೇಕರ್​ ಅವರನ್ನು ನೋಡಿ ಈ ಮಾತು ಮತ್ತೆ ಚರ್ಚೆಗೆ ಬರುತ್ತಿದೆ.

ಬಾಲಿವುಡ್‌ನಲ್ಲಿ ನಟನೆಯ ಮೂಲಕ ಮಿಂಚಿದ್ದ ನಟಿ ಭೂಮಿ ಪೆಡ್ನೇಕರ್ (Bhumi Pednekar) ‘ದಮ್ ಲಗಾ ಕೆ ಹೈಶಾ’, ಟಾಯ್ಲೆಟ್ ಏಕ್ ಪ್ರೇಮ್ ಕಥಾ ಮತ್ತು ಶುಭ್ ಮಂಗಲ್ ಸಾವಧಾನ್ ಚಿತ್ರಗಳ ಮೂಲಕ ಅವರು ತಮ್ಮ ನಟನೆಯ ಮೂಲಕ ವಿಶೇಷ ಹೆಸರು ಹಾಗೂ ಹೆಗ್ಗಳಿಕೆ ಗಳಿಸಿದ್ದಾರೆ.

ಹೆಚ್ಚಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೆವರು ಸುರಿಸಿ ಕೇವಲ 4 ತಿಂಗಳಲ್ಲಿ 32 ಕೆಜಿ ತೂಕ ಇಳಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಆದರೆ ದೇಹ ಸಣ್ಣಗಾಗಿಸುವ ಭರದಲ್ಲಿ, ಭೂಮಿ ಅವರು ತಮ್ಮ ಚಾರ್ಮ್​ ಅನ್ನು ಕಳೆದುಕೊಂಡಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಮಾತು.

ಅಷ್ಟೇ ಅಲ್ಲದೇ ಇಂದು ನಟಿಯರುವಬಾಲಿವುಡ್​ ಪ್ರಪಂಚದಲ್ಲಿ ಬೇಡಿಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡುತ್ತಾರೆ. ಇದೇ ಕಾರಣಕ್ಕೆ ಎಲ್ಲದಕ್ಕೂ ಒಕೆ ಒಕೆ ಎನ್ನುವ ಮನಸ್ಥಿತಿಯನ್ನೂ ಬೆಳೆಸಿಕೊಳ್ಳುವುದರ ಜೊತೆ, ದೇಹ ಪ್ರದರ್ಶನಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಿದ್ದಾರೆ.

ಇದನ್ನು ಓದಿ : Video : ಚುನಾವಣಾ ಪ್ರಚಾರದ ವೇಳೆ ದಿಢೀರನೆ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ ; ತುರ್ತು ಚಿಕಿತ್ಸೆ.!

ಇದೀಗ ವೈರಲ್​ ಆಗಿರೋ ವಿಡಿಯೋದಲ್ಲಿ ಭೂಮಿ ಅವರನ್ನು ನೋಡಿ ಫ್ಯಾನ್ಸ್​ ದಂದಾಗಿದ್ದಾರೆ. ಈಕೆ ಫ್ಯಾಷನ್​ ಈವೆಂಟ್​ ಒಂದರಲ್ಲಿ ಭಾಗವಹಿಸಿರುವ ಪರಿ, ಹಲವರು ಈಕೆ ನಿಜಕ್ಕೂ ಭೂಮಿ ಹೌದಾ ಎಂದು ಪ್ರಶ್ನಿಸುತ್ತಿದ್ದಾರೆ. ಆಕೆ ತೊಟ್ಟ ಬಟ್ಟೆ ಹಾಗೂ ಕಳಾಹೀನ ಮುಖವನ್ನು ನೋಡಿ ನಟಿಯರಿಗೆ ಇವೆಲ್ಲಾ ಬೇಕಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

spot_img
spot_img
spot_img
- Advertisment -spot_img